Advertisement

ಏಲಕ್ಕಿಯಿಂದ ಎಷ್ಟೆಲ್ಲಾ ಆರೋಗ್ಯ ಲಾಭಗಳಿವೆ ತಿಳಿದಿದೆಯೇ

09:07 PM Jun 27, 2023 | Team Udayavani |

ಭಾರತದ ಹೆಚ್ಚಿನವರ ಮನೆಯ ಅಡುಗೆಮನೆಯಲ್ಲಿ ಏಲಕ್ಕಿಯನ್ನು ಮಸಾಲೆ ಪದಾರ್ಥವಾಗಿ ಉಪಯೋಗಿಸುತ್ತಾರೆ. ಆದರೆ ಏಲಕ್ಕಿಯಲ್ಲಿರುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಹಲವರಿಗೆ ತಿಳಿದಿಲ್ಲ. ವಿವಿಧ ಖಾದ್ಯಗಳ ತಯಾರಿಕೆಗೆ ಏಲಕ್ಕಿ ಬಳಸುವುದು ಸಾಮಾನ್ಯ. ಔಷಧೀಯ ಗುಣ ಹೊಂದಿರುವ ಏಲಕ್ಕಿ ವಾಸನೆ ಮತ್ತು ಆಹಾರದ ರುಚಿ ಹೆಚ್ಚಿಸುತ್ತದೆ. ಮಸಾಲೆಯಾಗಿ ಬಳಸಲಾಗುವ ಏಲಕ್ಕಿಯಿಂದ ಹಲವು ಆರೋಗ್ಯಕರ ಪ್ರಯೋಜನಗಳು ಇವೆ. ಏಲಕ್ಕಿಯ ಆರೋಗ್ಯಕರ ಉಪಯೋಗಳು ಹೀಗಿವೆ:

Advertisement

ವಾಂತಿ ಸಮಸ್ಯೆ:

ಕೆಲವರಿಗೆ ವಾಹನಗಳಲ್ಲಿ ದೂರದೂರಿಗೆ ಪ್ರಯಾಣ ಮಾಡುವಾಗ ವಾಂತಿಯಾಗುತ್ತದೆ. ಈ ಸಮಸ್ಯೆ ಇರುವವರು ಪ್ರಯಾಣ ಆರಂಭಿಸುವ ಮೊದಲು ಬಾಯಿಯಲ್ಲಿ ಏಲಕ್ಕಿಯನ್ನು ಇರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ವಾಂತಿಯಾಗುವುದರಿಂದ ದೂರವಿರಬಹುದು.

ಬಾಯಿಯ ದುರ್ವಾಸನೆಗೆ:

ಏಲಕ್ಕಿ ರುಚಿಯನ್ನು ಹೆಚ್ಚಿಸುವುದರೊಂದಿಗೆ ಬಾಯಿ ಫ್ರೆಶ್ನರ್ ಆಗಿಯೂ ಬಳಸಬಹುದು. ಏಲಕ್ಕಿ ತಿನ್ನುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಗೆ ಸಹಾಯ ಮಾಡುತ್ತದೆ. ಏಲಕ್ಕಿಯನ್ನು ಎಲ್ಲಾ ಸಮಯದಲ್ಲೂ ಬಾಯಿಯಲ್ಲಿ ಇಟ್ಟುಕೊಳ್ಳಬಹುದು.

Advertisement

ಅಸ್ತಮಾ ಕಡಿಮೆಯಾಗಲು ಸಹಕರಿ:

ಏಲಕ್ಕಿಯಿಂದ ಅಸ್ತಮಾ ಮತ್ತು ನಾಯಿಕೆಮ್ಮುವಿನ ನಿವಾರಣೆ ಸಾಧ್ಯವಾಗುತ್ತದೆ. ಏಲಕ್ಕಿ ಹುಡಿಯೊಂದಿಗೆ ಜೇನುತುಪ್ಪ ಪೇಸ್ಟ್ ಮಾಡಿಕೊಳ್ಳಬೇಕು. ಈ ಮಿಶ್ರಣದ ನಿಯಮಿತವಾಗಿ ಸೇವಿಸುತ್ತಿದ್ದರೆ ನಾಯಿಕೆಮ್ಮು ಮತ್ತು ಅಸ್ತಮಾದಿಂದ ಪರಿಹಾರ ಸಾಧ್ಯ.

ಅಧಿಕ ರಕ್ತದೊತ್ತಡ ನಿವಾರಣೆಗೆ:

ನಿಯಮಿತವಾಗಿ ಏಲಕ್ಕಿ ತಿಂದರೆ ಹಾಗೂ ಏಲಕ್ಕಿಯನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಇದು ಹಲ್ಲುಗಳಲ್ಲಿ ಇರುವ ಬ್ಯಾಕ್ಟೀರಿಯಾ ತೊಡೆದು ಹಾಕಲು ಸಹಾಯ ಮಾಡುತ್ತದೆ.  ಏಲಕ್ಕಿ ಪುಡಿಯನ್ನು ಮೂರು ವಾರ ದಿನಕ್ಕೆ ಮೂರು ಬಾರಿ ಸೇವಿಸಿದರೆ ರಕ್ತದೊತ್ತಡ ಸಮಸ್ಯೆ ಕಡಿಮೆ ಆಗುತ್ತದೆ.

ತಲೆ ನೋವು ನಿವಾರಣೆಗೆ:

ಏಲಕ್ಕಿ ಪುಡಿಯಿಂದ ಪೇಸ್ಟ್ ತಯಾರಿಸಿ ಅದನ್ನು ನೆತ್ತಿಗೆ ಹಚ್ಚಿಕೊಳ್ಳುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

ಗ್ಯಾಸ್ಟ್ರಿಕ್ ನಿವಾರಣೆಗೆ:

ಏಲಕ್ಕಿಯಲ್ಲಿರುವ ಸಾರಭೂತ ತೈಲವು ಹೊಟ್ಟೆಯ ಒಳ ಪದರವನ್ನು ಬಲಪಡಿಸುತ್ತದೆ. ಇದರಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗಲು ಸಹಾಯ ಮಾಡುತ್ತದೆ.

ಒತ್ತಡ ಕಡಿಮೆಯಾಗುತ್ತದೆ:

ಒತ್ತಡದ ನಿವಾರಣೆಗೆ ಏಲಕ್ಕಿ ಸೇವನೆ ಪ್ರಯೋಜನಕಾರಿ. ನಿಮಗೆ ಒತ್ತಡ ಹೆಚ್ಚಾಗುತ್ತಿದೆ ಎಂದು ಅನಿಸಿದರೆ ಎರಡು ಏಲಕ್ಕಿಯನ್ನು ಬಾಯಿಗೆ ಹಾಕಿ ಅಗಿಯಿರಿ. ಏಲಕ್ಕಿ ಆಗಿಯುವುದರಿಂದ ಕೂಡಲೇ ಹಾರ್ಮೋನುಗಳು ಬದಲಾಯಿಸುತ್ತದೆ. ಇದರಿಂದಾಗಿ ಒತ್ತಡ ನಿವಾರಣೆ ಸಾಧ್ಯ ಎನ್ನಲಾಗುತ್ತದೆ.

ಹೃದಯಾಘಾತ:

ಹೃದಯಾಘಾತದ ವಿರುದ್ಧ ರಕ್ಷಣೆಯನ್ನು ನೀಡುವಲ್ಲಿ ಏಲಕ್ಕಿ ಸಹಕಾರಿಯಾಗಿದೆ. ಮನೆಯಿಂದ ಹೊರಹೋಗುವ ಸಂದರ್ಭ ಏಲಕ್ಕಿಯನ್ನು ಜಗಿಯುವುದು ಉತ್ತಮ ಪರಿಹಾರ.

ಹಲ್ಲಿನ ವಸಡಿನ ಸಮಸ್ಯೆ:

ಏಲಕ್ಕಿ ಹಲ್ಲಿನ ವಸಡಿನ ತೊಂದರೆ ಮತ್ತು ಇನ್‌ಫೆಕ್ಷನ್‌ನಿಂದ ಕಾಪಾಡುತ್ತದೆ.

ತೂಕ ನಷ್ಟಕ್ಕೆ ಸಹಕರಿ:

ತೂಕ ಮತ್ತು ಬೊಜ್ಜು ಕರಗಲು ಆಹಾರದಲ್ಲಿ ಏಲಕ್ಕಿ ಸೇರಿಸುವುದು ಉತ್ತಮ ಪರಿಹಾರ. ಏಲಕ್ಕಿಯಲ್ಲಿರುವ ಪೋಷಕಾಂಶಗಳು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎನ್ನಲಾಗುತ್ತದೆ.

-ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next