ಕೋಲ್ಕತ್ತಾ : ಕೋವಿಡ್ ಸೋಂಕು ಹರಡುತ್ತಿರುವ ಮೂಲವನ್ನು ಕಂಡು ಹಿಡಿಯಲು ರಾಜ್ಯ ಸರ್ಕಾರ “ಸಾಧ್ಯವಿರುವ ಎಲ್ಲ ಕ್ರಮಗಳನ್ನು” ತೆಗೆದುಕೊಳ್ಳುತ್ತಿರುವುದರಿಂದ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಜನರು ಭಯಭೀತರಾಗಬಾರದು, ಕೋವಿಡ್ ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡುವ ಸಲುವಾಗಿ ಕಾರ್ಯಪಡೆ ರಚಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪತ್ರಿಕಾ ಗೋಷ್ಟೀಯನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಬಂಗಾಳದಲ್ಲಿ ರಾತ್ರಿ ಕರ್ಫ್ಯೂ ಪರಿಹಾರವಾಗದಿರಬಹುದು, ಇಲ್ಲಿ “ರಾಜಕೀಯ ಮಾಲಿನ್ಯ” ವನ್ನು ಮೊದಲು ಪರಿಶೀಲಿಸಬೇಕಾಗಿದೆ. ಆದಾಗ್ಯೂ, “ರಾಜಕೀಯ ಮಾಲಿನ್ಯ” ಎಂದು ಅವರು ನಿಖರವಾಗಿ ಉಲ್ಲೇಖಿಸುತ್ತಿರುವುದನ್ನುಮಮತಾ ವಿವರಿಸಲಿಲ್ಲ.
ಓದಿ : ಸಖತ್ತಾಗಿದೆ ಫ್ಯಾಶನ್ ಪ್ರಿಯೆ ನೋರಾ ಫೇತೆಹಿ ನ್ಯೂ ಲುಕ್
ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗೆ ಮುನ್ನೆಚ್ಚರಿಕಾ ಕ್ರಮಗಳ ಕೈಗೊಳ್ಳುವಂತೆ ಸೂಚನೆ ನಿಡಲಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಸೌಲಭ್ಯಗಳನ್ನು ಒಳಗೊಂಡು ತುರ್ತು ಅಗತ್ಯತೆಗಳನ್ನು ಸಿದ‍್ಧತೆ ಮಾಡಿಟ್ಟುಕೊಳ್ಳಿ ಎಂದು ತಿಳಿಸಲಾಗಿದೆ. ಜನರು ಈ ಕೋವಿಡ್ ಸೋಂಕಿಗೆ ಭಯಭೀತರಾಗಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಇನ್ನು, ರಾಜ್ಯದಾದ್ಯಂತ ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವುದಕ್ಕಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಿದ್ದೇವೆ. ಕೋವಿಡ್ ಕೇಂದ್ರಗಳನ್ನು ಹೆಚ್ಚಳ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಲಸಿಕೆಗಳ ಕೊರತೆ ಇರುವುದರಿಂದ ಹೆಚ್ಚುವರಿ ಕೋವಿಡ್ ಲಸಿಕೆಗಳನ್ನು ಪೂರೈಸುವಂತೆ ಕೇಂದ್ರ ಸರ್ಕಾರವನ್ನು ನಾವು
ಮನವಿ ಮಾಡಿಕೊಂಡಿದ್ದೇವೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಓದಿ : ವಿಧಾನಸೌಧದಲ್ಲಿ ಸಿಎಂ ಸಭೆ: ಕೋವಿಡ್ ಹೆಚ್ಚಳಕ್ಕೆ ಸರ್ಕಾರವೇ ಕಾರಣ ಎಂದ ವಿಪಕ್ಷ ನಾಯಕರು