Advertisement

ಒಂಟಿ ಮಹಿಳೆಯರನ್ನು ಹತ್ಯೆಗೈಯುತ್ತಿದ್ದ ಸರಣಿ ಹಂತಕ ಪೊಲೀಸ್ ಬಲೆಗೆ

10:16 AM Jun 05, 2019 | Nagendra Trasi |

ಕಾಲ್ನಾ(ಪಶ್ಚಿಮಬಂಗಾಳ): ಮನೆಯಲ್ಲಿರುವ ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಹತ್ಯೆಗೈಯುತ್ತಿದ್ದ ಸರಣಿ ಹಂತಕನನ್ನು ಬಂಗಾಳದ ಪೂರ್ವ ಬುರ್ಡ್ವಾನ್ ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಕಮರುಝ್ಜಾಮನ್ ಸರ್ಕಾರ್ ಎಂಬ ಶಂಕಿತ ವ್ಯಕ್ತಿ ಐವರು ಮಹಿಳೆಯರನ್ನು ಸೈಕಲ್ ಚೈನ್ ಮತ್ತು ರಾಡ್ ಬಳಸಿ ಹತ್ಯೆಗೈದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಪೂರ್ವ ಬುರ್ಡ್ವಾನ್ ಮತ್ತು ನೆರೆಯ ಹೂಗ್ಲಿ ಜಿಲ್ಲೆಗಳಲ್ಲಿ ಈತ ಹಲವು ಮಹಿಳೆಯರ ಮೇಲೆ ದಾಳಿ ನಡೆಸಿರುವುದಾಗಿಯೂ ತಿಳಿಸಿದ್ದಾರೆ.

42 ವರ್ಷದ ಸರ್ಕಾರ್ ಸಮಯಕ್ಕೆ ತಕ್ಕ ಉಡುಗೆಯನ್ನು ತೊಟ್ಟು ಮಧ್ಯಾಹ್ನದ ವೇಳೆ ಮೀಟರ್ ರೀಡಿಂಗ್ ಮಾಡುವ ನೆಪದಲ್ಲಿ ಮನೆಯೊಳಕ್ಕೆ ನುಗ್ಗುತ್ತಿದ್ದ. ಬಳಿಕ ಸೈಕಲ್ ಚೈನ್ ಮತ್ತು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆಗೈಯುತ್ತಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ.

ಸೋಮವಾರ ಸರಣಿ ಹಂತಕ ಸರ್ಕಾರ್ ನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 12 ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next