Advertisement

ಇಂಗ್ಲೆಂಡ್ ಬಿ ಟೀಮ್ ನ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ಥಾನ

07:46 AM Jul 09, 2021 | Team Udayavani |

ಕಾರ್ಡಿಫ್: ಪ್ರಮುಖ ಆಟಗಾರರಿಲ್ಲದ ಇಂಗ್ಲೆಂಡ್ ನ ಬಿ ತಂಡದ ವಿರುದ್ಧ ಪಾಕಿಸ್ಥಾನ ತಂಡ ಹೀನಾಯವಾಗಿ ಸೋಲನುಭವಿಸಿದೆ. ಸರಣಿಯ ಮೊದಲ ಪಂದ್ಯದಲ್ಲೇ 9 ವಿಕೆಟ್ ಗಳ ಸೋಲಿನ ಮುಖಭಂಗ ಅನುಭವಿಸಿದೆ.

Advertisement

ಇಲ್ಲಿನ ಸೋಫಿಯಾ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿತು. ಲಂಕಾ ಸರಣಿಯ ಬಳಿಕ ಇಂಗ್ಲೆಂಡ್ ತಂಡದ ಕೆಲವು ಆಟಗಾರರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಂತಿಮ ಪಂದ್ಯದಲ್ಲಿ ಆಡಿದ ಯಾವ ಆಟಗಾರರೂ ಈ ಸರಣಿಗೆ ಆಯ್ಕೆಯಾಗಲಿಲ್ಲ. ಬೆನ್ ಸ್ಟೋಕ್ಸ್ ಮತ್ತು ಡೇವಿಡ್ ಮಲಾನ್ ಮಾತ್ರ ಅನುಭವಿಗಳು.

ಬಲಿಷ್ಠ ತಂಡವನ್ನೇ ಕಟ್ಟಿಕೊಂಡು ಬಂದಿದ್ದ ಪಾಕಿಸ್ಥಾನ ತಂಡ ಇಂಗ್ಲೆಂಡ್ ಅನನುಭವಿ ಬೌಲರ್ ಗಳ ವಿರುದ್ಧ ಪರದಾಡಿದರು. ಇಮಾಮ್ ಉಲ್ ಹಕ್ ಮೊದಲ ವಿಕೆಟ್ ಗೆ ಔಟಾದರು. ಬಾಬರ್ ಅಜಮ್ ಕೂಡಾ ಸೊನ್ನೆ ಸುತ್ತಿದರು. 47 ರನ್ ಗಳಿಸಿದ ಫಾಕರ್ ಜಮಾನ್ ರದ್ದೇ ಹೆಚ್ಚಿನ ಸ್ಕೋರ್. ಉಪನಾಯಕ ಶದಾಬ್ ಖಾನ್ 30 ರನ್ ಗಳಿಸಿದರು.

ಇದನ್ನೂ ಓದಿ:ಕೋವಿಡ್ ತುರ್ತು ಸ್ಥಿತಿ ವಿಸ್ತರಣೆ ಇದು ವೀಕ್ಷಕರಿಲ್ಲದ ಒಲಿಂಪಿಕ್ಸ್‌ !

ಪಾಕಿಸ್ಥಾನ ತಂಡ 35.2 ಓವರ್ ನಲ್ಲಿ 141 ರನ್ ಗೆ ಆಲ್ ಔಟಾಯಿತು. ಇಂಗ್ಲೆಂಡ್ ಪರ ಸಕಿಬ್ ಮೊಹಮ್ಮದ್ ನಾಲ್ಕು ವಿಕೆಟ್ ಕಿತ್ತರೆ, ಓವರ್ಟನ್ ಮತ್ತು ಪಾರ್ಕಿನ್ಸನ್ ತಲಾ ಎರಡು ವಿಕೆಟ್ ಕಿತ್ತರು.

Advertisement

ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ಆರಂಭದಲ್ಲೇ ಫಿಲಿಪ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್ ಗೆ ಒಂದಾದ ಜ್ಯಾಕ್ ಕ್ರಾವ್ಲಿ ಮತ್ತು ಡೇವಿಡ್ ಮಲಾನ್ ಅಜೇಯ ಜೊತೆಯಾಟವಾಡಿದರು. ಮಲಾನ್ ಅಜೇಯ 68 ಮತ್ತು ಕ್ರಾವ್ಲಿ ಅಜೆಯ 58 ರನ್ ಗಳಿಸಿದರು. ಇಂಗ್ಲೆಂಡ್ ಕೇವಲ 21.5 ಓವರ್ ನಲ್ಲಿ ಗುರಿ ತಲುಪಿ ಸರಣಿಯಲ್ಲಿ ಶುಭಾರಂಭ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next