ಬೆಂಗಳೂರು: ಪಕ್ಕದ ಮನೆ ಯುವತಿಯ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾನೆಎಂಬ ಕಾರಣಕ್ಕೆ ಗೋವಿಂದರಾಜು (20)ಎಂಬಾತನನ್ನು ಅಪಹರಿಸಿ ಕೊಲೆಗೈದಿರುವಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಕುಟುಂಬಸ್ಥರು ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ.
ಮತ್ತೂಂದೆಡೆ ಪ್ರಕರಣ ಸಂಬಂಧ ಅನಿಲ್(30) ಎಂಬಾತನನ್ನು ವಶಕ್ಕೆಪಡೆದು ವಿಚಾರಣೆ ನಡೆಸಲಾಗಿದೆ.
ಮತ್ತಿಕೆರೆ ನಿವಾಸಿ ಗೋವಿಂದರಾಜು ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಪಕ್ಕದ ಮನೆಯ 20 ವರ್ಷದ ಯುವತಿ ಜತೆ ಸ್ನೇಹವಿಟ್ಟುಕೊಂಡಿದ್ದ. ಇಬ್ಬರೂ ಪರಸ್ಪರಸಂದೇಶ ಕಳುಹಿಸುತ್ತಿದ್ದರು. ಇತ್ತೀಚೆಗೆಯುವತಿ ಮನೆಯಲ್ಲೇ ಮೊಬೈಲ್ ಬಿಟ್ಟು ಹೋಗಿದ್ದರು. ಅದನ್ನು ಕುಟುಂಬದ ಸದಸ್ಯರು ಗಮನಿಸಿದಾಗ ಗೋವಿಂದರಾಜು ಸಂದೇಶ ಕಳುಹಿಸಿರುವುದು ಗೊತ್ತಾಗಿದೆ. ಅದರಿಂದ ಆಕ್ರೋಶಗೊಂಡ ಅನಿಲ್, ಗೋವಿಂದರಾಜುನನ್ನು ಮಾತ ನಾಡ ಲೆಂದು ಕರೆದುಕೊಂಡು ಹೋಗಿದ್ದಾನೆ. ನಂತರ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಬಳಿಕ ಸಂಜೆ ವೇಳೆಗೆ ತನ್ನ ತಾಯಿಗೆ ಕರೆ ಮಾಡಿದ ಅನಿಲ್, ಗೋವಿಂದ ರಾಜು ಮೇಲೆ ಹಲ್ಲೆ ನಡೆಸಿದ್ದೇನೆ ಎಂದಿದ್ದಾನೆ.
ಮತ್ತೂಂದೆಡೆ ಗೋವಿಂದರಾಜು ಪೋಷಕರು, ಯುವತಿಯ ಸಂಬಂಧಿಕರು ಗೋವಿಂದರಾಜುನನ್ನು ಅಪಹರಿಸಿ ಅರಣ್ಯ ಪ್ರದೇಶದಲ್ಲಿ ಮೃತದೇಹ ಎಸೆದಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ಸಂಬಂಧ ಅನಿಲ್‌ನನ್ನು ವಶಕ್ಕೆ ಪಡೆಯಲಾಗಿದೆ.
ಮತ್ತೂಂದೆಡೆ ಈ ವಿಚಾರ ತಿಳಿದ ಗೋವಿಂದರಾಜುಪೋಷಕರು ಯಶವಂತಪುರ ಠಾಣೆಗೆಬಂದು, ಪೊಲೀಸರ ಜತೆ ಹೋಗುತ್ತಿದ್ದಅನಿಲ್ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ.ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.