Advertisement

Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ

02:26 PM Nov 08, 2024 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ವಿಸ್ತರಿತ ಹೊಸ ಮಾರ್ಗದಲ್ಲಿ ಮೊದಲ ದಿನ ಉತ್ತಮ ಸ್ಪಂದನೆ ದೊರಕಿದ್ದು, ನಾಗಸಂದ್ರ-ಮಾದಾವರ ನಡುವೆ ಗುರುವಾರ ಇಡೀ ದಿನ 16000 ಜನ ಪ್ರಯಾಣಿಸಿದ್ದಾರೆ. ಬೆಳಗ್ಗೆ 5ರಿಂದ ಶುರುವಾದ ಉದ್ದೇಶಿತ ಮಾರ್ಗದ ವಾಣಿಜ್ಯ ಸಂಚಾರ ರಾತ್ರಿ 11ರವರೆಗೆ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ 10 ನಿಮಿಷಗಳ ಅಂತರದಲ್ಲಿ ಮೆಟ್ರೋ ಕಾರ್ಯಾಚರಣೆ ಮಾಡಿತು.

Advertisement

ಬೆಳಗ್ಗೆ 5ರಿಂದ ರಾತ್ರಿ 9ರವರೆಗೆ 15,594 ಜನ ಪ್ರಯಾಣಿಸಿದ್ದು, ರಾತ್ರಿ 11ರ ವೇಳೆಗೆ ಈ ಸಂಖ್ಯೆ 16000ದ ಗಡಿ ದಾಟಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ಅಧಿಕಾರಿಗಳು ತಿಳಿಸಿದರು.

3.14 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಮೂರು ನಿಲ್ದಾಣಗಳಿದ್ದು, ಅವುಗಳಿಂದ ನಗರದ ವಿವಿಧೆಡೆ ಮೆಟ್ರೋ ಪ್ರಯಾಣ ಬೆಳೆಸಿದವರ ಸಂಖ್ಯೆ 7,400 ಇದ್ದರೆ, ಬೇರೆ ಬೇರೆ ನಿಲ್ದಾಣಗಳಿಂದ ಈ ಮೂರು ನಿಲ್ದಾಣಗಳಿಗೆ ಬಂದಿಳಿದವರ ಸಂಖ್ಯೆ 8,194 ಆಗಿದೆ. ಎರಡು ಕಡೆ ನೈಸ್‌ ರಸ್ತೆಯನ್ನು ಸಂಧಿಸುವ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದುಹೋಗುವ ಈ ಅತಿ ಚಿಕ್ಕ ಮಾರ್ಗದಲ್ಲಿ ನಿತ್ಯ 44 ಸಾವಿರ ಜನ ಪ್ರಯಾಣಿ ಸಲಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಅಂದಾಜಿಸಿದ್ದಾರೆ.

ಮೊದಲ ದಿನ ತಾವು ಇರುವ ಪ್ರದೇಶಗಳಿಗೆ ಮತ್ತಷ್ಟು ಹತ್ತಿರವಾದ ಮೆಟ್ರೋದಲ್ಲಿ ಜನ ಸಂಚರಿಸಿ ಖುಷಿಪಟ್ಟರು.ಕೆಲವರು ಜಾಲಿ ರೈಡ್‌ ಮಾಡಿ ಸೆಲ್ಫಿà ತೆಗೆದುಕೊಂಡರು. ಆ ಫೋಟೋಗಳೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next