Advertisement

ದಾಸವಾಳ ಎಲೆಯ ಪ್ರಯೋಜನಗಳು

11:23 PM Jan 13, 2020 | mahesh |

ದಾಸವಾಳ ಸಾಧಾರಣವಾಗಿ ಎಲ್ಲ ಕಡೆಗಳಲ್ಲೂ ಬೆಳೆಯುವ ಒಂದು ಹೂವಿನ ಗಿಡ. ಇದರ ಒಂದು ಪ್ರಮುಖ ಗುಣವೆಂದರೆ ಕಾಂಡದಿಂದ ಹಿಡಿದು ಹೂ, ಎಲೆಗಳೆಲ್ಲ ಔಷಧ ಪ್ರಮಾಣವನ್ನು ಹೊಂದಿವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ದಾಸವಾಳಕ್ಕೆ ಪ್ರಮುಖ ಹೆಸರಿದೆ. ಇತ್ತೀಚೆಗೆ ಕೆಲವು ಕಸಿ ದಾಸವಾಳ ಗಿಡಗಳು ಬಂದದ್ದನ್ನು ಹೊರತು ಪಡಿಸಿದರೆ ಮೊದಲೆಲ್ಲಾ ದಾಸವಾಳ ಎಲ್ಲ ಕಡೆಗಳಲ್ಲೂ ಬೆಳೆಯುತ್ತಿತ್ತು. ಕೆಂಪು, ಬಿಳಿ, ಹಳದಿ ಬಣ್ಣದ ದಾಸವಾಳ ಹೂಗಳ ಗಿಡಗಳಿವೆ. ಇವುಗಳಲ್ಲಿ ಬಿಳಿ ದಾಸವಾಳವನ್ನು ಔಷಧಕ್ಕೆ ಹೆಚ್ಚು ಬಳಸುತ್ತಾರೆ. ಇದರಲ್ಲಿ ವಿಟಮಿನ್‌ ಸಿ ಹಾಗೂ ಕಬ್ಬಿಣಯುಕ್ತ ಅಂಶಗಳು ಹೆಚ್ಚಾಗಿದ್ದು ಆರೋಗ್ಯ ಸುಧಾರಿಸಲು ಸಹಕಾರಿ.

Advertisement

ದಾಸವಾಳ ಚಹಾ
ದಾಸವಾಳ ಹೂಗಳ ಚಹಾ ತಯಾರಿಸಿ ಕುಡಿಯುವುದರಿಂದ ದೇಹಕ್ಕೆ ಆರೋಗ್ಯ ಲಭಿಸುತ್ತದೆ. ಇದರಿಂದ ದೇಹದಲ್ಲಿರುವ ವಿಷಯುಕ್ತ ಅಂಶಗಳು ಹೋಗಿ ಕಶ್ಮಲಗಳು ನಿವಾರಣೆಯಾಗುತ್ತವೆ. ಬಿಪಿ ಅಧಿಕವಾಗಿರುವವರು ಈ ಚಹಾ ತಯಾರಿಸಿ ಸೇವಿಸುವುದರಿಂದ ಬ್ಲಿಡ್‌ ಪ್ರಶರ್‌ ಅಧಿವಾಗಿರುವವರಿಗೆ ಬಿಪಿ ಕಡಿಮೆಯಾಗಲು ಸಹಾಯ ಮಾಡುತ್ತದೆ.

ಮದುಮೇಹ ರೋಗಿಗಳು ಈ ಚಹಾವನ್ನು ಸೇವಿಸುವುದರಿಂದ ಅಥವಾ ದಾಸವಾಳದ ಎಲೆಯನ್ನು ಹಾಗೆಯೇ ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಬಿಳಿ ದಾಸವಾಳ ಚಹಾ ತಯಾರಿಸಲು ಹೆಚ್ಚು ಸೂಕ್ತ. ದಾಸವಾಳದ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಸೇವಿಸುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಕರುಳಿಗೆ ಉಂಟಾಗುವ ಹಾನಿಯನ್ನು ತಡೆಯಲು ಈ ದ್ರಾವಣ ಸಹಕಾರಿ.

ತೂಕ ಇಳಿಕೆಗೆ ಸಹಕಾರಿ
ದಾಸವಾಳದ ಹೂವಿನ ರಸವನ್ನು ಸೇವನೆ ಮಾಡುವುದರಿಂದ ತೂಕ ಇಳಿಕೆಯಗುತ್ತದೆ. ಇದರಲ್ಲಿರುವ ಆ್ಯಂಟಿಬಯಾಟಿಕ್‌ ಅಂಶಗಳು ದೇಹದಲ್ಲಿರುವ ಕೊಬ್ಬುಗಳನ್ನು ಕರಗಿಸಲು ಸಹಕಾರಿ.

ಸೌಂದರ್ಯವರ್ಧಕ
ದಾಸವಾಳವನ್ನು ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತದೆ. ದಾಸವಾಳದ ಎಲೆಯನ್ನು ಹಿಂಡಿ ರಸ ತೆಗೆದು ಮುಖಕ್ಕೆ ಹಚ್ಚುವುದರಿಂದ ಮಖ ಮೃದುವಾಗಿ ಹೊಳೆಯುತ್ತದೆ. ಅದು ಮಾತ್ರವಲ್ಲದೆ ಎಲೆಯ ರಸವನ್ನು ತೆಗೆದು ಹಾಕುವುದರಿಂದ ಉಷ್ಣ ನಿವಾರಣೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ಸಹಕಾರಿ. ದಾಸವಾಳ ಎಲೆಯ ಪೇಸ್ಟ್‌ ಅನ್ನು ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಹೊಳಪು ಬರುತ್ತದೆ. ಹೀಗೆ ದಾಸವಾಳ ಬಹೂಪಯೋಗಿ ಬಳಸಲ್ಪಡುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next