Advertisement

Bengaluru: ಎರಡು ದಿನಗಳಿಂದ ಭಾರೀ ಸಂಚಾರ ದಟ್ಟಣೆ

10:57 PM Sep 28, 2023 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿಯ ಬಹುತೇಕ ರಸ್ತೆಗಳಲ್ಲಿ ಎರಡು ದಿನಗಳಿಂದ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರ ವಿಭಾಗದ ಪೊಲೀಸರು ಹರಸಾಹಸಪಡುತ್ತಿದ್ದಾರೆ.

Advertisement

ಸೆ.28ರಿಂದ ಅ.2ರ ವರೆಗೆ 5 ದಿನಗಳ ಕಾಲ ಸಾಲು ಸಾಲು ರಜೆಯಿರುವ ಹಿನ್ನೆಲೆಯಲ್ಲಿ ಬಹುತೇಕರು ಬೆಂಗಳೂರಿನಿಂದ ಊರಿನತ್ತ ಮುಖ ಮಾಡುತ್ತಿದ್ದಾರೆ. ಗಣೇಶ ವಿಸರ್ಜನೆ ಮತ್ತು ಜನ ಸಂಚಾರ ಹೆಚ್ಚಾಗುತ್ತಿದೆ. ಪರಿಣಾಮ ಬುಧವಾರ ಹಾಗೂ ಗುರುವಾರ ಸಂಜೆ, ಬೆಂಗಳೂರು ಟೆಕ್‌ ಕಾರಿಡಾರ್‌ನ ಹೊರ ವರ್ತುಲ ರಸ್ತೆಯು ಭಾರಿ ಸಂಚಾರ ದಟ್ಟಣೆಗೆ ಸಾಕ್ಷಿಯಾಯಿತು. ಬುಧವಾರ ಸಾಯಂಕಾಲ 4ರಿಂದ ರಾತ್ರಿ 8 ಗಂಟೆಯವರೆಗೆ ತೀವ್ರ ಟ್ರಾಫಿಕ್‌ ದಟ್ಟಣೆ ಉಂಟಾಗಿದೆ.

ಗುರುವಾರ ಕೊಂಚ ಸಂಚಾರ ದಟ್ಟಣೆ ತಗ್ಗಿದ್ದರೂ ಸಹಜ ಸ್ಥಿತಿಗೆ ಬಂದಿರಲಿಲ್ಲ. ಮೆಜೆಸ್ಟಿಕ್‌, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಎಂಜಿ ರಸ್ತೆ, ರೆಸಿಡೆನ್ಸಿ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ಸಹಿತ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next