Advertisement

“ಬೆಂಗಳೂರು 69” ವಿಮರ್ಶೆ: ಕಿಡ್ನ್ಯಾಪ್‌ ವೊಂದರ ಜಾಡು ಹಿಡಿದು..

03:27 PM Feb 12, 2023 | Team Udayavani |

ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾಗಳು ಬಂದಿವೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ, ಪ್ರೇಕ್ಷಕರನ್ನು ಹಿಡಿದಿಡಬೇಕೆಂಬ ಉದ್ದೇಶ ಈ ಜಾನರ್‌ ಸಿನಿಮಾಗಳದ್ದು. ಈಗ ಇದೇ ಸಾಲಿಗೆ ಈ ಸೇರುವ ಚಿತ್ರ “ಬೆಂಗಳೂರು 69′.

Advertisement

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸ್ಟೋರಿ. ಜಗತ್ತಲ್ಲಿ ಪ್ರೀತಿ, ನಂಬಿಕೆ, ವ್ಯಾಮೋಹ, ಮೋಸ, ದ್ವೇಷ,ಅಸೂಯೆ, ಅಪರಾಧ ಹೀಗೆ ಎಲ್ಲವೂ ನಡೆಯುತ್ತದೆ. ಇದೇ ಅಂಶವನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಚಿತ್ರದಲ್ಲೊಂದು ಕಿಡ್ನಾಪ್‌ ಇದೆ. ಆ ಕಿಡ್ನಾಪ್‌ ಯಾಕಾಗುತ್ತದೆ? ಕಿಡ್ನಾಪ್‌ ಮಾಡೋರು ಯಾರು, ಆಗೋರು ಯಾರು ಎಂಬುದೇ ಸಸ್ಪೆನ್ಸ್‌. ಅಷ್ಟಕ್ಕೂ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ನೀವು “ಬೆಂಗಳೂರು 69′ ಸಿನಿಮಾ ನೋಡಬಹುದು.

ಇಡೀ ಸಿನಿಮಾ ಐದು ಪಾತ್ರಗಳ ಸುತ್ತ ಸಾಗುತ್ತದೆ. ಈ ಪಾತ್ರಗಳೇ ಸಿನಿಮಾದ ಹೈಲೈಟ್‌ ಕೂಡಾ. ಇನ್ನು, ಸಿನಿಮಾದಲ್ಲಿ ಒಂದಷ್ಟು ಟ್ವಿಸ್ಟ್‌-ಟರ್ನ್ಗಳಿದ್ದು, ಇದೇ ಸಿನಿಮಾದ ಜೀವಾಳ ಎಂದರೆ ತಪ್ಪಲ್ಲ. ಈ ಚಿತ್ರಕ್ಕೆ ಇಂಟರ್‌ನ್ಯಾಶನಲ್‌ ಕ್ರೈಮ್‌ನ ಟಚ್‌ಕೂಡಾ ನೀಡಲಾಗಿದೆ. ಚಿತ್ರದಲ್ಲಿ ಪವನ್‌ ಶೆಟ್ಟಿ, ಅನಿತಾ ಭಟ್‌ ಸೇರಿದಂತೆ ಇತರರು ನಟಿಸಿದ್ದು, ಪ್ರತಿಯೊಬ್ಬರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ನಟಿ ಅನಿತಾ ಭಟ್‌ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next