Advertisement
ಪಿಂಚಣಿ ಸಿಗದೆ ಪರದಾಟಬಡತನದಿಂದ ಸಂಕಷ್ಟಕ್ಕೆ ಸಿಲಿಕಿರುವ, ಅನಾರೋಗ್ಯದಿಂದ ಬಳಲಿದವರಿಗೆ ಆರ್ಥಿಕ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಸರಕಾರ ಹಲವು ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಿದೆ. ಆದರೆ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಪಿಂಚಣಿ ಸಿಗದ ಹಿನ್ನೆಲೆಯಲ್ಲಿ ವೃದ್ಧರು ನಿರ್ಗತಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪಿಂಚಣಿ ಹಣಕ್ಕಾಗಿ ನೂರಾರು ರೂ. ಖರ್ಚು ಮಾಡಿಕೊಂಡು ಮಾಸಾಶನ ವಿಚಾರಿಸಿಕೊಂಡು ಬ್ಯಾಂಕ್ ಹಾಗೂ ಅಂಚೆ ಕಚೇರಿಗೆ ಅಲೆದಾಡುತ್ತಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆ ಅನ್ವಯ ವೃದ್ಧಾಪ್ಯ, ವಿಧವಾವೇತನ, ವಿಶೇಷಚೇತನ, ಸಂಧ್ಯಾಸುರಕ್ಷಾ ಸೇರಿದಂತೆ ಇತರೆ ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನ ಕೆಲವು ಫಲಾನುಭವಿಗಳಿಗೆ ಫೆಬ್ರವರಿಯಿಂದ ಬಾಕಿ ಇದೆ. ಕೊರೊನಾ ಭೀತಿಯಿಂದ ದೇಶವೇ ಲಾಕ್‌ಡೌನ್ ಆಗಿದೆ. ಶೇ.99ರಷ್ಟು ಗ್ರಾಮೀಣ ಭಾಗದ ಜನರು ಉದ್ಯೋಗವಿಲ್ಲದೆ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಇಂತಹ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಸರಕಾರದಿಂದ ಬರುವ ಮಾಸಾಶನ ನಂಬಿಕೊಂಡಿರುವ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ಹಣ ಬರದೆ ಇರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ 2,76, 209 ಮಂದಿ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದಾರೆ. ಉಡುಪಿಯಲ್ಲಿ ವೃದ್ಧಾಪ್ಯ ವೇತನ 10,436, ಅಂಗವಿಕಲರು 12,035, ವಿಧವಾ ವೇತನ 38,579, ಸಂಧ್ಯಾ ಸುರಕ್ಷ 63,524, ಮನಸ್ವಿನಿ 3,869, ಮೈತ್ರಿ 27 ಫಲಾನುಭವಿಗಳು ಸೇರಿದಂತೆ 1,28,470 ಮಂದಿ ಪಿಂಚಣಿ ಪಡೆಯುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ವೃದ್ದಾಪ್ಯ ವೇತನ 11,480, ಅಂಗವಿಕಲ ವೇತನ 19,315, ಮನಸ್ವಿನಿ 5,858, ಸಂಧ್ಯಾ ಸುರಕ್ಷಾ 59,200, ಮೈತ್ರಿ 170 ಸೇರಿದಂತೆ ಇತರೆ ಒಟ್ಟು 1,47,739 ಮಂದಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದಾರೆ.
Related Articles
ಮಾಸಾಶನ ಸಿಗದೆ ಇರುವ ಕುರಿತು ಒಂದೆರಡು ದೂರುಗಳು ಬಂದಿವೆ. ಪಿಂಚಣಿ ಸಿಗದೆ ಇರುವ ಫಲಾನುಭವಿಗಳು ಸಮೀಪದ ಸ್ಥಳೀಯಾಡಳಿತದ ಗ್ರಾಮಲೆಕ್ಕಾಧಿಕಾರಿಯನ್ನು ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಳ್ಳಿ.
-ಪ್ರದೀಪ ಕುಡೇìಕರ್, ತಹಶೀಲ್ದಾರ್, ಉಡುಪಿ ತಾಲೂಕು.
Advertisement