Advertisement

ನೇಣು ಬಿಗಿದ ಸ್ಥಿತಿಯಲ್ಲಿ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಮೃತದೇಹ ಪತ್ತೆ!

07:05 PM May 15, 2022 | Team Udayavani |

ಕೋಲ್ಕತ್ತಾ : ಬಂಗಾಳಿಯ ಜನಪ್ರಿಯ ಕಿರುತೆರೆ ನಟಿ ಪಲ್ಲವಿ ಡೇ ಅವರ ಮೃತದೇಹ ಕೋಲ್ಕತ್ತಾದ ಅಪಾರ್ಟ್​​ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಬಂಗಾಳಿ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ರೇಷಮ್ ಜಾಪಿ, ಮೊನ್ ಮಾನೆ ನ ಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ತನ್ನ ಗೆಳೆಯನ ಜೊತೆ ವಾಸವಿದ್ದ ಪಲ್ಲವಿ ರವಿವಾರ ಬೆಳಿಗ್ಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬಂಗಾಳದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ಕುರಿತು ತನಿಖೆ ಆರಂಭಿಸಿದ್ದಾರೆ.

20ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ನಟಿ ಪಲ್ಲವಿ ಸಾವಿಗೆ ಕಲಾವಿದರು, ಸ್ನೇಹಿತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ : ಶಹಾಪುರ: ನಕಲಿ ಮದ್ಯ ಮಾರಾಟ, ಇಬ್ಬರ ಬಂಧನ; ಐವರು ಪರಾರಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next