Advertisement
ಬೆಂಗಳೂರು ತಂಡದ ಪರ ಎಂದಿನಂತೆ ಪವನ್ ಸೆಹ್ರಾವತ್ ಮಿಂಚಿದರು. ಮತ್ತೂಂದು ಕಡೆ ನಾಯಕ ರೋಹಿತ್ ಕುಮಾರ್ ಅವರ ವೈಫಲ್ಯವೂ ಮುಂದುವರಿಯಿತು. 21 ಬಾರಿ ಎದುರಾಳಿ ಮುಂಬಾ ಕೋಟೆಯೊಳಗೆ ಪವನ್ ನುಗ್ಗಿ 11 ಅಂಕ ಗಳಿಸಿದರು. ರೋಹಿತ್ ಕುಮಾರ್ 7 ಬಾರಿ ಎದುರಾಳಿ ಅಂಕಣಕ್ಕೆ ತೆರಳಿದರೂ ಸಂಪೂರ್ಣ ವೈಫಲ್ಯ ಕಂಡರು.
ಬೆಂಗಳೂರಿನ ಸಂಘಟಿತ ಆಟದೆದುರು ಆತಿಥೇಯ ಮುಂಬಾ ಮುಗ್ಗರಿಸಿತು. ಪೂರ್ಣ ಹೋರಾಟ ನಡೆಸಿದರೂ, ಅದಕ್ಕೆ ಬೆಂಗಳೂರನ್ನು ಮೀರಿ ನಿಲ್ಲಲು ಸಾಧ್ಯವಾಗಲಿಲ್ಲ. ದಾಳಿಯಲ್ಲಿ ಅರ್ಜುನ್ ದೇಶ್ವಾಲ್ ಮಿಂಚಿ 6 ಅಂಕ ಗಳಿಸಿದರು. ರಕ್ಷಣೆಯಲ್ಲಿ ಅತ್ಯುತ್ತಮ ಹೆಸರಾದ ಫಜಲ್ ಅಟ್ರಾಚಲಿ ಭಾನುವಾರ ತಮ್ಮ ಎಂದಿನ ತಾಕತ್ತು ತೋರಲಿಲ್ಲ.
Related Articles
ಮೊದಲ ಪಂದ್ಯದಲ್ಲಿ ರೈಡರ್‌ಗಳಾದ ಚಂದ್ರನ್ ರಂಜಿತ್ (11 ಅಂಕ) ಹಾಗೂ ನವೀನ್ ಕುಮಾರ್ (10 ಅಂಕ) ಅಬ್ಬರದ ಆಟದ ನೆರವಿನಿಂದ ದಬಾಂಗ್ ಡೆಲ್ಲಿ ತಂಡ 41-21 ಅಂಕಗಳ ಅಂತರದಿಂದ ಹರ್ಯಾಣ ಸ್ಟೀಲರ್ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಮೂರೂ ಪಂದ್ಯಗಳಲ್ಲೂ ಡೆಲ್ಲಿ ಗೆಲುವು ಸಾಧಿಸಿತು ಎನ್ನುವುದು ವಿಶೇಷ.
Advertisement
ಡೆಲ್ಲಿ ಪರ ರಂಜಿತ್ ಮೊದಲ ಸಲ ಪೂರ್ಣಕಾಲಿಕ ರೈಡರ್ ಆಗಿ ಮಿಂಚಿದರು. ರೈಡಿಂಗ್‌ನಲ್ಲಿ 9 ಅಂಕವನ್ನು ತಂದ ಅವರು 2 ಅಂಕವನ್ನು ಬೋನಸ್ ಮೂಲಕ ತರುವಲ್ಲಿ ಯಶಸ್ವಿಯಾದರು. ನವೀನ್ ಕುಮಾರ್ ಕೂಡ ಅಷ್ಟೇ ಚಾಕಚಕ್ಯತೆಯಿಂದ ರೈಡಿಂಗ್ ನಿರ್ವಹಿಸಿದರು. 9 ಅಂಕವನ್ನು ರೈಡಿಂಗ್‌ನಿಂದ ನವೀನ್ ತಂದರೆ, ಒಂದು ಅಂಕ ಬೋನಸ್ ರೂಪದಲ್ಲಿ ತಂಡಕ್ಕೆ ಸಿಕ್ಕಿತು. ಟ್ಯಾಕಲ್‌ನಲ್ಲಿ ಸಯ್ಯದ್ ಘಫಾರಿ (4 ಅಂಕ), ಜೋಗಿಂದರ್ (3 ಅಂಕ) ಹಾಗೂ ವಿಶಾಲ್ ಮಾನೆ (2 ಅಂಕ) ಗಮನ ಸೆಳೆದರು. ಇವರ ಆಟದ ಎದುರು ಹರ್ಯಾಣ ಸಂಪೂರ್ಣ ಶರಣಾಗಬೇಕಾಯಿತು.