Advertisement

ಸ್ಮಾರ್ಟ್ ಫೋನ್ ಕೊಳ್ಳಲು ದುಡ್ಡಿಲ್ಲದೆ ತನ್ನ ರಕ್ತವನ್ನೇ ಮಾರಲು ಮುಂದಾದ 16 ವರ್ಷದ ಬಾಲಕಿ

01:45 PM Oct 20, 2022 | Team Udayavani |

ಪಶ್ಚಿಮ ಬಂಗಾಲ : ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್‌ಫೋನ್‌ಗಳ ಕ್ರೇಝ್ ಹೆಚ್ಚಾಗತೊಡಗಿದೆ.

Advertisement

ಆದರೆ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಸ್ಮಾರ್ಟ್ ಫೋನ್ ಗೆ ಎಷ್ಟು ಹೊಂದಿಕೊಂಡಿದ್ದಾರೆ ಎಂದರೆ ಫೋನ್ ಇಲ್ಲದೆ ಜೀವನವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ದಾಸರಾಗಿದ್ದಾರೆ, ಮೊಬೈಲ್ ಇದ್ದರೆ ಬೇರೇನೂ ಬೇಡ ಎಂಬ ಮಟ್ಟಕ್ಕೆ ಮಕ್ಕಳ ಮನಸ್ಥಿತಿ ಬೆಳೆದುಬಿಟ್ಟಿದೆ ಅದಕ್ಕೆ ಪೂರಕ ಎಂಬಂತೆ ಪಶ್ಚಿಮ ಬಂಗಾಳದಲ್ಲೊಂದು ವಿಚಿತ್ರ ಸನ್ನಿವೇಶ ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದ 16 ವರ್ಷದ ಬಾಲಕಿಯೊಬ್ಬಳು ಸ್ಮಾರ್ಟ್ ಫೋನ್ ಖರೀದಿಸಲು ದುಡ್ಡಿಲ್ಲದೆ ತನ್ನ ರಕ್ತವನ್ನೇ ಮಾರಿ ಮೊಬೈಲ್ ಖರೀದಿಸಲು ಮುಂದಾಗಿರುವ ಆತಂಕಕಾರಿ ಘಟನೆ ನಡೆದಿದೆ.

ಘಟನೆ ವಿವರ : ಎಲ್ಲರಲ್ಲೂ ಸ್ಮಾರ್ಟ್ ಫೋನ್ ಇದೆ ತನ್ನ ಬಳಿ ಇಲ್ಲ ಹೇಗಾದರೂ ಮಾಡಿ ಫೋನ್ ಖರೀದಿಸಬೇಂದು ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯ 16 ವರ್ಷದ ಬಾಲಕಿಯೊಬ್ಬಳು ಆನ್ ಲೈನ್ ಮೂಲಕ 9,000 ಮೌಲ್ಯದ ಸ್ಮಾರ್ಟ್ ಫೋನ್ ಆರ್ಡರ್ ಮಾಡಿದ್ದಾಳೆ ಆದರೆ ಫೋನ್ ಏನೋ ಆರ್ಡರ್ ಆಯಿತು ಆದರೆ ಖರೀದಿಸಲು ಅವಳ ಬಳಿ ದುಡ್ಡು ಇರಲಿಲ್ಲ, ಅದಕ್ಕೆ ಆಕೆ ಎಲ್ಲಾ ರೀತಿಯ ಆಲೋಚನೆ ಮಾಡಿ ಕೊನೆಗೆ ತನ್ನ ರಕ್ತವನ್ನು ಮಾರಾಟ ಮಾಡಿ ದುಡ್ಡು ಸಂಗ್ರಹಕ್ಕೆ ಮುಂದಾಗಿದ್ದಾಳೆ.

ಇದನ್ನೂ ಓದಿ : ಇಂಡೋನೇಷ್ಯಾದ ಮಸೀದಿಯಲ್ಲಿ ಅಗ್ನಿ ಅವಘಡ : ಧರೆಗುರುಳಿದ ಬೃಹತ್ ಗುಮ್ಮಟ

Advertisement

ಪೋಷಕರಲ್ಲಿ ಟ್ಯೂಷನ್ ಗೆ ಹೋಗುವುದಾಗಿ ಹೇಳಿ ಹೋದ ಅಪ್ರಾಪ್ತ ಬಾಲಕಿ ಬಸ್‌ನಲ್ಲಿ ಸುಮಾರು 30 ಕಿಮೀ ಪ್ರಯಾಣಿಸಿ ನೇರವಾಗಿ ಬಲೂರ್‌ಘಾಟ್ ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಹೋಗಿ ತನ್ನ ರಕ್ತವನ್ನು ಮಾರಾಟ ಮಾಡಲು ವೈದ್ಯರಲ್ಲಿ ಕೇಳಿಕೊಂಡಿದ್ದಾಳೆ ಈ ವಿಚಾರ ಕೇಳಿ ಗಾಬರಿಗೊಂಡ ವೈದ್ಯರು ಬಾಲಕಿಯನ್ನು ಸಮಾಧಾನವಾಗಿ ವಿಚಾರಿಸಿದ್ದಾರೆ ಈ ವೇಳೆ ಬಾಲಕಿ ತನ್ನ ಸಹೋದರನಿಗೆ ಹುಷಾರಿಲ್ಲ ಹಾಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದಾಳೆ, ಆದರೂ ಬಿಡದ ವೈದ್ಯರು ಮತ್ತೆ ವಿಚಾರಣೆ ನಡೆಸಿದಾಗ ತಾನು ಆನ್ ಲೈನ್ ನಲ್ಲಿ ಫೋನ್ ಆರ್ಡರ್ ಮಾಡಿದ್ದು ಅದಕ್ಕಾಗಿ ಹಣದ ಅವಶ್ಯಕತೆ ಇದೆ ಎಂದು ಸತ್ಯ ಹೇಳಿಕೊಂಡಿದ್ದಾಳೆ ಈ ವಿಚಾರ ಕೇಳಿದ ವೈದ್ಯರೇ ಒಮ್ಮೆ ದಂಗಾಗಿದ್ದಾರೆ ಬಳಿಕ ಬಾಲಕಿಯನ್ನು ಸಮಾಧಾನಪಡಿಸಿ ಪೋಷಕರನ್ನು ಆಸ್ಪತ್ರೆಗೆ ಬರಹೇಳಿ ಬಾಲಕಿಗೆ ಬುದ್ದಿವಾದ ಹೇಳಿ ಪೋಷಕರೊಂದಿಗೆ ಕಳುಹಿಸಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next