Advertisement

ಮತ್ತೆ ಮಿಂಚಿದ ಪ್ರದೀಪ್‌ ನರ್ವಾಲ್‌: ಪಾಟ್ನಾ ಪೈರೇಟ್ಸ್‌  ಫೈನಲಿಗೆ

07:59 AM Oct 27, 2017 | |

ಚೆನ್ನೈ: ಪ್ರದೀಪ್‌ ನರ್ವಾಲ್‌ ಅವರ ಸೂಪರ್‌ ರೈಡ್‌ನ‌ ನೆರವಿನಿಂದ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಐದರ ಚೆನ್ನೈಯಲ್ಲಿ ಗುರುವಾರ ನಡೆದ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ ತಂಡವನ್ನು 47-44 ಅಂಕಗಳಿಂದ ರೋಮಾಂಚಕವಾಗಿ ಸೋಲಿಸಿ ಫೈನಲಿಗೇರಿತು.

Advertisement

ಶನಿವಾರ ನಡೆಯುವ ಪ್ರಶಸ್ತಿ ಹೋರಾಟದಲ್ಲಿ ಪಾಟ್ನಾ ಪೈರೇಟ್ಸ್‌ ತಂಡವು ಗುಜರಾತ್‌ ಫಾರ್ಚೂನ್ಸ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. “ಎ’ ಬಣದ ಅಗ್ರಸ್ಥಾನಿಯಾಗಿದ್ದ ಗುಜರಾತ್‌ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಬೆಂಗಾಲ್‌ ತಂಡವನ್ನು 42-17 ಅಂಕಗಳಿಂದ ಸುಲಭವಾಗಿ ಮಣಿಸಿ ಫೈನಲಿಗೇರಿತ್ತು. ರೈಡ್‌ ಮತ್ತು ರಕ್ಷಣೆಯಲ್ಲಿ ಅಮೋಘ ನಿರ್ವಹಣೆ ನೀಡುತ್ತಿರುವ ಕನ್ನಡಿಗ ಸುಕೇಶ್‌ ಹೆಗ್ಡೆ ಅವರನ್ನು ಒಳಗೊಂಡ ಗುಜರಾತ್‌ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಲಿದೆ.

ಹಾಲಿ ಚಾಂಪಿಯನ್‌ ಪಾಟ್ನಾಗೆ ಫೈನಲಿಗೇರುವ ಹಾದಿ ಸುಗಮವಾಗಿರಲಿಲ್ಲ. ಎರಡು ಎಲಿಮಿನೇಟರ್‌ ಮತ್ತು ಒಂದು ಕ್ವಾಲಿಫೈಯರ್‌ನಲ್ಲಿ ಗೆಲ್ಲುವ ಮೂಲಕ ಪಾಟ್ನಾ ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಳ್ಳುವ ವಿಶ್ವಾಸ ಮೂಡಿಸಿದೆ. ಈ  ಮೂರು ಪಂದ್ಯ ಗೆಲ್ಲುವಲ್ಲಿ ಪ್ರದೀಪ್‌ ಅವರ ಭರ್ಜರಿ ರೈಡಿಂಗ್‌ ಪ್ರಮುಖ ಕಾರಣವಾಗಿದೆ. 

ಪಂದ್ಯವೊಂದರಲ್ಲಿ ಗರಿಷ್ಠ ಸಹಿತ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತ್ಯಧಿಕ ರೈಡ್‌ ಅಂಕ ಗಳಿಸಿದ ದಾಖಲೆ ಹೊಂದಿರುವ ಪ್ರದೀಪ್‌ ಸೂಪರ್‌ ಪ್ಲೇ ಆಫ್ನ ಎರಡು ಎಲಿಮಿನೇಟರ್‌ ಪಂದ್ಯಗಳಲ್ಲಿ ಹರಿಯಾಣ ಸ್ಟೀಲರ್  ಮತ್ತು ಪುನೇರಿ ಪಲ್ಟಾನ್ಸ್‌ ವಿರುದ್ಧ ಪಾಟ್ನಾ ಗೆಲ್ಲಲು ಕಾರಣರಾಗಿದ್ದರು. ಗುರುವಾರ ಬೆಂಗಾಲ್‌ ವಿರುದ್ಧವೂ ಪ್ರದೀಪ್‌ 36 ರೈಡ್‌ನ‌ಲ್ಲಿ 23 ಅಂಕ ಪಡೆದು ತಂಡ ಮೇಲುಗೈ ಸಾಧಿಸಲು ನೆರವಾಗಿದ್ದರು. ಬೆಂಗಾಲ್‌ ತಂಡದ ಮಣಿಂದರ್‌ ಸಿಂಗ್‌ 17 ಅಂಕ ಪಡೆದರೂ ತಂಡ ಗೆಲುವು ಕಾಣಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next