Advertisement

ಈತನ ಕಳ್ಳತನಕ್ಕೆ ತಂದೆ ತಾಯಿಯೇ ಪ್ರೇರಣೆ : ಬರೋಬ್ಬರಿ ಎರಡು ವರ್ಷದ ಬಳಿಕ ಸೆರೆ

09:48 PM Apr 18, 2022 | Team Udayavani |

ಬೆಂಗಳೂರು: ತಂದೆ-ತಾಯಿಯಿಂದ ಕಳ್ಳತನ ಮಾಡುವುದನ್ನು ಕಲಿತು ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು 2 ವರ್ಷದ ಬಳಿಕ ಬಂಧಿಸುವಲ್ಲಿ ಯಲಹಂಕ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಉತ್ತರ ಪ್ರದೇಶ ಗಾಜಾಯಾಬಾದ್‌ನ ಅಕ್ಬರ್ (36) ಬಂಧಿತ. ಆರೋಪಿಯಿಂದ 7.2 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಅಕ್ಬರ್ ತಂದೆ ಸುಲ್ತಾನ್‌ ಸೈಫಿ ವೃತ್ತಿಪರ ಕಳ್ಳನಾಗಿದ್ದ. ಆತನ ತಂದೆ ಕಳ್ಳತನ ಮಾಡಿದ ವಸ್ತುಗಳನ್ನು ತಾಯಿ ರಜಿಯಾ ಮಾರಾಟ ಮಾಡುತ್ತಿದ್ದಳು. ಸದ್ಯ ಇಬ್ಬರು ಮೃತಪಟ್ಟಿದ್ದಾರೆ.

ದೆಹಲಿಯಿಂದ ಮಹಾರಾಷ್ಟ್ರದ ಮುಂಬೈನ ಅಂಧೇರಿ ಮಾಡಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ 5ನೇ ತರಗತಿ ವ್ಯಾಸಂಗ ಮಾಡಿ ಅರ್ಧಕ್ಕೆ ವ್ಯಾಸಂಗ ಮೊಟಕುಗೊಳಿಸಿ, ಪಾಲಕರನ್ನು ನೋಡಿ ಕಳ್ಳತನಕ್ಕೆ ಇಳಿದಿದ್ದ. ದೇಶದ ಪ್ರಮುಖ ನಗರಗಳಿಗೆ ರೈಲಿನಲ್ಲಿ ಹೋಗಿ ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿ ರೈಲಿನಲ್ಲಿ ಉತ್ತರ ಪ್ರದೇಶಕ್ಕೆ ವಾಪಾಸ್ಸಾಗುತ್ತಿದ್ದ.

ಇದನ್ನೂ ಓದಿ : ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ: ಸೆಕ್ಷನ್‌ 5ರ ಜಾರಿಗೆ ಅನುಮತಿಸಿ ಹೈಕೋರ್ಟ್‌ ಆದೇಶ

Advertisement

ಬೆರಳಚ್ಚು ಕೊಟ್ಟ ಸುಳಿವು: ಯಲಹಂಕ ಉಪನಗರದ ನಿವಾಸಿಯೊಬ್ಬರು 2020 ಫೆ.13ರಂದು ಸಂಜೆ ಮನೆಗೆ ಬೀಗ ಹಾಕಿ ಮಕ್ಕಳನ್ನು ಟೂಷನ್‌ಗೆ ಬಿಡಲು ಹೋಗಿದ್ದರು. ಆ ವೇಳೆ ಇವರ ಮನೆಯ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ್ದ ಅಕ್ಬರ್, 400 ಗ್ರಾಂ. ಚಿನ್ನದ ಒಡವೆಗಳು, 2 ಲಕ್ಷ ರೂ.ನಗದು ದೋಚಿದ್ದ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಯಲಹಂಕ ಉಪನಗರ ಠಾಣೆ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿ ಪತ್ತೆಯಾದ ಬೆರಳಚ್ಚು ಸಂಗ್ರಹಿಸಿದ್ದರು. ಹಳೆ ಆರೋಪಿಗಳ ಬೆರಳಚ್ಚಿಗೆ ಹೋಲಿಕೆ ಮಾಡಿ ನೋಡಿದಾಗ ಅಕºರ್‌ ಸುಳಿವು ಸಿಕ್ಕಿತ್ತು. ಪ್ರಕರಣದ ನಡೆದ 2 ವರ್ಷಗಳ ಬಳಿಕ ಆತ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಇರುವುದನ್ನು ಪತ್ತೆಹಚ್ಚಿದ ಪೊಲೀಸರು, ಅಲ್ಲಿಗೆ ತೆರಳಿ ಆತನನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next