Advertisement
ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಉಳಿದ್ದ ಜನರು ಅನ್‌ಲಾಕ್ ಹಿನ್ನೆಲೆಯಲ್ಲಿ ತಮ್ಮ ಸ್ನೇಹಿತರ,ಕುಟುಂಬದವರ ಜತೆಗೆ ಹೋಟೆಲ್‌ಗಳಿಗೆ ಭೇಟಿ ನೀಡಿ ಕಾಫಿ, ಟೀ ಸವಿದರು. ಸುಮಾರು ಎರಡು ತಿಂಗಳು ಕಾಲ ಮನೆಯಲ್ಲೇ ಇದ್ದವರಿಗೆ ನಿರ್ಬಂಧ ಸಡಿಲಿಕೆ ಸ್ವಾತಂತ್ರ್ಯ ಸಿಕ್ಕಂತಾಗಿತ್ತು.
Related Articles
Advertisement
ಕಾರ್ಮಿಕರು ವಾಪಸ್ ಬರಬೇಕಾಗಿದೆ: ಈ ಹಿಂದೆ ಸರ್ಕಾರ ಕೈಗಾರಿಕೆಗಳಲ್ಲಿ ಶೇ.50 ಕಾರ್ಮಿಕರು ಕಾರ್ಯ ನಿರ್ವಹಿಸಲು ಅವಕಾಶ ನೀಡಿತ್ತು. ಆ ಹಿನ್ನೆಲೆಯಲ್ಲಿ ಶೇ.45ಕಾರ್ಮಿಕರುಕೆಲಸಕ್ಕೆ ಹಾಜರಾಗಿದ್ದರು. ಈಗ ಸಂಪೂರ್ಣ ವಿನಾಯ್ತಿ ನೀಡಿರುವ ಹಿನ್ನೆಲೆಯಲ್ಲಿಊರಿಗೆಹೋಗಿರುವಕಾರ್ಮಿಕರುಮತ್ತಷ್ಟು ಸಂಖ್ಯೆ ಯಲ್ಲಿ ಬರಬೇಕಾಗಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಸುಂದರ್ ಹೇಳಿದ್ದಾರೆ. ಎಂಜಿನಿಯರ್, ಆಟೋಮೊಬೈಲ್, ಗಾರ್ಮೆಂಟ್‌ನಲ್ಲಿ ಕಾರ್ಯನಿರ್ವಹಣೆ ಆರಂಭವಾಗಿದೆ. 3ನೇ ಅಲೆಯ ಭಯಕೈಗಾರಿಕಾ ವಲಯವನ್ನುಕಾಡುತ್ತಿದೆ.
ಅಲ್ಲದೆ ಆಭರಣ ಮಳಿಗೆಗಳು, ಪ್ಯಾನ್ಸಿ ಸ್ಟೋರ್‌ಗಳು, ಎಂಪೋರಿಯಂಗಳು, ಶೋ ರೂಂಗಳು,ಕಂಪ್ಯೂಟರ್ ಸೇರಿದಂತೆ ಉಪಕರಣ ಮಳಿಗೆಗಳು, ಪುಸ್ತಕದ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು ಕೋವಿಡ್ ಮಾರ್ಗಸೂಚಿಯೊಂದಿಗೆಕಾರ್ಯಚಟುವಟಿಕೆ ಆರಂಭಿಸಿದ್ದು ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ಮಳಿಗೆಗಳ ಮುಂದೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದು ಕಂಡು ಬಂತು.
ದೇಗುಲಗಳಲ್ಲಿ ದರ್ಶನಾವಕಾಶ:
ಕೋವಿಡ್ ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ ಸೋಮವಾರ ನಗರದ ಹಲವು ದೇವಾಲಯ, ಪ್ರಾರ್ಥನಾಮಂದಿರ ಮತ್ತು ಚರ್ಚೆಗಳಲ್ಲಿ ಭಕ್ತರು
ಕೋವಿಡ್ ಮಾರ್ಗ ಸೂಚಿಗಳನ್ನು ಪಾಲನೆ ಮಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಕೋವಿಡ್‌ನಿರ್ಬಂಧದ ಹಿನ್ನೆಲೆಯಲ್ಲಿ ಬಂದ್‌ಆಗಿದ್ದ ಬನಶಂಕರಿ ದೇವಾಲಯ, ಮಲ್ಲೇಶ್ವರದ ನರಸಿಂಹ ಸ್ವಾಮಿದೇವಾಲಯ ಮತ್ತು ತಿರುಮಲ ಗಿರಿ ದೇವಾಲಯ ಸೇರಿದಂತೆ ನಗರದ ದೇಗುಲಗಳಲ್ಲಿ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಶಿವಾಜಿನಗರ ಸೆಂಟ್ ಮೇರಿ ಚರ್ಚ್‌ನಲ್ಲಿ ಭಕ್ತರು ಪಾರ್ಥನೆ ನಡೆಸಿದರು. ಜತೆಗೆಕೆ.ಆರ್.ಮಾರುಕಟ್ಟೆಯ ಜಾಮೀಯಾ ಮಸೀದಿಯಲ್ಲಿ ಹಲವು ಸಂಖ್ಯೆಯಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸಿದರು.
ಹಲವುಕೈಗಾರಿಕೆಗಳುಕಾರ್ಯಾರಂಭ ಮಾಡಿವೆ. ಶೇ.60 ರಷ್ಟು ಮಾತ್ರ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ. ಇನ್ನೂ ಶೇ.40ರಷ್ಟು ಕಾರ್ಮಿಕರು ಕೆಲಸಕ್ಕೆ ಬರಬೇಕಾಗಿದೆ.–ಕೆ.ಬಿ.ಅರಸಪ್ಪ, ಕಾಸಿಯಾ ಅಧ್ಯಕ್ಷ