Advertisement

ದೇಹಕ್ಕೆ ಧನಾತ್ಮಕ ಶಕ್ತಿ…ರುದ್ರಾಕ್ಷಿ ಧಾರಣೆ ಆರೋಗ್ಯಕ್ಕೂ ಒಳ್ಳೆಯದು

05:16 PM Nov 21, 2020 | Nagendra Trasi |

ರುದ್ರಾಕ್ಷ ಮರದಲ್ಲಿ ಸಿಗುವ ಕಾಯಿ ರುದ್ರಾಕ್ಷಿಯನ್ನು ಮಾಲೆಯಾಗಿ ಧರಿಸಲಾಗುತ್ತದೆ. ಇದಕ್ಕೆ ಕಾರಣ ಏನೇ ಇರಬಹುದು. ಆದರೆ ದೇಹಾರೋಗ್ಯಕ್ಕೆ ಇದರಿಂದ ಸಾಕಷ್ಟು ಲಾಭವಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

Advertisement

ರುದ್ರಾಕ್ಷಿಯಲ್ಲಿ ಏಕಮುಖ, ದ್ವಿಮುಖ, ತ್ರಿಮುಖ ಹೀಗೆ ಹಲವಾರು ವಿಂಗಡನೆಗಳಿವೆ. ಪ್ರತಿಯೊಂದು ರುದ್ರಾಕ್ಷಿಗೂ ಅದರದ್ದೇ ಆದ ಮಹತ್ವವೂ ಇದೆ. ಕೆಟ್ಟ ಚಟವಿದ್ದರೆ ಅದರಿಂದ ಹೊರ ಬರಲು ಏಕಮುಖ, ಕುಟುಂಬದಲ್ಲಿ ಸಾಮರಸ್ಯ ನೆಲೆಸಲು ದ್ವಿಮುಖ, ಆತ್ಮವಿಶ್ವಾಸ ಹೆಚ್ಚಲು ತ್ರಿಮುಖ ,ಮಾನಸಿಕ ಒತ್ತಡ ಕಡಿಮೆ ಮಾಡಿ ಜ್ಞಾಪಕ ಶಕ್ತಿ ವೃದ್ಧಿಸಲು ನಾಲ್ಕು ಮುಖ.

ಮೂಲವ್ಯಾಧಿ, ಪಿತ್ತ ಸಮಸ್ಯೆಯಿಂದ ಪಾರಾಗಲು ಪಂಚಮುಖೀ, ಬಾಯಿ, ಮೂತ್ರ, ಕ್ಯಾನ್ಸರ್‌, ಕಿಡ್ನಿ ಸಹಿತ ಇನ್ನು ಹಲವಾರು ರೋಗಗಳನ್ನು ನಿವಾರಿಸಲು
ಆರು ಮುಖ, ಕೆಟ್ಟ ದೃಷ್ಟಿಯಿಂದ ಪಾರಾಗಲು ಒಂಭತ್ತು, ನಿದ್ರಾಹೀನತೆ, ರಕ್ತದೊತ್ತಡ ತಡೆಯಲು 10 ಮುಖ, ಏಕಾಗ್ರತೆ ಹೆಚ್ಚಿಸಲು 11… ಹೀಗೆ ವಿವಿಧ ಕಾರಣಗಳಿಗಾಗಿ ರುದ್ರಾಕ್ಷಿಯನ್ನು ಧರಿಸಿದರೆ ಉತ್ತಮ ಎನ್ನುವ ನಂಬಿಕೆ ಇದೆ.

ವೈಜ್ಞಾನಿಕವಾಗಿಯೂ ರುದ್ರಾಕ್ಷಿ ಧರಿಸುವುದು ಒಳ್ಳೆಯದು ಎಂಬುದು ಸಾಬೀತಾಗಿದೆ. ರುದ್ರಾಕ್ಷಿಯಿಂದ ದೇಹಕ್ಕೆ ಧನಾತ್ಮಕ ಶಕ್ತಿ ದೊರೆಯುತ್ತದೆ. ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ರಕ್ತದೊತ್ತಡ, ಆತಂಕ, ಹಾರ್ಮೋನ್‌ಗಳ ಅಸಮತೋಲನವನ್ನು ನಿವಾರಿಸುತ್ತದೆ ಎಂಬುದು ಸಂಶೋಧನೆಗಳಿಂದಲೂ ಸಾಬೀತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next