ವ್ಯಾಟಿಕನ್ ಸಿಟಿ: ಜಾತ್ಯತೀತ ಯುರೋಪ್‌ನಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದ ಜರ್ಮನ್ ಮೂಲದ ಪೋಪ್ ಎಮೆರಿಟಸ್ ಬೆನೆಡಿಕ್ಟ್ 16 ಶನಿವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
600 ವರ್ಷಗಳಲ್ಲಿ ಗೌರವಯುತ ಪೂಜ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಪೋಪ್ ಆಗಿ ಬೆನೆಡಿಕ್ಟ್ 16 ಶಾಶ್ವತವಾಗಿ ನೆನಪಿನಲ್ಲಿ ಉಳಿದುಕೊಳ್ಳುತ್ತಾರೆ.ವಯೋ ಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.
ಪೋಪ್ ಬೆನೆಡಿಕ್ಟ್ ಅವರು ಫೆಬ್ರವರಿ 11, 2013 ರಂದು ತಮ್ಮ ವಿಶಿಷ್ಟವಾದ, ಮೃದು ಧ್ವನಿಯ ಲ್ಯಾಟಿನ್ ಭಾಷೆಯಲ್ಲಿ, ಅವರು ಎಂಟು ವರ್ಷಗಳ ಕಾಲ ಮುನ್ನಡೆಸಿದ್ದ ಕ್ಯಾಥೋಲಿಕ್ ಚರ್ಚ್ ಅನ್ನು ನಡೆಸಲು ಇನ್ನು ಮುಂದೆ ನನ್ನಲ್ಲಿ ಶಕ್ತಿಯಿಲ್ಲ ಎಂದು ಘೋಷಿಸಿ ಜಗತ್ತನ್ನು ಬೆರಗುಗೊಳಿಸಿದ್ದರು.
ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ ಅವರು “ ಪೋಪ್ ಎಮೆರಿಟಸ್ ಬೆನೆಡಿಕ್ಟ್ 16 ಶನಿವಾರ ಬೆಳಗ್ಗೆ ವ್ಯಾಟಿಕನ್‌ನ ಮೇಟರ್ ಎಕ್ಲೇಸಿಯಾದಲ್ಲಿ 9. 34 ಕ್ಕೆ ಇಹಲೋಕ ತ್ಯಜಿಸಿದರು ಎಂದು ನೋವಿನಿಂದ ತಿಳಿಸುತ್ತೇನೆ. ಹೆಚ್ಚಿನ ಮಾಹಿತಿಯನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
”ಮಾಜಿ ಕಾರ್ಡಿನಲ್ ಜೋಸೆಫ್ ರಾಟ್ಜಿಂಗರ್ ಎಂದಿಗೂ ಪೋಪ್ ಆಗಲು ಬಯಸಿರಲಿಲ್ಲ, 78 ನೇ ವಯಸ್ಸಿನಲ್ಲಿ ತನ್ನ ಸ್ಥಳೀಯ ಬವೇರಿಯಾದ “ಶಾಂತಿ ಮತ್ತು ಸ್ತಬ್ಧ” ದಲ್ಲಿ ತನ್ನ ಅಂತಿಮ ವರ್ಷಗಳನ್ನು ಬರೆಯಲು ಯೋಜಿಸುತ್ತಿದ್ದರು. ಬದಲಾಗಿ, ಅವರು ಸೇಂಟ್ ಜಾನ್ ಪಾಲ್ II ಅವರ ಹೆಜ್ಜೆಗಳನ್ನು ಅನುಸರಿಸಲು ಒತ್ತಾಯಿಸಲ್ಪಟ್ಟರು.
ಈಗಿನ ಪೋಪ್ ಫ್ರಾನ್ಸಿಸ್ ಅವರು ನಾಲ್ಕು ದಿನಗಳ ಹಿಂದೆ ತಮ್ಮ ಪೂರ್ವಾಧಿಕಾರಿ ಪೋಪ್ ಎಮೆರಿಟಸ್ ಬೆನೆಡಿಕ್ಟ್ 16 ಅವರು ತುಂಬಾ ಅಸ್ವಸ್ಥರಾಗಿದ್ದಾರೆ. ದೇವರು ಅವರನ್ನು ಕೊನೆಯವರೆಗೂ ಸಾಂತ್ವನಗೊಳಿಸುತ್ತಾನೆ ಎಂದು ಹೇಳಿ ಪ್ರಾರ್ಥಿಸಲು ಭಕ್ತರನ್ನು ಕೇಳಿಕೊಂಡಿದ್ದರು.