Advertisement

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣದ ಸಿಬಂದಿಗೆ ಬೆದರಿಕೆ

11:22 AM Nov 02, 2024 | Team Udayavani |

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ ಪರಿಶೀಲನೆ ವೇಳೆ ಅನುಮಾನಾಸ್ಪದ ವಸ್ತು ಕಂಡು ಬಂದ ಹಿನ್ನೆಲೆಯಲ್ಲಿ ಇಬ್ಬರು ಪ್ರಯಾಣಿಕರ ಬ್ಯಾಗ್‌ ಅನ್ನು ಪರಿಶೀಲಿಸಲು ಮುಂದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಬಂದಿಗೆ ನಿಂದಿಸಿ ಬೆದರಿಕೆ ಹಾಕಿದ ಇಬ್ಬರ ವಿರುದ್ಧ ಬಿಐಎಎಲ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ಕೆಐಎಎಲ್‌ನ ಸಿಐಎಸ್‌ಎಫ್ ವಿಭಾಗದ ಎಎಸ್‌ಜಿ ಪ್ರದ್ಯುಮ್ನ ಕುಮಾರ್‌ ನೀಡಿರುವ ದೂರು ಆಧರಿಸಿ ಬಿಹಾರ ಮೂಲದ ಅಮನ್‌ರಾಜ್‌ (32), ಝಾರ್ಖಂಡ್‌ ಮೂಲದ ಅದಿಥಿ ಕುಮಾರಿ (28) ವಿರುದ್ಧ ಪ್ರಕರಣ ದಾಖಲಾಗಿದೆ.

ಅ. 29ರಂದು ಇಂಡಿಗೋ ವಿಮಾನದಲ್ಲಿ ಭುವನೇಶ್ವರಗೆ ಪ್ರಯಾಣಿಸಲೆಂದು ಆರೋಪಿಗಳು ಕೆಐಎಎಲ್‌ಗೆ ಬಂದಿದ್ದರು. ಇಬ್ಬರು ಆರೋಪಿಗಳು ಸೆಕ್ಯೂರಿಟಿ ಚೆಕಿಂಗ್‌ ಎಂದು ಸೆಕ್ಯೂರಿಟಿ ಹೋಲ್ಡ್‌ ಏರಿಯಾಗೆ ಬಂದಿದ್ದು, ಇವರ ಬ್ಯಾಗೇಜ್‌ ಸ್ಕ್ರೀನಿಂಗ್‌ ಮಾಡುವಾಗ ಪ್ರಯಾಣಿಕರ ಬ್ಯಾಗ್‌ ನಲ್ಲಿ ಅನುಮಾನಾಸ್ಪದ ವಸ್ತು ಕಂಡು ಬಂದಿತ್ತು. ಬ್ಯಾಗ್‌ ಅನ್ನು ಕೆಐಎಎಲ್‌ ಸಿಬಂದಿ ಖುದ್ದು ತಪಾಸಣೆ ಮಾಡಲು ಮುಂದಾದಾಗ ಸಹಕರಿಸದೇ ಇದ್ದಾಗ ಘಟನೆ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next