Advertisement

ಬಿಲವರ ಅಸೋಸಿಯೇಶನ್‌ ಡೊಂಬಿವಲಿ ಸ್ಥಳೀಯ ಕಚೇರಿ: ಗುರುಪೂರ್ಣಿಮೆ ಆಚರಣೆ

03:09 PM Jul 30, 2021 | Nagendra Trasi |

ಡೊಂಬಿವಲಿ, ಜು. 29: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ವಾರ್ಷಿಕ ಗುರುಪೂರ್ಣಿಮೆ ಪೂಜೆಯು ಜು. 24ರಂದು ವಿವಿಧ ಧಾರ್ಮಿಕ ಕಾರ್ಯಾಕ್ರಮಗಳೊಂದಿಗೆ ಸ್ಥಳೀಯ ಕಚೇರಿಯ ಸಭಾಗೃಹದಲ್ಲಿ ನಡೆಯಿುತು. ಪುರೋಹಿತರಾದ ಐತಪ್ಪ ಸುವರ್ಣ ಅವರು ಧರ್ಮರಾಜ ಪೂಜಾರಿ, ಚಂದ್ರಪಾಲ್‌ ಪೂಜಾರಿ ಹಾಗೂ ಇತರ ಕಾರ್ಯಕರ್ತರ ಸಹಕಾ ರದಿಂದ ಗುರು ಮಂಟಪವನ್ನು ಅಲಂಕರಿಸಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

Advertisement

ಬೆಳಗ್ಗೆಯಿಂದ ಕಲಶ ಪ್ರತಿಷ್ಠೆ, ಗುರುಭಕ್ತರಿಂದ ಭಜನೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಡೊಂಬಿವಲಿ ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ ರವಿ ಎಸ್‌. ಸನಿಲ್‌ ಸ್ವಾಗತಿಸಿ, ವಂದಿಸಿದರು. ಹಿರಿಯರಾದ ಬಿ. ವೈ. ಸುವರ್ಣ ಅವರು ಗುರು ಪೂರ್ಣಿಮೆಯ ಮಹತ್ವವನ್ನು ವಿವರಿಸಿ ಭಕ್ತರ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದಾನಿಗಳು, ಡೊಂಬಿವಲಿ ಪರಿಸರದ ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಭಾರತ್‌ ಬ್ಯಾಂಕ್‌ನ ಅಧಿಕಾರಿಗಳು, ಹಿತೈಷಿಗಳು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಹಾರದ ಕಿಟ್‌ಗೆ ಸಹಕರಿಸಿದ ದಾನಿಗಳನ್ನು ಗುರುಪ್ರಸಾದ ನೀಡಿ ಗೌರವಿಸಲಾಯಿತು.

ಗಿರಿಜಾ ಎಸ್‌. ಪಾಲನ್‌, ಕುಶ ರವಿ ಸನಿಲ್‌, ಟಿ. ಕೆ. ಕೋಟ್ಯಾನ್‌, ಮೊದಲಾದವರು ಕಾರ್ಯಕ್ರಮದಲ್ಲಿ ವಿವಿಧ ಸೇವೆಗಳನ್ನು ನೀಡಿ ಸಹಕರಿ ಸಿದರು. ಸ್ಥಳೀಯ ಸಮಿತಿಯ ಗೌರವ ಕಾರ್ಯಾ ಧ್ಯಕ್ಷ ಎನ್‌. ಕರ್ಕೇರ, ಕಾರ್ಯಾಧ್ಯಕ್ಷ ದೇವರಾಜ್‌ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷ ರವಿ ಎಸ್‌. ಸನಿಲ್‌, ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ್‌ ಪಾಲನ್‌ ಮತ್ತು ಶ್ರೀಧರ ಅಮೀನ್‌, ಗೌರವ ಕಾರ್ಯದರ್ಶಿ ಪುರಂದರ ಪೂಜಾರಿ, ಸಹ ಕಾರ್ಯದರ್ಶಿ ವಿಟಲ್‌ ಪಿ. ಅಮೀನ್‌, ಸಹ
ಕೋಶಾಧಿಕಾರಿ ರಾಜೇಶ್‌ ಕೋಟ್ಯಾನ್‌, ಮಂಜಪ್ಪ ಪೂಜಾರಿ, ಈಶ್ವರ್‌ ಕೋಟ್ಯಾನ್‌, ಜಗನ್ನಾಥ್‌ ಸನಿಲ್‌, ಎಂ. ಎನ್‌. ಕೋಟ್ಯಾನ್‌, ಸೋಮನಾಥ್‌ ಪೂಜಾರಿ ಹಾಗೂ ಸಮಿತಿ ಸದಸ್ಯರು, ಸಕ್ರಿಯ ಕಾರ್ಯಕರ್ತರು, ಯುವ ಸದಸ್ಯರು ಹಾಗೂ ಮಹಿಳಾ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next