ಬೆಂಗಳೂರು: ಹೊಸ ಗುಡ್ಡದಹಳ್ಳಿಯಲ್ಲಿ ನಡೆದ ಬೆಂಕಿ ಅವಘಡದಿಂದ ಕಟ್ಟಡ, ಪೀಠೊಪಕರಣಗಳು, ವಾಹನಗಳು ಮಾತ್ರ ಸುಟ್ಟು ಕರಕಲಾಗಿಲ್ಲ. ಹತ್ತಾರು ಕುಟುಂಬಗಳ ಬದುಕನ್ನೇ ಮೂರಾಬಟ್ಟೆಯಾಗಿಸಿದೆ. ಒಬ್ಬರು ಮನೆ, ಪೀಠೊಪಕರಣಗಳು, ಚಿನ್ನಾಭರಣಗಳನ್ನು ಕಳೆದು ಕೊಂಡರೆ, ಮತ್ತೂಬ್ಬರು ಮಗಳಮದುವೆಗಾಗಿ ತಂದಿಟ್ಟಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಇನ್ನೊಬ್ಬರ ಮನೆಯ ಕುಡಿಯುವ ನೀರಿನ ಟ್ಯಾಂಕ್‌ಗಳೇ ಬೆಂಕಿ ತುತ್ತಾಗಿವೆ. ಇನ್ನು ಕೆಲವರು ಮನೆಗಳು ಸಂಪೂರ್ಣ ಸುಟ್ಟುಹೋಗಿವೆ. ಗೋಡನ್‌ನ ಬೆಂಕಿಯ ಕಿನ್ನಾಲಿಗೆ ಮದುವೆ ಮನೆಹಾಗೂ ಕುಟುಂಬ ಸದಸ್ಯರ ಮನಸ್ಸುಗಳನ್ನೇ ಸುಟ್ಟಹಾಕಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮನೆ ಮಾಲೀಕ ಹಾಗೂ ಫರ್ನಿಚರ್ ತಯಾರಿಕಾ ಕಾರ್ಖಾನೆ ಮಾಲೀಕಮಣಿ, 2003ರಿಂದಲೂಇಲ್ಲಿ ವಾಸ ಮಾಡಿಕೊಂಡಿದ್ದೇನೆ. ಮೂರ ಮನೆಗಳನ್ನು ಭೋಗ್ಯಕ್ಕೆ ನೀಡಲಾಗಿದೆ.
ಮೊದಲಅಂತಸ್ತಿನಲ್ಲಿಫರ್ನಿ ಚರ್‌ಕುರ್ಚಿಗಳಕಾರ್ಖಾನೆ ಯಿದೆ. ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಮನೆಗೆ ಬಂದು ನೋಡಿದಾಗ 3ನೇ ಮಹಡಿಯಲ್ಲಿ ಶೇಖರಿಸಿದ್ದ 400 ಕುರ್ಚಿಗಳು ಸೇರಿ ಪೀಠೊಪಕರಣ ಹಾನಿ ಗೀಡಾಗಿವೆ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯಲ್ಲಿ ಇದ್ದವರನ್ನು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಾಂತರ ಮಾಡಿದರು. ಎರಡನೇ ಮಹಡಿಯ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬುಧವಾರ ನನ್ನ ಮಗಳ ಮದುವೆ ಇತ್ತು. ಅದಕ್ಕಾಗಿ ತಂದಿದ್ದ ಎಲ್ಲ ವಸ್ತುಗಳು ಬೆಂಕಿನುಂಗಿಕೊಂಡಿದೆ. ಆದರೂ ಗಂಡಿನಮನೆಯವರಿಗೆ ಒಪ್ಪಿಸಿ ಸರಳವಾಗಿ ಮದುವೆ ಮಾಡಿಕೊಟ್ಟಿದ್ದೇವೆ. ಮನೆ ಮೇಲ್ಭಾಗದಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್‌ಗಳು ಸುಟ್ಟುಹೋಗಿವೆ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಿದ್ದೇವೆ. ಕಣ್ಣೀರಲ್ಲೇ ಮಗಳ ಮದುವೆ ಮಾಡಲಾಗಿದೆ. 18 ಲಕ್ಷ ಲೋನ್ ಕಟ್ಟಬೇಕಿದೆ ಈಹಂತದಲ್ಲಿ ದುರಂತ ಸಂಭವಿಸಿರುವುದು ನೋವು ತಂದಿದೆ ಎಂದು ಭಾವಕರಾದರು.
ಹರ್ಷಾ ಎಂಬವರ ಮನೆ ಕೂಡ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅವರ ವೃತ್ತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆಗಳು ಬೆಂಕಿಯಲ್ಲಿ ಕರಕಲಾಗಿವೆ. “ಮಧ್ಯಾಹ್ನ ಎರಡು ಗಂಟೆಗೆ ಮಾಹಿತಿ ಸಿಕ್ಕಿತ್ತು. ಆಫೀಸ್‌ನಿಂದಕೂಡಲೇಬಂದೆ, ಆದರೆ, ಒಳಗಡೆ ಯಾರನ್ನು ಬಿಡಲಿಲ್ಲ. ರಾತ್ರಿ ಪೂರ್ತಿ ಫುಟ್‌ಪಾತ್‌ನಲ್ಲಿ ಮಲಗಿದ್ದೆ. ಟಿವಿ, ಫ್ರೀಜ್, ಬೀರು ಎಲ್ಲವೂ ಕಳೆದುಕೊಂಡಿದ್ದೇನೆ . ಎಂಟು ವರ್ಷ ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಖರೀದಿಸಿದ ವಸ್ತುಗಳು ಕಣ್ಣ ಮುಂದೆಯೇ ಸುಟ್ಟಿವೆ. ಈಗ ಎಂಟು ವರ್ಷಗಳ ಹಿಂದಕ್ಕೆ ಹೋಗಿದ್ದೇವೆ. ಹಣ ಕೂಡ ಇಲ್ಲ. ಆಫೀಸ್‌ನಲ್ಲಿ ಯಾರಾದರೂ ಕೊಟ್ಟರೆ ಬದುಕಬೇಕು ಎಂದು ಹರ್ಷಾ ಕಣ್ಣೀರು ಸುರಿಸಿದರು.
ಬೆಂಕಿಯಲ್ಲಿ ಬೆಂದ 80 ಸಾವಿರ ರೂ.: ಪ್ರಸನ್ನ ಮತ್ತು ಅವರ ಸಹೋದರಿ ಸುನೀತಾ ಅವರ ಮನೆ ಕೂಡ ಬೆಂಕಿಯ ಕಿನ್ನಾಲಿಗೆ ಬಲಿಯಾಗಿದೆ. “ಮನೆಯಲ್ಲಿದ್ದ ದಾಖಲೆಗಳು, ಬಟ್ಟೆಗಳು, ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ. 80 ಸಾವಿರ ರೂ. ನಗದು, ಚಿನ್ನಾಭರಣ, ಟಿವಿ, ಫ್ರೀಜ್ ಕಳೆದುಕೊಂಡಿದ್ದೇವೆ. ರಾತ್ರಿ ಮತ್ತೂಬ್ಬ ಸಹೋದರಿ ಮನೆಯಲ್ಲಿ ಮಲಗಿದ್ದೇವು. ಹಾಕಿಕೊಳ್ಳಲು ಬಟ್ಟೆಗಳು ಇಲ್ಲ ಎಂದು ಅಣ್ಣ-ತಂಗಿ ಬೇಸರ ವ್ಯಕ್ತಪಡಿಸಿದರು.
ಇನ್ನು ರಾಜು ಅವರ ಮನೆ ಕೂಡ ಬೆಂಕಿಗೆ ತುತ್ತಾಗಿದೆ.ಬೆಂಕಿಕಾವಿಗೆ ಮನೆಯ ಹಿಂಬದಿಯ ಗೋಡೆ ಬಿರುಕು ಬಿಟ್ಟಿದ್ದು,ಕಿಟಕಿಯ ಗಾಜುಗಳು ಒಡೆದು ವಸ್ತುಗಳು ಸುಟ್ಟು ಹೋಗಿವೆ.
ಪಾರಿವಾಳ ರಕ್ಷಿಸಿದ ಸಿಬ್ಬಂದಿ : ಗೋಡೌನ್ ಸಮೀಪದ ಕಟ್ಟಡದಲ್ಲಿ ನಿವಾಸಿಯೊಬ್ಬರು 150ಕ್ಕೂ ಅಧಿಕ ಪಾರಿವಾಳಗಳನ್ನು ಸಾಕಿದ್ದರು. ಆದರೆ,ಕೆಲ ಪಾರಿವಾಳಗಳು ಬೆಂಕಿಗೆ ಬೆಂದು ಹೋಗಿದ್ದವು. ಇನ್ನುಳಿದವು ಪ್ರಾಣ ರಕ್ಷಣೆಗಾಗಿ ಜೋರಾಗಿ ಕೂಗಿಕೊಳ್ಳುತ್ತಿದ್ದವು. ಅದನ್ನುಕಂಡ ಅಗ್ನಿಶಾಮಕ ದಳದ ಅಧಿಕಾರಿ-ಸಿಬ್ಬಂದಿ, ಸುಮಾರು 100ಕ್ಕೂ ಅಧಿಕ ಪಾರಿವಾಳಗಳನ್ನು ರಕ್ಷಿಸಿ ಹಾರಿಸಿದರು.
ರಾಸಾಯನಿಕವಸ್ತುಗಳು : ಅಸಿಟೋನ್, ಮಿಥೈನ್‌ಕ್ಲೋರೈಡ್, ಕ್ಲೋರಫಾರಂ, ಆಲ್ಕೋಹಾಲ್‌ಕೆಮಿಕಲ್, ಟಿಎಚ್‌ಎಫ್, ಟ್ಯೂನಿ, ಐಎಸ್‌ಒ ಪ್ರೊಪೈಲ್ ಆಲ್ಕೋಹಾಲ್, ಎಕ್ಸಿನಾ,ಬೆನ್ಜಿ, ಥಿನ್ನರ್, ಹೆಟಾಪಿನ್, ಬೂಟನಾಲ್ ಸೇರಿ 16 ಬಗೆಯ ರಾಸಾಯನಿಕ ವಸ್ತುಗಳನ್ನು ಗೋಡೌನ್‌ನಲ್ಲಿ ಸಂಗ್ರಹಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.
–ಮೋಹನ್ ಭದ್ರಾವತಿ