ಕೊಂಕಣಿ ಸಿನೆಮಾ “ಬೆಂಡ್ಕಾರ್’ ಸದ್ಯ ಕರಾವಳಿ ಭಾಗದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬೆಂಡ್ಕಾರ್ ಎಂದರೆ ಬ್ರಾಸ್ ಬ್ಯಾಂಡ್ ಕಲಾವಿದ. ನಶಿಸುತ್ತಿರುವ ಬ್ರಾಸ್ ಬ್ಯಾಂಡ್ ಕಲೆಯ ಬಗ್ಗೆ ಚಿಂತಿಸುವ, ಅದನ್ನು ಉಳಿಸಲು ಹೆಣಗುವ, ತನ್ನ ಕಿರಿ ಸೋದರನಿಗೆ ಈ ಕಲೆಯ ಬಗ್ಗೆ ಪ್ರೇಮ ಮೂಡಿಸಲು ಶ್ರಮ ಪಡುವ ಬ್ರಾಸ್ ಬ್ಯಾಂಡ್ ಕಲಾವಿದನ ತುಮುಲಗಳ ಕಥೆಯೇ ಈ ಸಿನೆಮಾ.
ಪ್ರಿನ್ಸ್ ಜೇಕಬ್ ಪ್ರಮುಖ ಪಾತ್ರದಲ್ಲಿದ್ದಾರೆ. ಹಿಂದಿ-ಮರಾಠಿ ಚಿತ್ರಗಳ ಮೇರು ನಟಿ ವರ್ಷಾ ಉಸಾYಂವ್ಕರ್, ಜೋನ್ ಡಿ’ಸಿಲ್ವಾ, ಸ್ಟಾನಿ ಆಲ್ವಾರಿಸ್, ಕೆವಿನ್ ಡಿ’ಮೆಲ್ಲೊ, ನೈಸಾ ಲೊಟಿÉಕರ್, ಸುನೀತಾ ಮಿನೇಜಸ್, ದೀಪಕ್ ಪಾಲಡ್ಕಾ, ಜೋಸೆಫ್ ಮಥಾಯಸ್, ಕ್ಲಾಡಿ ಡಿಲೀಮಾ, ಸಲೋಮಿ, ಸ್ನೇಹಲತಾ ಮೆಹತಾ, ಆಲ್ವಿನ್ ಅಂದ್ರಾದೆ, ಸುಜಾತಾ ಆಂದ್ರಾದೆ, ಆರ್ಚಿಬಾಲ್ಡ್ ಫುರ್ಟಾಡೊ, ಫ್ಲೋಯ್ಡ ಡಿಮೆಲ್ಲೊ ಮತ್ತಿತರರು ಇದ್ದಾರೆ.
ವಿಲ್ಸನ್ ಕಟೀಲು ಸಾಹಿತ್ಯ ಬರೆದು, ಪ್ಯಾಟ್ಸನ್ ಪಿರೇರ ಸಂಗೀತ ನೀಡಿದ್ದಾರೆ. ಶಫಿಕ್ ಶೇಖ್ ಕೆಮರಾ ಕೈಚಳಕವಿದೆ. ಪಪ್ಪು ಖನ್ನಾ, ನಿಶಾಂತ್ ಮತ್ತು ಆವಿಲ್ ಡಿ’ಕ್ರೂಸ್ ನೃತ್ಯ ಸಂಯೋಜನೆ ಮಾಡಿದ್ದು, ಪ್ರೇಮ್ ಡಿ’ಸೋಜಾ ನಿರ್ವಹಣೆ ಸಹಕಾರ ನೀಡಿದ್ದಾರೆ.
ಕೊಂಕಣಿಯ ಎಲ್ಲ ಭಾಷಾ ಪ್ರಭೇದಗಳ ಜನರನ್ನು ತಲುಪುವ ನಿಟ್ಟಿನಲ್ಲಿ, ಪ್ರಥಮ ಬಾರಿಗೆ ಮಂಗಳೂರು ಪ್ರಭೇದ ಹಾಗೂ ಗೋವಾ ಪ್ರಭೇದ ಹೀಗೆ ಎರಡು ಭಾಷಾ ಪ್ರಭೇದಗಳಲ್ಲಿ ಈ ಚಿತ್ರ ತಯಾರಾಗಿದೆ. ಕೊಂಕಣಿಯ ಹ್ಯಾಟ್ರಿಕ್ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಕಥೆ ಚಿತ್ರಕಥೆ ಬರೆದು ಚಿತ್ರ ನಿರ್ದೇಶಿಸಿದ್ದಾರೆ. ಡಾಲ್ಫಿಮೇ ರೆಬೆಲ್ಲೊ, ಹ್ಯಾರಿ ಫೆರ್ನಾಂಡಿಸ್, ಸ್ಟಾನಿ ಆಲ್ವಾರಿಸ್ ಮತ್ತು ಪ್ರಿನ್ಸ್ ಜೇಕಬ್ ನಿರ್ಮಾಣದ ಹೊಣೆಯನ್ನು ವಹಿಸಿದ್ದಾರೆ ಎಂದರು.