Advertisement
ಬೆಳ್ವೆ ಪರಿಸರದಲ್ಲಿ ಜು. 11ರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಈ ಹಿನ್ನೆಲೆಯಲ್ಲಿ ಬೆಳ್ವೆ ಶ್ರೀ ಶಂಕರ ನಾರಾಯಣ ದೇಗುಲದ ಆಡಳಿತ ಮಂಡಳಿ ಮಂಗಳವಾರ ಮಧ್ಯಾಹ್ನ ಕಾಣಿಕೆ ಡಬ್ಬವನ್ನು ತೆರೆದು ಕಾಣಿಕೆ ಯನ್ನು ಹೊರ ತೆಗೆದಿದ್ದರು.ಕಳ್ಳರು ದೇಗುಲದ ಕಾಣಿಕೆ ಡಬ್ಬದಲ್ಲಿ ಹಣ ಇದೆ ಎಂದು ಭಾವಿಸಿ, ಕಾಣಿಕೆ ಡಬ್ಬವನ್ನು ಕದ್ದು ಹೊತ್ತೂಯ್ದಿ ದ್ದರು. ಕಾಣಿಕೆ ಡಬ್ಬ ವನ್ನು ಅಲಾºಡಿ ಮೂರುಕೈ ಬಳಿ ದೊಡ್ಡ ಕಲ್ಲಿನಿಂದ ಒಡೆದು, ಹಣವಿಲ್ಲದೇ ಇರುವುದರಿಂದ ಡಬ್ಬ ವನ್ನು ಸ್ಥಳದಲ್ಲಿಯೇ ಎಸೆದು ಪರಾರಿಯಾಗಿದ್ದಾರೆ.
ಬೆಳ್ವೆ ಪರಿಸರದಲ್ಲಿ ಜು. 11ರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕೊಂಜಾಡಿ, ಮರೂರು, ಯಳಂ ತೂರು ದೇಗುಲಗಳಲ್ಲಿ ಸರಣಿ ಕಳ್ಳತನ ನಡೆದ ಮರುದಿನ ಕೂಡ ಅದೇ ಪರಿಸರದ ಬೆಳ್ವೆ ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕಳ್ಳರು ಬೆಳ್ವೆ ಪರಿಸರದಲ್ಲಿ ಇದ್ದುಕೊಂಡೇ ದೇವಸ್ಥಾನಗಳ ಮೇಲೆ ಗುರಿ ಇಟ್ಟುಕೊಂಡು ಮರುದಿನ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಕಳವು ನಡೆಸಿದ್ದಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಕಳೆದ ವರ್ಷ ಕೂಡ ಕಳವು
ಬೆಳ್ವೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಕಳೆದ ವರ್ಷ ಜೂ. 11ರಂದು ಕಳ್ಳತನ ನಡೆದಿದೆ. ದೇಗುಲಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಎರಡು ಕಾಲುದೀಪಗಳು, ಬೆಳ್ಳಿ ಹರಿವಾಣ, ಉತ್ಸವಮೂರ್ತಿ ಮುಖವಾಡ, ಬೆಳ್ಳಿ ಪ್ರಭಾವಳಿ, ಅಮ್ಮನವರ ಮೂರ್ತಿಯ ಚಿನ್ನದ ಪದಕ ಸಹಿತ ಅಪಾರ ಮೌಲ್ಯದ ಸೊತ್ತುಗಳ ಕಳವು ನಡೆಸಿದ್ದರು.
Related Articles
ಬೆಳ್ವೆ ಪರಿಸರದಲ್ಲಿ ಜು. 11 ಮತ್ತು 12ರ ರಾತ್ರಿ ನಡೆಸಿರುವ ಸರಣಿ ಕಳ್ಳತನದ ಬಗ್ಗೆ ಮರೂರು ಶ್ರೀ ದುರ್ಗಾಪರಮೇಶ್ವರಿ ಹಾಗೂ ಬೆಳ್ವೆ ಶ್ರೀ ಶಂಕರನಾರಾಯಣ ದೇವಸ್ಥಾನ ದಲ್ಲಿರುವ ಸಿಸಿ ಕೆಮರಾ ದಲ್ಲಿ ಕೃತ್ಯ ಸೆರೆಯಾಗಿದ್ದು, ಎರಡೂ ಕಡೆ ಒಂದೇ ಗ್ಯಾಂಗಿನವರು ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಎರಡು ದೇವಸ್ಥಾನಗಳಲ್ಲಿಯೂ ಇಬ್ಬರು ವ್ಯಕ್ತಿಗಳು ಮುಖಕ್ಕೆ ಮುಸುಕು, ಕೈ ಹಾಗೂ ಕಾಲಿಗೆ ಸಾಕ್ಸ್ ಹಾಕಿ ಕೊಂಡು ಕಳ್ಳತನ ನಡೆಸಿದ್ದಾರೆ. ಹೆಬ್ರಿ ಹಾಗೂ ಕಾರ್ಕಳದಲ್ಲಿ ನಡೆದಿರುವ ಕಳ್ಳತನಕ್ಕೂ ಇಲ್ಲಿನ ಕಳವಿಗೂ ಸಾಮ್ಯತೆ ಇದೆ ಎಂದು ಉನ್ನತ ಮೂಲದ ಮಾಹಿತಿಯಿಂದ ತಿಳಿದು ಬಂದಿದೆ.ಕಳ್ಳತನ ಕುರಿತು ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ದೇಗುಲಕ್ಕೆ ಭೇಟಿ ನೀಡಿ, ದೇಗುಲದ ಆಡಳಿತ ಮಂಡಳಿ, ಅರ್ಚಕರು, ಸ್ಥಳೀಯರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.
Advertisement