Advertisement

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

09:02 AM Apr 06, 2020 | Hari Prasad |

ಹೊಸದಿಲ್ಲಿ: ಮನೆಯಲ್ಲೇ ಕೋವಿಡ್ 19 ಸೋಂಕು ಪರೀಕ್ಷಿಸುವ ವೈದ್ಯಕೀಯ ಕಿಟ್‌ ಅನ್ನು ಬೆಂಗಳೂರು ಮೂಲದ ಬಯೋಟೆಕ್‌ ಕಂಪನಿ ಬಯೋನ್‌ ಅಭಿವೃದ್ಧಿಪಡಿಸಿದೆ. ದೇಶದಲ್ಲಿಯೇ ಇದು ಮೊದಲ ಪ್ರಯೋಗವಾಗಿದೆ. ಈ ಟೆಸ್ಟಿಂಗ್‌ ಕಿಟ್‌ನಿಂದ ಕೇವಲ 5-10 ನಿಮಿಷದಲ್ಲಿ ಫ‌ಲಿತಾಂಶ ದೊರೆಯಲಿದೆ. ಇದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ ಅನುಮೋದನೆ ದೊರೆತಿದೆ.

Advertisement

ಈ ಕಿಟ್‌ ಬೆಲೆ 2-3 ಸಾವಿರ ರೂ.ಆಗಿದ್ದು, ಕಿಟ್‌ ಬೇಕಿದ್ದರೆ ಕಂಪನಿಯ ವೆಬ್‌ಸೈಟ್‌ಗೆ (bione.in) ಹೋಗಿ ಖರೀದಿಸಬಹುದು. ಆರ್ಡರ್‌ ಮಾಡಿದ 2-3 ದಿನದಲ್ಲಿ ದೊರೆಯಲಿದೆ. ಕಿಟ್‌ ಉಪಯೋಗಿಸಿದ ಬಳಿಕ ಆಲ್ಕೋಹಾಲ್‌ ಸ್ವಾಬ್‌ ನಿಂದ ಕೈಗಳನ್ನು ತೊಳೆದುಕೊಳ್ಳಬೇಕು. ವಾರಕ್ಕೆ 20 ಸಾವಿರ ಕಿಟ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ಬಯೋನ್‌ ಕಂಪನಿ ಸಿಇಒ ರಾಜೇಂದ್ರ ಚಿಕಾರಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next