Advertisement

Bihar; ಬಿಸಿಯೂಟ ಸಿದ್ಧಪಡಿಸಲು ಶಾಲೆ ಬೆಂಚುಗಳೇ ಬೆಂಕಿಗೆ: ತನಿಖೆಗೆ ಆದೇಶ

01:24 AM Jan 12, 2024 | Team Udayavani |

ಪಟ್ನಾ: ಬಿಹಾರದ ಪಟ್ನಾ ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಮಹಿಳೆ ವಿದ್ಯಾರ್ಥಿಗಳು ಕೂರುವ ಬೆಂಚು, ಮೇಜು ಗಳನ್ನೇ ಒಲೆಗೆ ಬಳಸಿರುವ ವೀಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಸಂಬಂಧ ಬಿಹಾರ ಸರಕಾರ ತನಿಖೆಗೆ ಆದೇಶ ನೀಡಿದೆ. ಸ್ಥಳೀಯ ಶಾಸಕ ಭಾಯ್‌ ಬಿರೇಂದ್ರ ಮಾತನಾಡಿ ಶಾಲೆಯಲ್ಲಿ ಒಲೆಗೆ ಬಳಸುವ ಇಂಧನವಾಗಲಿ, ಎಲ್‌ಪಿಜಿ ಸಿಲಿಂಡರ್‌ ಆಗಲಿ ಇಲ್ಲದ ಕಾರಣ ಆಡಳಿತ ಮಂಡಳಿಯೇ ಅಡುಗೆ ಮಾಡುವ ಮಹಿಳೆಗೆ ಬೆಂಚು, ಮೇಜುಗಳನ್ನು ಬಳಸಿ ಎಂದು ಆದೇಶಿಸಿದೆ ಎಂದು ಆರೋಪಿಸಿ, ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next