Advertisement

ತವರಿನ ವೀಕ್ಷಕರಿಲ್ಲದಿದ್ದರೂ ಗೆಲ್ಲುವ ಛಲವಿದೆ

06:40 AM Aug 01, 2017 | Team Udayavani |

ಹೈದರಾಬಾದ್‌: ಐದನೇ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ಬುಲ್ಸ್‌ ಶುಭಾರಂಭ ಮಾಡಿದೆ. ರವಿವಾರ ರಾತ್ರಿ ಹೈದರಾ ಬಾದ್‌ನಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ತಂಡವನ್ನು 31-21 ಅಂತರದಿಂದ ಭರ್ಜರಿಯಾಗಿ ಮಣಿ ಸಿದೆ. ಮೊದಲ ಪಂದ್ಯದಲ್ಲೇ ಆತಿ ಥೇಯ ತಂಡವನ್ನು ಮಣಿಸಿದ್ದರಿಂದ ಉಳಿದ ಪಂದ್ಯಗಳಲ್ಲಿ ನಮ್ಮ ಆತ್ಮ ವಿಶ್ವಾಸ ಸಹಜವಾಗಿಯೇ ಹೆಚ್ಚಲಿದೆ ಎಂದಿದ್ದಾರೆ ನಾಯಕ, “ರೈಡರ್‌ ಮೆಶಿನ್‌’ ರೋಹಿತ್‌ ಕುಮಾರ್‌. ಕರ್ನಾಟಕದ ಕಬಡ್ಡಿ ಅಭಿಮಾನಿಗಳು ಸಹಜವಾಗಿಯೇ ತಂಡದ ಮುಂದಿನ ಪಂದ್ಯಗಳನ್ನು ಎದುರು ನೋಡುತ್ತಿದ್ದಾರೆ.

Advertisement

ಆದರೆ ಬೆಂಗಳೂರಿನಲ್ಲಿ ನಡೆಯಬೇಕಾದ ಪ್ರೊ ಕಬಡ್ಡಿಯ ಆವೃತ್ತಿ ಪಂದ್ಯಗಳು ನಾಗ್ಪುರಕ್ಕೆ ಸ್ಥಳಾಂತರಗೊಂಡಿರುವುದು ಕರ್ನಾಟಕದ ಕ್ರೀಡಾಭಿ ಮಾನಿಗಳಿಗೆ ತೀವ್ರ ನಿರಾಸೆ ಉಂಟುಮಾಡಿದೆ. ಹೀಗಾಗಿ ತವರಿನ ಅಭಿಮಾನಿಗಳ ಬೆಂಬಲದ ಕೂಗು ಇಲ್ಲದೇ ಆಟಗಾರರು ಅಂಗಣಕ್ಕೆ ಇಳಿಯಬೇಕಾಗಿದೆ.

ಕಳೆದ 4 ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್‌ ಸ್ಟಾರ್‌ ಆಟಗಾರರನ್ನು ಹೊಂದಿದ್ದರೂ 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಪ್ರಶಸ್ತಿ ಬಿಟ್ಟರೆ ಹೇಳಿಕೊಳ್ಳುವಂತಹ ಪ್ರದರ್ಶನ ತೋರ್ಪಡಿಸಿಲ್ಲ. ಆದರೆ ಈ ಬಾರಿ ಆಟಗಾರರು ಬದ ಲಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವ ಆಟಗಾರರ ಸೇರ್ಪಡೆ ಯಾಗಿದೆ. ಇಂಥ ಹೊತ್ತಿನಲ್ಲಿ ಕಪ್ತಾನ ರೋಹಿತ್‌ ಕುಮಾರ್‌ ತಮ್ಮ ಅಭಿ ಪ್ರಾಯವನ್ನು ಹಂಚಿಕೊಂಡಿದ್ದಾರೆ. 

ತಂಡದ ತರಬೇತಿ ಹೇಗಿದೆ?
ಎಲ್ಲ ಆಟಗಾರರೂ ಬೆಳಗ್ಗಿನ ಜಾವ 5 ಗಂಟೆಗೆ ಅಭ್ಯಾಸ ಆರಂಭಿಸುತ್ತಾರೆ. ಉಪಹಾರದ ಬಳಿಕವೂ ಅಭ್ಯಾಸ ಇರುತ್ತದೆ. ಯುವ ಆಟಗಾರರು ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದಾರೆ. ಪ್ರಬಲ ಹೋರಾಟ ನೀಡುತ್ತೇವೆ.

ನಾಯಕತ್ವದ ಒತ್ತಡ ಇದೆಯೇ?
ಹಾಗೇನಿಲ್ಲ, ಕಳೆದ ಎರಡು ಆವೃತ್ತಿಯಲ್ಲಿಯೂ ನಾಯಕನಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಹೀಗಾಗಿ ಯಾವುದೇ ಒತ್ತಡವಿಲ್ಲ. ಆದರೆ ಆಟಗಾರರು ಬದಲಾಗಿದ್ದಾರೆ. ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ್ದೇವೆ. ಆದರೆ ಆರಂಭಿಕ ಕೆಲವು ಪಂದ್ಯಗಳನ್ನು ಆಡಿದ ಬಳಿಕವೇ ನಮ್ಮ ಪ್ರದರ್ಶನದ ಗುಣಮಟ್ಟ ತಿಳಿಯಲಿದೆ. ಕೂಟದಲ್ಲಿ ಪ್ರತಿ ಪಂದ್ಯವೂ ಮಹತ್ವದ್ದಾಗಿರುತ್ತದೆ. ಹೀಗಾಗಿ ಯಾವುದೇ ಪಂದ್ಯವನ್ನು ನಿರ್ಲಕ್ಷಿಸಲಾಗದು.

Advertisement

ತವರಿನ ಅಂಕಣ ಸಿಕ್ಕಿಲ್ಲ. ಈ ಬಗ್ಗೆ ಏನು ಹೇಳುತ್ತೀರಿ?
ತವರಿನ ಅಂಕಣ ಬೇಕಾಗಿತ್ತು. ಅಭಿಮಾನಿಗಳ ಪ್ರೋತ್ಸಾಹವೂ ಮಹತ್ವದ್ದಾಗಿರುತ್ತದೆ. ಆದರೆ ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ. ಬೇರೆ ವಿಚಾರಗಳ ಬಗ್ಗೆ ಯೋಚಿಸಲು ಹೋಗುವುದಿಲ್ಲ.

ದೀರ್ಘಾವಧಿ ಕೂಟದಲ್ಲಿ ಫಿಟ್‌ನೆಸ್‌ ಸಮಸ್ಯೆ ಆಗದೆ?
ಫಿಟ್‌ನೆಸ್‌ಗಾಗಿ ವ್ಯಾಯಾಮ, ಜಿಮ್‌ ಮಾಡುತ್ತೇವೆ. ದೀರ್ಘಾವಧಿ ಕೂಟ ಸಮಸ್ಯೆ ಎನ್ನಲಾಗದು, ಅದು ನಮಗೆ ಸವಾಲು. ತಂಡದಲ್ಲಿ ಸಾಕಷ್ಟು ಯುವ ಆಟಗಾರರಿದ್ದಾರೆ. ಇವರಿಗೆಲ್ಲ ಉತ್ತಮ ಪ್ರದರ್ಶನದ ಅವಕಾಶ ಸಿಗಲಿದೆ.

ತಂಡದಲ್ಲಿರುವ ಪ್ರತಿಭೆಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಚಿಕ್ಕ ವಯಸ್ಸಿನ ಹರೀಶ್‌ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೇಳುವುದನ್ನು ಸರಿಯಾಗಿ ಪಾಲಿಸುತ್ತಾರೆ. ಉಳಿದಂತೆ ಸಚಿನ್‌ ಕುಮಾರ್‌, ಆಶಿಷ್‌ ಕುಮಾರ್‌, ಅಮಿತ್‌, ಪ್ರದೀಪ್‌ ಕೂಡ ಪ್ರತಿಭಾನ್ವಿತ ಆಟಗಾರರು.

Advertisement

Udayavani is now on Telegram. Click here to join our channel and stay updated with the latest news.

Next