Advertisement
ತೀವ್ರ ಪೈಪೋಟಿಯಿಂದ ಕೂಡಿದ ಈ ಹಣಾಹಣಿಯಲ್ಲಿ ಬೆಂಗಳೂರು ತಂಡ 35-33 ಅಂಕಗಳಿಂದ ಯು ಮುಂಬಾ ತಂಡವನ್ನು ಮಣಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಆತಿಥೇಯ ಜೈಪುರ ವಿರುದ್ಧ 51-31 ಅಂತರದ ಭರ್ಜರಿ ಜಯ ಸಾಧಿಸಿತು.
ಈ ಜಯದೊಂದಿಗೆ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. ಒಟ್ಟು 19 ಪಂದ್ಯ ವಾಡಿರುವ ಬೆಂಗಳೂರು, 10 ಜಯ, 8 ಸೋಲು, 1 ಟೈನೊಂದಿಗೆ 58 ಅಂಕ ಗಳಿಸಿದೆ. ಬೆಂಗಳೂರಿಗೆ ಇನ್ನು 3 ಪಂದ್ಯ ಬಾಕಿ ಇದ್ದು, ಕನಿಷ್ಠ ಎರಡರಲ್ಲಿ ಗೆದ್ದರೆ ಪ್ಲೇ-ಆಫ್ ಖಾತ್ರಿಯಾಗಲಿದೆ. ರೋಚಕ ಹಣಾಹಣಿ
ಎರಡೂ ತಂಡಗಳು ಆರಂಭದಿಂ ದಲೇ ಜಿದ್ದಾಜಿದ್ದಿ ಹೋರಾಟ ನಡೆಸಿ ದವು. ಕಡೆಯ 5 ನಿಮಿಷದಲ್ಲಿ ಬುಲ್ಸ್ ಮೇಲುಗೈ ಸಾಧಿಸಿ ಜಯ ಒಲಿಸಿಕೊಂಡಿತು. ಬುಲ್ಸ್ ಪರ ಪವನ್ ಸೆಹ್ರಾವತ್ ಮತ್ತೆ ಮಿಂಚಿದರು. 17 ಬಾರಿ ದಾಳಿ ನಡೆಸಿದ ಅವರು 10 ಅಂಕ ಗಳಿಸಿದರು. ತಂಡದ ರಕ್ಷಣಾ ವಿಭಾಗದಲ್ಲಿ ಮೆರೆದಿದ್ದು ಸೌರಭ್ ನಂದಲ್. ಅವರು 9 ಯತ್ನದಲ್ಲಿ 5 ಅಂಕ ಸಂಪಾದಿಸಿದರು. ಮುಂಬಾ ಪರ ಅಭಿಷೇಕ್ ಸಿಂಗ್ ದಾಳಿ ಉತ್ತಮ ಮಟ್ಟದಲ್ಲಿತ್ತು (10 ಅಂಕ). ಇದರೊಂದಿಗೆ ಜೈಪುರ ಚರಣ ಕೊನೆಗೊಂಡಿತು. ಶನಿವಾರದಿಂದ ಪಂಚಕುಲ ಆವೃತ್ತಿ ಆರಂಭವಾಗಲಿದೆ.