Advertisement

World-cup: ವಿಶ್ವಕಪ್‌ಗೆ ಇಂಗ್ಲೆಂಡ್‌ ಸಂಭಾವ್ಯ ತಂಡ: ಬೆನ್‌ ಸ್ಟೋಕ್ಸ್‌ ಅಚ್ಚರಿಯ ಆಯ್ಕೆ

11:14 PM Aug 16, 2023 | Team Udayavani |

ಲಂಡನ್‌: ಏಕದಿನ ನಿವೃತ್ತಿಯಿಂದ ಹೊರ ಬಂದಿರುವ ಇಂಗ್ಲೆಂಡಿನ ಟೆಸ್ಟ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಅವರನ್ನು ಮುಂಬರುವ ಏಕದಿನ ವಿಶ್ವಕಪ್‌ಗೆ ಸಂಭಾವ್ಯ ತಂಡದಲ್ಲಿ ಸೇರಿಸಲಾಗಿದೆ. ಇದೇ ವೇಳೆ ಅನುಭವಿ ಬ್ಯಾಟ್ಸ್‌ ಮನ್‌ ಹ್ಯಾರಿ ಬ್ರೂಕ್‌ ಮತ್ತು ವೇಗಿ ಜೋಫ್ರಾ ಆರ್ಚರ್‌ ಅವರನ್ನು ಕೈಬಿಡಲಾಗಿದೆ.

Advertisement

ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದು ಕಷ್ಟ ಸಾಧ್ಯವೆಂಬ ಕಾರಣದಿಂದ ಕಳಎದ ವರ್ಷ ಏಕದಿನ ಕ್ರಿಕೆಟ್‌ ನಿಂದ ನಿವೃತ್ತಿಯಾಗಿದ್ದ ಸ್ಟೋಕ್ಸ್‌ ಇದೀಗ ತನ್ನ ನಿರ್ಧಾರ ವನ್ನು ಬದಲಿಸಿದ್ದಾರೆ. ಅವರೀಗ ಇಂಗ್ಲೆಂಡ್‌ ತಂಡದ ಮ್ಯಾಚ್‌ ವಿನ್ನಿಂಗ್‌ ಸಾಮರ್ಥ್ಯವಿರುವ ಆಟ ಗಾರರಾಗಿದ್ದು ವಿಶ್ವಕಪ್‌ ಸಂಭಾವ್ಯ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಆಯ್ಕೆ ಗಾರ ಲೂಕ್‌ ರೈಟ್‌ ಹೇಳಿದ್ದಾರೆ.

32ರ ಹರೆಯದ ಸ್ಟೋಕ್ಸ್‌ ಮುಂದಿನ ತಿಂಗಳು ನಡೆಯಲಿರುವ ನ್ಯೂಜಿಲ್ಯಾಂಡ್‌ ವಿರುದ್ಧದ ನಾಲ್ಕು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡಕ್ಕೆ ಮರಳಲಿದ್ದಾರೆ. ನ್ಯೂಜಿ ಲ್ಯಾಂಡ್‌ ವಿರುದ್ಧ ಆಡಲಿರುವ 15 ಸದಸ್ಯರ ತಂಡವೇ ಸಂಭಾವ್ಯ ವಿಶ್ವಕಪ್‌ ತಂಡದಲ್ಲಿ ಇರಲಿದ್ದಾರೆ ಎಂದು ರೈಟ್‌ ಹೇಳಿದ್ದಾರೆ.
ಅಟ್ಕಿನ್ಸನ್‌ ಚೊಚ್ಚಲ ಬಾರಿ ತಂಡಕ್ಕೆ

25ರ ಹರೆಯದ ವೇಗಿ ಗಸ್‌ ಅಟ್ಕಿನ್ಸನ್‌ ಅವರು ಚೊಚ್ಚಲ ಬಾರಿ ತಂಡಕ್ಕೆ ಸೇರಿಸಿಕೊಳ್ಳ ಲಾಗಿದೆ. ಆದರೆ ಎಸೆತಗಳ ಆಧಾರದಲ್ಲಿ ಟೆಸ್ಟ್‌ನಲ್ಲಿ ಅತೀ ವೇಗವಾಗಿ ಒಂದು ಸಾವಿರ ರನ್‌ ಗಳಿಸಿದ ಸಾಧಕ ಹ್ಯಾರಿ ಬ್ರೂಕ್‌ ಅವರನ್ನು ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆಯಲು ವಿಫ‌ಲರಾಗಿದ್ದಾರೆ. 24ರ ಹರೆಯದ ಬ್ರೂಕ್‌ ಆ್ಯಶಸ್‌ ಟೆಸ್ಟ್‌ನ ಮೂರನೇ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿ ಕಾಣಿಸಿ ಕೊಂಡಿದ್ದರು.

ಸಂಭಾವ್ಯರ ಪಟ್ಟಿಯನ್ನು ಸೆ. 5ರ ಮೊದಲು ಐಸಿಸಿಗೆ ಸಲ್ಲಿಸಬೇಕಾಗಿದೆ. ಸೆ. 28ರ ವರೆಗೆ ತಂಡದಲ್ಲಿ ಇನ್ನಷ್ಟು ಬದಲಾವಣೆ ಮಾಡಲು ಅವಕಾಶವಿದೆ.

Advertisement

ಇಂಗ್ಲೆಂಡಿನ ಸಂಭಾವ್ಯ ವಿಶ್ವಕಪ್‌ ತಂಡ
ಜಾಸ್‌ ಬಟ್ಲರ್‌ (ನಾಯಕ), ಮೊಯಿನ್‌ ಅಲಿ, ಗಸ್‌ ಅಟ್ಕಿನ್ಸನ್‌, ಜಾನಿ ಬೇರ್‌ಸ್ಟೋ, ಸ್ಯಾಮ್‌ ಕರನ್‌, ಲಿಯಮ್‌ ಲಿವಿಂಗ್‌ ಸ್ಟೋನ್‌, ಡೇವಿಡ್‌ ಮಾಲನ್‌, ಅದಿಲ್‌ ರಶೀದ್‌, ಜೋ ರೂಟ್‌, ಜಾಸನ ರಾಯ್‌, ಬೆನ್‌ ಸ್ಟೋಕ್ಸ್‌, ರೀಸ್‌ ಟೊಪ್ಲೇ, ಡೇವಿಡ್‌ ವಿಲ್ಲೆ, ಮಾರ್ಕ್‌ ವುಡ್‌, ಕ್ರಿಸ್‌ ವೋಕ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next