Advertisement

Sapthami Gowda: ಯುವ ಜೊತೆ ಸಪ್ತಮಿ ಸಿನಿಹೆಜ್ಜೆ

10:57 AM Mar 26, 2024 | Team Udayavani |

“ಕಾಂತಾರ’ ಸಿನಿಮಾದಲ್ಲಿ ಲೀಲಾ ಆಗಿ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ಸಪ್ತಮಿ ಗೌಡ, ಈ ವಾರ “ಯುವ’ ರಾಣಿಯಾಗಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಹೌದು, ರಾಘವೇಂದ್ರ ರಾಜಕುಮಾರ್‌ ಪುತ್ರ ಯುವ (ಗುರು) ರಾಜಕುಮಾರ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ “ಯುವ’ ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಅಭಿನಯಿಸಿದ್ದು, ಸಿನಿಮಾ ಇದೇ ವಾರ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.

Advertisement

ಇನ್ನು “ಯುವ’ ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಸಿರಿ ಎಂಬ ಹೆಸರಿನ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದ ಮೊದಲರ್ಧದ ಕಥೆ ಮಧ್ಯಮ ಕುಟುಂಬದ ಹುಡುಗನೊಬ್ಬನ ಕಾಲೇಜ್‌ ಜೀವನದ ಸುತ್ತ ನಡೆಯಲಿದ್ದು, ದ್ವಿತೀಯಾರ್ಧದಲ್ಲಿ ಅವನ ಕೌಟುಂಬಿಕ ಬದುಕು ಜೀವನದ ಹೋರಾಟಗಳ ಸುತ್ತ ನಡೆಯಲಿದೆ.

“ಯುವ’ ಸಿನಿಮಾದಲ್ಲಿ ನಾಯಕನ ಜೊತೆಗಾರ್ತಿಯಾಗಿ ಇಡೀ ಸಿನಿಮಾದಲ್ಲಿ ಸಪ್ತಮಿ ಗೌಡ ಅವರ ಪಾತ್ರ ಸಾಗುತ್ತದೆ ಎಂಬುದು ನಾಯಕ ನಟಿ ಸಪ್ತಮಿ ಗೌಡ ಮತ್ತು ಚಿತ್ರತಂಡದ ಒಕ್ಕೊರಲ ಮಾತು. “ಕಾಂತಾರ’ ಸಿನಿಮಾದ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ ಸಪ್ತಮಿ ಗೌಡ ಹಿಂದಿಯಲ್ಲಿ “ದಿ ವ್ಯಾಕ್ಸಿನ್‌ ವಾರ್‌’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಇಲ್ಲಿಯವರೆಗೆ ಸಪ್ತಮಿ ಅಭಿನಯಿಸಿದ್ದ ಕನ್ನಡದ ಯಾವುದೇ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಸುಮಾರು ಒಂದೂವರೆ ವರ್ಷದ ಬಳಿಕ ಸಪ್ತಮಿ ಅಭಿನಯಿಸಿರುವ ಮತ್ತೂಂದು ಸಿನಿಮಾ “ಯುವ’ ಅದ್ದೂರಿಯಾಗಿ ತೆರೆ ಕಾಣುತ್ತಿದ್ದು, ಹೀಗಾಗಿ “ಯುವ’ ಸಿನಿಮಾದ ಬಗ್ಗೆ ಸಹಜವಾಗಿಯೇ ಸಪ್ತಮಿ ಗೌಡ ಅವರಿಗೆ ಸಾಕಷ್ಟು ನಿರೀಕ್ಷೆಯಿದೆ.

ಈಗಾಗಲೇ ಬಿಡುಗಡೆಯಾಗಿರುವ “ಯುವ’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, “ಯುವ’ ಥಿಯೇಟರಿನಲ್ಲೂ ಪ್ರೇಕ್ಷಕರಿಗೆ ಇಷ್ಟವಾಗಲಿದ್ದಾನೆ ಎಂಬುದು ಚಿತ್ರತಂಡದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next