ಮುಂಬಯಿ: ಬಾಂಬೆ ಷೇರುಪೇಟೆಯ ಗುರುವಾರದ(ಜುಲೈ 04) ವಹಿವಾಟಿನಲ್ಲೂ ಬಿಎಸ್ ಇ ಸೆನ್ಸೆಕ್ಸ್ 80,000 ಅಂಕ ದಾಟಿ ದಾಖಲೆ ಬರೆದಿದೆ. ನಿಫ್ಟಿ ಕೂಡಾ ಅಧಿಕ ಅಂಕ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ ಕಂಡಿದೆ.
ಇದನ್ನೂ ಓದಿ:Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ
ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 143.73 ಅಂಕಗಳ ಏರಿಕೆಯೊಂದಿಗೆ 80,130.53 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ನಿಫ್ಟಿ 40.10 ಅಂಕ ಜಿಗಿತ ಕಂಡಿದ್ದು, 24,326.60 ಅಂಕಗಳ ಮಟ್ಟ ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆ ಷೇರುಪೇಟೆಯ ಸೂಚ್ಯಂಕ ಏರಿಕೆಗೆ ಕಾರಣವಾಗಿದೆ. ಎಚ್ ಸಿಎಲ್ ಟೆಕ್ನಾಲಜೀಸ್, ಐಸಿಐಸಿಐ ಬ್ಯಾಂಕ್, ಟಿಸಿಎಸ್, ಇನ್ಫೋಸಿಸ್ ಮತ್ತು ಟಾಟಾ ಮೋಟಾರ್ಸ್ ಷೇರು ಲಾಭಗಳಿಸಿದೆ.
ಮತ್ತೊಂದೆಡೆ ಎಚ್ ಡಿಎಫ್ ಸಿ ಬ್ಯಾಂಕ್, ಅದಾನಿ ಎಂಟರ್ ಪ್ರೈಸಸ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಆಲ್ಟ್ರಾ ಟೆಕ್ ಸಿಮೆಂಟ್ ಷೇರು ನಷ್ಟ ಕಂಡಿದೆ.