Advertisement

Ramya: ಉತ್ತರಕಾಂಡದಿಂದ ಹೊರನಡೆದ ರಮ್ಯಾ

10:04 AM Mar 27, 2024 | Team Udayavani |

ನಟಿ ರಮ್ಯಾ ಮತ್ತೂಮ್ಮೆ ತಮ್ಮ ಅಭಿಮಾನಿಗಳಿಗೆ ಬೇಸರದ ಸುದ್ದಿ ನೀಡಿದ್ದಾರೆ. ಅದು ಸಿನಿಮಾವೊಂದರಿಂದ ಹೊರಬಂದ ಸುದ್ದಿ.

Advertisement

ಹೌದು, ನಟಿ ರಮ್ಯಾ “ಉತ್ತರಕಾಂಡ’ ಚಿತ್ರದಲ್ಲಿ ನಾಯಕಿ ಯಾಗಿ ನಟಿಸಲು ಒಪ್ಪಿಕೊಂಡು, ಚಿತ್ರದ ಮುಹೂರ್ತದಲ್ಲೂ ಭಾಗಿಯಾಗಿದ್ದರು. ಅದಕ್ಕಾಗಿ ಸಾಕಷ್ಟು ತಯಾರಿ ಕೂಡಾ ಮಾಡುತ್ತಿದ್ದರು. ಆದರೆ, ಈಗ ಆ ಚಿತ್ರದಿಂದ ಹೊರಬಂದಿದ್ದಾರೆ. ಈ ವಿಷಯವನ್ನು ಸ್ವತಃ ರಮ್ಯಾ ಸ್ಪಷ್ಟಪಡಿಸಿದ್ದು,

“ಡೇಟ್ಸ್‌ ಹೊಂದಿಕೆಯಾಗದ ಕಾರಣ ನಾನು “ಉತ್ತರಕಾಂಡ’ ಚಿತ್ರದಲ್ಲಿ ನಟಿಸುತ್ತಿಲ್ಲ’ ಎಂದಿರುವ ರಮ್ಯಾ, “ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಸದ್ಯಕ್ಕೆ ನಿಲ್ಲಿಸಿದ್ದೇನೆ’ ಎಂದಿದ್ದಾರೆ.

ಡಾಲಿ ಧನಂಜಯ್‌ ನಾಯಕರಾಗಿರುವ “ಉತ್ತರಕಾಂಡ’ ಸಿನಿಮಾವನ್ನು ರೋಹಿತ್‌ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆಯೂ ನಟಿ ರಮ್ಯಾ ರಾಜ್‌ ಬಿ ಶೆಟ್ಟಿ ನಿರ್ದೇಶನ, ನಟನೆಯ “ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲೂ ನಟಿಸುತ್ತಾ ರೆಂಬ ಸುದ್ದಿಯಾಗಿತ್ತು. ಕೊನೆಗೆ ರಮ್ಯಾ ಬದಲು ಬೇರೆ ನಟಿ ಆ ಚಿತ್ರದಲ್ಲಿ ನಟಿಸಿದ್ದರು. ಈಗ “ಉತ್ತರಕಾಂಡ’ದಿಂದಲೂ ಹೊರಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next