Advertisement
ಯಕೃತ್ ಯಾಕೆ ಅಷ್ಟು ಪ್ರಾಮುಖ್ಯ?
Related Articles
Advertisement
ಮಹಿಳೆಯರು ದಿನಕ್ಕೆ ಒಂದು ಅಳತೆ ಮತ್ತು ಪುರುಷರು ದಿನಕ್ಕೆ ಎರಡು ಅಳತೆಗಳಿಗಿಂತ ಹೆಚ್ಚು ಮದ್ಯಪಾನ ಮಾಡಬಾರದು. ನೀವು ಈಗಾಗಲೇ ಯಕೃತ್ ಸಂಬಂಧಿ ಕಾಯಿಲೆಯನ್ನು ಹೊಂದಿದ್ದರೆ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳಿತು.
ಆರೋಗ್ಯಪೂರ್ಣ ದೇಹತೂಕವನ್ನು ಕಾಯ್ದುಕೊಳ್ಳಿ
ಅತಿಯಾದ ದೇಹತೂಕ ಹೊಂದುವುದನ್ನು ಮತ್ತು ನಿಮ್ಮ ಹೊಟ್ಟೆ, ಸೊಂಟದ ಸುತ್ತ ಬೊಜ್ಜು ಶೇಖರಗೊಳ್ಳುವುದನ್ನು ತಡೆಯಿರಿ. ಆರೋಗ್ಯಪೂರ್ಣ ಆಹಾರ ಸೇವನೆ, ನಿಯಮಿತ ವ್ಯಾಯಾಮದ ಮೂಲಕ ನಾನ್-ಅಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಉಂಟಾಗದಂತೆ ರಕ್ಷಿಸಿಕೊಳ್ಳಿ, 18-23 ಕೆಜಿ/ಸೆಂ. ಮೀ.2 ಬಿಎಂಐ ಕಾಪಾಡಿಕೊಳ್ಳಿರಿ.
ಆರೋಗ್ಯಪೂರ್ಣ ಮತ್ತು ಸಮತೋಲಿತ ಆಹಾರ
ಹೆಚ್ಚು ಕೊಬ್ಬಿನಂಶ ಇರುವ ಅತಿಯಾದ ಕ್ಯಾಲೊರಿ ಹೊಂದಿರುವ ಆಹಾರವಸ್ತುಗಳು (ಎಣ್ಣೆ/ತುಪ್ಪ/ವನಸ್ಪತಿ), ಸಕ್ಕರೆ ಮತ್ತು ಮೈದಾದಂತಹ ಸಂಸ್ಕರಿತ ಕಾಬೊìಹೈಡ್ರೇಟ್ ಗಳನ್ನು ಹೆಚ್ಚು ಸೇವಿಸಬೇಡಿ. ತರಕಾರಿ ಮತ್ತು ಹಣ್ಣುಹಂಪಲುಗಳಂತಹ ನಾರಿನಂಶ ಅಧಿಕವಿರುವ ಆಹಾರಗಳನ್ನು ಹೆಚ್ಚು ಸೇವಿಸಿ. ಮಟನ್, ಬೀಫ್, ಪೋರ್ಕ್ ಇತ್ಯಾದಿ ಕೆಂಪು ಮಾಂಸಗಳಿಗೆ ಬದಲಾಗಿ ಮೀನು, ಚಿಕನ್‌ನಂತಹ ಬಿಳಿ ಮಾಂಸ ಹೆಚ್ಚು ಉಪಯೋಗಿಸಿ.
ಅಪಾಯ ಹೆಚ್ಚಿಸಿಕೊಳ್ಳುವ ನಡವಳಿಕೆಯನ್ನು ತ್ಯಜಿಸಿ
ಒಬ್ಬರಿಗಿಂತ ಹೆಚ್ಚು ಮಂದಿ ಲೈಂಗಿಕ ಸಂಗಾತಿಗಳ ಜತೆಗೆ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತಹ ಅಪಾಯ ಹೆಚ್ಚಿಸಿಕೊಳ್ಳುವ ನಡವಳಿಕೆ ಬೇಡ. ಹಾಗೆಯೇ ಮಾದಕದ್ರವ್ಯ ವ್ಯಸನಕ್ಕೂ ಬಲಿಯಾಗಬೇಡಿ. ಇದರಿಂದ ವೈರಲ್ ಹೆಪಟೈಟಿಸ್ ಬಿ ಮತ್ತು ಸಿ ಸೋಂಕು ತಗಲುವುದು ತಪ್ಪುತ್ತದೆ.
ಲಸಿಕೆ
ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಎ ವಿರುದ್ಧ ಪರಿಣಾಮಕಾರಿ ಲಸಿಕೆಗಳು ಲಭ್ಯವಿದ್ದು, ಇವುಗಳನ್ನು ಹಾಕಿಸಿಕೊಳ್ಳಿ.
ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ
ಶೌಚಾಲಯ ಬಳಕೆಯ ಬಳಿಕ, ಆಹಾರ ಸೇವನೆ ಅಥವಾ ಆಹಾರ ತಯಾರಿಗೆ ಮುನ್ನ ಮತ್ತು ಬಳಿಕ ಕೈಗಳನ್ನು ಸಾಬೂನು ಉಪಯೋಗಿಸಿ ಶುಚಿಗೊಳಿಸಿಕೊಳ್ಳುವುದು, ಸರಿಯಾಗಿ ಬೇಯಿಸಿದ ಆಹಾರವನ್ನು ಸೇವಿಸುವುದು, ಚೆನ್ನಾಗಿ ಕುದಿದು ಆರಿಸಿದ ನೀರನ್ನು ಕುಡಿಯುವುದು ಇತ್ಯಾದಿ ವೈಯಕ್ತಿಕ ನೈರ್ಮಲ್ಯ ಕ್ರಮಗಳಿಂದ ಹೆಪಟೈಟಿಸ್ ಎ ಮತ್ತು ಇ ಸೋಂಕುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಗಡ್ಡ ತೆಗೆಯುವ ರೇಜರ್, ಹಲ್ಲುಜ್ಜುವ ಬ್ರಶ್, ಚುಚ್ಚುಮದ್ದಿನ ಸೂಜಿಗಳು ಇತ್ಯಾದಿ ವೈಯಕ್ತಿಕ ಸಲಕರಣೆಗಳನ್ನು ಇತರರ ಜತೆಗೆ ಹಂಚಿಕೊಳ್ಳದೆ ಇರುವ ಮೂಲಕ ಹೆಪಟೈಟಿಸ್ ಬಿ ಮತ್ತು ಸಿಗಳಿಂದ ರಕ್ಷಣೆ ಪಡೆಯಬಹುದು.
ವೈದ್ಯರನ್ನು ಸಂಪರ್ಕಿಸಿ
ಅತಿಯಾದ ಮದ್ಯಸೇವನೆ, ಯಕೃತ್ ಕಾಯಿಲೆಯ ಕೌಟುಂಬಿಕ ಇತಿಹಾಸ, ಅತಿಯಾದ ದೇಹತೂಕ, ಮಧುಮೇಹ, ಹೆಪಟೈಟಿಸ್ ಬಿ/ಸಿ ಸೋಂಕು ಇತ್ಯಾದಿ ಅಪಾಯಾಂಶಗಳು ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ವೈದ್ಯಕೀಯ ಆರೈಕೆ ಪಡೆಯಿರಿ.
ನಮ್ಮ ಜೀವನಶೈಲಿಯಲ್ಲಿ ಯಕೃತ್ತಿನ ಆರೋಗ್ಯಕ್ಕೆ ಪೂರಕವಾದ ಆರೋಗ್ಯಪೂರ್ಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಜೀವನವನ್ನು ನಮ್ಮದಾಗಿಸಿಕೊಳ್ಳುವ ಶಪಥವನ್ನು ಹೊಸ ವರ್ಷದಲ್ಲಿ ನಡೆಸೋಣ. ಇದರಿಂದ ಸಮಾಜದಲ್ಲಿ ಯಕೃತ್ ಕಾಯಿಲೆಗಳ ಒಟ್ಟು ಹೊರೆ ಕಡಿಮೆಯಾಗುವುದಕ್ಕೆ ಸಹಾಯವಾಗಲಿದೆ. ನಮ್ಮ ದೈನಿಕ ಜೀವನದಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಗಳು ಕೂಡ ಭವಿಷ್ಯದಲ್ಲಿ ಯಕೃತ್ತನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ.
ಡಾ| ಅನುರಾಗ್ ಶೆಟ್ಟಿ,
ಮೆಡಿಕಲ್ ಗ್ಯಾಸ್ಟ್ರೊಎಂಟರಾಲಜಿಸ್ಟ್,
ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಕಲ್ ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)