Advertisement

ಕೋವಿಡ್-19 ಭೀತಿ: ಪಶ್ಚಿಮ ಬಂಗಾಳದಲ್ಲಿ ಲಾಕ್ ಡೌನ್ ಜುಲೈ 31 ರವರೆಗೂ ವಿಸ್ತರಣೆ

01:29 PM Jun 25, 2020 | Mithun PG |

ಕೊಲ್ಕತ್ತಾ: ಕೋವಿಡ್ ವೈರಸ್ ನಿಯಂತ್ರಣಕ್ಕೆ ತರಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಜುಲೈ 31 ರವರೆಗೂ ವಿಸ್ತರಿಸಿದ್ದಾರೆ. ಈಗಾಗಲೇ ಘೋಷಣೆಯಲ್ಲಿರುವ ಲಾಕ್ ಡೌನ್ ಜೂನ್ 30ಕ್ಕೆ ಮುಕ್ತಾಯಗೊಳ್ಳಲಿದೆ.

Advertisement

3 ಗಂಟೆ ನಡೆದ ಸರ್ವಪಕ್ಷ ಸಭೆಯಲ್ಲಿ ಈ ನಿರ್ಧಾರ ಹೊರಡಿಸಲಾಗಿದೆ. ಕೋವಿಡ್ 19 ವೈರಸ್ ಸಾಮೂದಾಯಿಕವಾಗಿ ಹರಡಲು ತೊಡಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜುಲೈ 31 ರವರೆಗೂ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೆಲವೊಂದು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.  ಶಾಲಾ ಕಾಲೇಜು ಕೂಡ ಜುಲೈ 31 ರವರೆಗೂ ಮುಚ್ಚಿರುತ್ತವೆ  ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಲಾಕ್ ಡೌನ್ ವಿಸ್ತರಣೆ ಸಂಬಂಧ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಆದರೆ ಅಂತಿಮವಾಗಿ ಜುಲೈ ತಿಂಗಳಾಂತ್ಯದವರೆಗೆ ಲಾಕ್ ಡೌನ್ ಮುಂದುವರೆಸಲು ತೀರ್ಮಾನಿಸಲಾಯಿತು ಎಂದು ಮಾಧ್ಯಮದ ವರದಿ ತಿಳಿಸಿದೆ

ಪಶ್ಚಿಮ ಬಂಗಾಳಲದಲ್ಲಿ 24 ಗಂಟೆಯಲ್ಲಿ 445 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 15,173ಕ್ಕೆ ಏರಿಕೆಯಾಗಿದೆ. ಮೃತರ ಪ್ರಮಾಣ 591 ಕ್ಕೆ ಏರಿಕೆಯಾಗಿದ್ದು, 4,890 ಸಕ್ರೀಯ ಪ್ರಕರಣಗಳಿವೆ.

Advertisement

ದೇಶದಲ್ಲಿ ಕೋವಿಡ್ ವೈರಸ್ ಹರಡುವ ಪ್ರಮಾಣ ಕೂಡ ಹೆಚ್ಚಾಗಿದ್ದು ಪ್ರತಿನಿತ್ಯ 15 ಸಾವಿರಕ್ಕಿಂತ ಹೆಚ್ಚು ಹೊಸ ಸೋಂಕಿತರು ಕಂಡುಬರುತ್ತಿದ್ದಾರೆ. ಸಾವಿನ ಪ್ರಮಾಣ ಕೂಡ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಹಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next