ಬೆಂಗಳೂರು: ಒಂದೆಡೆ ಭಾಷೆ ಹಾಗೂ ಮನೆಯದಾರಿ ಗೊತ್ತಾಗದೆ ನಗರವೆಲ್ಲ ಸುತ್ತಾಡಿ ಆಶ್ರಮಸೇರಿದ ಸಹೋದರಿ. ಮತ್ತೂಂದೆಡೆ ಸಹೋದರಿಗಾಗಿಪರಿತಪಿಸುತ್ತಿದ್ದ ಅಣ್ಣ. ಅನಂತರ ಹದಿನಾರು ದಿನಗಳಪೊಲೀಸರ ಅವಿರತ ಶ್ರಮದಿಂದ ಕಾಣೆಯಾಗಿದ್ದಸಹೋದರಿ ಇದೀಗ ಅಣ್ಣನಕೈಗೆ ರಾಖೀ ಕಟ್ಟಿದ್ದಾಳೆ!.
ಸಹೋದರಿ ನಾಪತ್ತೆಯಾಗಿದ್ದ ನೋವಿನಲ್ಲಿದ್ದಸಹೋದರನಿಗೆ ಕಾಕತಾಳೀಯ ಎಂಬಂತೆ ರಕ್ಷಾ ಬಂಧನದಂದೇ ಪೊಲೀಸರು ಆತನ ತಂಗಿಯನ್ನುಪತ್ತೆ ಹಚ್ಚಿಕೊಟ್ಟಿದ್ದಾರೆ. ಇದೇ ಖುಷಿಯಲ್ಲಿ ತಂಗಿಗೆಅಣ್ಣನೇ ರಾಖೀ ಕಟ್ಟಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾನೆ.
ಈ ಅವೀಸ್ಮರಣಿಯ ಕ್ಷಣಕ್ಕೆ ಸಾಕ್ಷಿಯಾದ ಅಮೃತಹಳ್ಳಿಪೊಲೀಸರಿಗೆ ಇಡೀಕುಟುಂಬ ಧನ್ಯವಾದ ತಿಳಿಸಿತು.ಆ.6ರಂದು ಅಮೃತಹಳ್ಳಿಯ ಆಸ್ಪತ್ರೆಗೆ ಸಂಬಂಧಿಯೊಬ್ಬರನ್ನುನೋಡಲುಹೋಗಿದ್ದರಾಂಚಿಮೂಲದ45 ವರ್ಷದ ರಿಮಿ ಅಡ್ಡಿ ಎಂಬುವರು ಮನೆಗೆ ದಾರಿಮತ್ತು ಭಾಷೆ ಗೊತ್ತಾಗದೆ ಕಾಣೆಯಾಗಿದ್ದರು. ಈಸಂಬಂಧ ಸಹೋದರ ವಿವೇಕ್ ಅಡ್ಡಿ ಅಮೃತಹಳ್ಳಿಠಾಣೆಗೆ ದೂರು ನೀಡಿದ್ದರು. ಬಳಿಕ ಕಾರ್ಯಾಚರಣೆಆರಂಭಿಸಿದ ಪೊಲೀಸರು ಆಸ್ಪತ್ರೆಯ ಸಿಸಿ ಕ್ಯಾಮೆರಾಪರಿಶೀಲಿಸಿದಾಗ ಅಪರಿಚಿತನೊಬ್ಬ ಬೈಕ್‌ನಲ್ಲಿಕೂರಿಸಿಕೊಂಡು ಹೋಗಿರುವುದು ಪತ್ತೆಯಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಭಾವಿಸಲಾಗಿತ್ತು. ಅನಂತರ ಆ ಬೈಕ್‌ಚಲಿಸಿದ ಪ್ರತಿಯೊಂದು ಪ್ರದೇಶದಲ್ಲಿ ಸಿಸಿ ಕ್ಯಾಮೆರಾಶೋಧಿಸಿದಾಗ ವೀರಣ್ಣನಪಾಳ್ಯದಲ್ಲಿ ಬೈಕ್‌ನಲ್ಲಿ ಮಹಿಳೆಇಳಿದಿದ್ದರು.ಬಳಿಕ ಸುಮಾರು400 ಸಿಸಿ ಕ್ಯಾಮೆರಾ ಪರಿಶೀಲಿಸಿದಾಗಮಹಿಳೆಯ ಸುಳಿವುಪತ್ತೆಯಾಗಲಿಲ್ಲ ಎಂದುಪೊಲೀಸರು ಹೇಳಿದರು.50 ಆಶ್ರಮಗಳಲ್ಲಿ ಶೋಧ:ಅನಂತರ ನಾಪತ್ತೆಯಾಗಿರುವುದು ಖಚಿತವಾಗುತ್ತಿದ್ದಂತೆನಗರದ ಸುಮಾರು 50ಕ್ಕೂಹೆಚ್ಚು ಆಶ್ರಮಗಳಲ್ಲಿ ಶೋಧಿಸಲಾಗಿತ್ತು.
ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಶೋಧ ನಡೆಸಿದ್ದರೂಯಾವುದೇ ಪ್ರಯೋಜನ ವಾಗಿರಲಿಲ್ಲ.ಸಾರ್ವಜನಿಕರ ಮಾಹಿತಿ ಭಿತ್ತಿಪತ್ರ ಹೊರಡಿಸಿಹಂಚಿಕೆ, ಸಾಮಾಜಿಕ ಜಾಲತಾಣಗಳಲ್ಲೂ ಮಹಿಳೆನಾಪತ್ತೆ ಬಗ್ಗೆ ಪೊಲೀಸರೇ ಪೋಸ್ಟ್ ಮಾಡಿದ್ದರು.ಅದನ್ನು ಕಂಡ ವ್ಯಕ್ತಿಯೊಬ್ಬರು ಮಹಿಳೆಯುತಾವರೆಕರೆ ಠಾಣಾ ವ್ಯಾಪ್ತಿಯ ಬಾಚಿಗೊಪ್ಪ ಬಳಿಯಆಶ್ರಮದಲ್ಲಿ ಇರುವುದಾಗಿ ಮಾಹಿತಿ ನೀಡಿದ್ದರು. ಈಮಾಹಿತಿ ಆಧರಿಸಿ ಭಾನುವಾರ ಆಕೆಯನ್ನು ಆಶ್ರಮದಿಂದಕರೆ ತಂದಿದ್ದಾರೆ.
ಮಹಿಳೆ ನಾಪತ್ತೆಗೆ ಕಾರಣವೇನು?: ರಾಂಚಿಮೂಲದ ರಿಮಿ ಅಡ್ಡಿ ನಾಲ್ಕೈದು ವರ್ಷಗಳ ಹಿಂದೆಬೆಂಗಳೂರಿಗೆ ಬಂದಿದ್ದರು. ಈಕೆಗೆ ಬಂಗಾಳಿಹೊರತುಪಡಿಸಿ ಬೇರೆ ಯಾವುದೇ ಭಾಷೆ ಬರುವುದಿಲ್ಲ. ನೆನಪಿನ ಶಕ್ತಿ ಮತ್ತು ಮಾನಸಿಕ ಖನ್ನತೆಗೊಳ್ಳಗಾಗಿದ್ದ ಅವರು, ಆಸ್ಪತ್ರೆಯಿಂದ ಮನೆಗೆ ಹೋಗುವದಾರಿ ತಿಳಿಯದಕಾರಣ ನಾಪತ್ತೆಯಾಗಿದ್ದರು ಎಂದುಪೊಲೀಸರು ಹೇಳಿದರು.