ಬೆಂಗಳೂರು: ಎರಡು ದಿನಗಳ ಹಿಂದೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆಗೆ ಪ್ರಚೋದನೆ, ವಕೀಲರ ಮೇಲೆ ಹಲ್ಲೆ, ಪ್ರಾಣ ಬೆದರಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ವಕೀಲರ ನಿಂದನೆ ಆರೋಪದಡಿ ವಕೀಲ ಜಗದೀಶ್ ಅವರನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಕೀಲ ಜಿ. ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ. ರವಿವಾರ ರಜೆ ಕಾರಣ ನ್ಯಾಯಾಧೀಶರ ನಿವಾಸದಲ್ಲೇ ಆರೋಪಿಯನ್ನು ಹಾಜರುಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪ್ರಕರಣದ ಯುವತಿ ಪರ, ಶಾಸಕರೊಬ್ಬರಿಂದ ಅನ್ಯಾಯವಾಗಿದೆ ಎಂದಿದ್ದ ಮಹಿಳೆಯೊಬ್ಬರ ಪರ ಜಗದೀಶ್ ವಕೀಲರಾಗಿದ್ದರು. ಮಾತ್ರವಲ್ಲದೆ ಹಲವಾರು ವಿವಾದಿತ ಪ್ರಕರಣಗಳಲ್ಲಿ ಅವರು ವಾದಿಸುತ್ತಿದ್ದಾರೆ.
ಇದನ್ನೂ ಓದಿ:15-18 ವರ್ಷದ ಶೇ.70 ಮಕ್ಕಳಿಗೆ ಲಸಿಕೆ; ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ
ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೂ ಏಕವಚನದಲ್ಲೇ ವಕೀಲ ಜಗದೀಶ್ ಬೈದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.