ಬೆಂಗಳೂರು : ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದ್ದು, ಜನ 5 ನಿಮಿಷದಲ್ಲಿ ಕ್ರಮಿಸಬೇಕಾದ ಸ್ಥಳವನ್ನು 30- 40 ನಿಮಿಷ ತೆಗೆದುಕೊಳ್ಳುತ್ತದೆ, ಟ್ರಾಫಿಕ್ ಕಿರಿಕಿರಿಯಿಂದ ಅದೆಷ್ಟೋ ಜನರು ತೊಂದರೆ ಅನುಭವಿಸಿದ್ದಾರೆ. ಎಷ್ಟೋ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಟ್ರಾಫಿಕ್ ಸಮಸ್ಯೆಯಿಂದ ಕೆಲವೊಬ್ಬರು ಜೀವ ಕಳೆದುಕೊಂಡಿದ್ದೂ ಇದೆ, ಇನ್ನು ಕೆಲವು ಕಡೆ ಸರಿಯಾದ ಸಮಯಕ್ಕೆ ವೈದ್ಯರು ಸಿಗದೆ ರೋಗಿಗಳು ಪ್ರಾಣವನ್ನು ಕಳೆದುಕೊಂಡಿರುವ ನಿದರ್ಶನವೂ ಇದೆ, ಆದರೆ ಬೆಂಗಳೂರಿನ ವೈದ್ಯರೊಬ್ಬರು ಮಾಡಿರುವ ಕೆಲಸ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ನಿಜಕ್ಕೂ ಹೌದು.. ರೋಗಿಯೊಬ್ಬರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲು ಬಂದು ಟ್ರಾಫಿಕ್ ನಲ್ಲಿ ಸಿಲುಕಿದ್ದ ವೈದ್ಯರೊಬ್ಬರು ತಾವು ತಂದ ಕಾರನ್ನು ರಸ್ತೆ ಬದಿ ನಿಲ್ಲಿಸಿ 3 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಓಡಿ ಬಂದು ರೋಗಿಗೆ ಚಿಕಿತ್ಸೆ ನೀಡಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಘಟನೆ ಏನು : ರೋಗಿಯೊಬ್ಬರಿಗೆ ತುರ್ತು ಚಿಕಿತ್ಸೆ ನೀಡಲು ಸರ್ಜಾಪುರದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಾರಿನಲ್ಲಿ ಹೊರಟಿದ್ದ ವೈದ್ಯರಾದ ಡಾ, ಗೋವಿಂದ ನಂದಕುಮಾರ್ ಅವರು ಸರ್ಜಾಪುರ – ಮಾರತಹಳ್ಳಿ ನಡುವೆ ಟ್ರಾಫಿಕ್ ನಲ್ಲಿ ಸಿಲುಕಿದ್ದಾರೆ, ಆದರೆ ರೋಗಿಗೆ ತುರ್ತು ಚಿಕಿತ್ಸೆ ನೀಡಬೇಕಾಗಿದ್ದರಿಂದ ವೈದ್ಯರು ಗೂಗಲ್ ಮ್ಯಾಪ್ ನಲ್ಲಿ ಎಷ್ಟು ದೂರ ಇದೆ ಎಂದು ನೋಡಿದಾಗ ಕಾರಿನಲ್ಲಿ ಹೋದರೆ ಕಡಿಮೆಯೆಂದರೂ 30 ರಿಂದ 40 ನಿಮಿಷ ಬೇಕಾಗುತ್ತದೆ, ಆದರೆ ನಡೆದು ಸಾಗಿದರೆ 5 ರಿಂದ 10 ನಿಮಿಷದಲ್ಲಿ ತಲುಪಬಹುದು ಎಂದು ತೋರಿಸಿದೆ ಇದನ್ನು ನೋಡಿದ ವೈದ್ಯರು ಕಾರನ್ನು ಅಲ್ಲೇ ರಸ್ತೆ ಬದಿಯಲ್ಲಿ ಬಿಟ್ಟು ಆಸ್ಪತ್ರೆಗೆ ಓಡೋಡಿ ಬಂದು ನಿಗದಿತ ಸಮಯಕ್ಕೆ ತಲುಪಿ ರೋಗಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ರೋಗಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೈದ್ಯರು ತಮ್ಮ ಮೊಬೈಲ್ ನಲ್ಲಿ ಆಸ್ಪತ್ರೆಗೆ ಒಡುವ ದೃಶ್ಯವನ್ನು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಇದೀಗ ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು ವೈದ್ಯರ ಕಾರ್ಯಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತು ಬಾರಿ ಆಕ್ರೋಶವೂ ವ್ಯಕ್ತವಾಗಿದೆ.