Advertisement

Bengaluru-Chennai ಬುಲೆಟ್‌ ರೈಲಿಗೆ ವೇಗ; ಸದ್ಯದಲ್ಲೇ ಡ್ರೋನ್‌ ಸಮೀಕ್ಷೆ ಆರಂಭ

12:43 AM Aug 09, 2023 | Team Udayavani |

ಹೊಸದಿಲ್ಲಿ: ದಕ್ಷಿಣದ ಎರಡು ರಾಜ್ಯಗಳ ರಾಜಧಾನಿಗಳ ನಡುವೆ ಸಂಪರ್ಕ ಕಲ್ಪಿಸುವ ಮೈಸೂರು- ಬೆಂಗಳೂರು-ಚೆನ್ನೈ ಬುಲೆಟ್‌ ರೈಲು ಯೋಜನೆಯು ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಪ್ರಸ್ತುತ ಭೂಮಿಯ ಸರ್ವೇ ಪ್ರಕ್ರಿಯೆ ಭರದಿಂದ ಸಾಗಿದ್ದು, ಸದ್ಯದಲ್ಲೇ ಡ್ರೋನ್‌ ಸಮೀಕ್ಷೆಯೂ ಆರಂಭವಾಗಲಿದೆ.

Advertisement

ಸಮಗ್ರವಾಗಿ ಉಪಗ್ರಹ ಮತ್ತು ಭೂಮಿಯ ಸರ್ವೇ ಕೈಗೊಳ್ಳುವ ಕೆಲಸವನ್ನು ಹೈದರಾಬಾದ್‌ ಮೂಲದ ಕಂಪೆನಿಗೆ ವಹಿಸಲಾಗಿದೆ. ಸರ್ವೇ ಕಾರ್ಯ ಪೂರ್ಣಗೊಂಡ ಬಳಿಕ ವಿಸ್ತೃತ ಯೋಜನಾ ವರದಿ(ಡಿಪಿಆರ್‌)ಯ ಕರಡನ್ನು ಸಿದ್ಧಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಚೆನ್ನೈಯಿಂದ ಕೋಲಾರದವರೆಗಿನ ಭೂಮಿಯ ಸರ್ವೇ ಕಾರ್ಯ ಪೂರ್ಣಗೊಂಡಿದೆ.

ಬುಲೆಟ್‌ ರೈಲು ಯೋಜನೆಯು ಸಾಕಾರಗೊಂಡರೆ ಮೈಸೂರು ಮತ್ತು ಚೆನ್ನೈಯ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಇಳಿಕೆಯಾಗಲಿದೆ. 435 ಕಿ.ಮೀ. ದೂರವನ್ನು ಕೇವಲ 1.10 ಗಂಟೆಗಳಲ್ಲಿ ಕ್ರಮಿಸಲು ಸಾಧ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next