Advertisement

Beluru: ಕಸಾಯಿ ಖಾನೆ ಮೇಲೆ ಮತ್ತೆ ದಾಳಿ: ಸಾವಿರ ಕೆ.ಜಿ. ಮಾಂಸ ವಶ

12:09 AM Sep 04, 2024 | Team Udayavani |

ಬೇಲೂರು: ಅಕ್ರಮವಾಗಿ ಗೋಮಾಂಸ ಮಾರಾಟದ ಜತೆಗೆ ಹೊರ ರಾಜ್ಯಕ್ಕೆ ರಫ್ತು ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್‌ ಎಂ. ಮಮತಾ ಮತ್ತೆ 5 ಕಸಾಯಿ ಖಾನೆಗಳ ಮೇಲೆ ದಾಳಿ ನಡೆಸಿ ಸಾವಿರ ಕೆ.ಜಿ. ಗೋಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ತಹಶೀಲ್ದಾರ್‌ ಬರುವ ಮಾಹಿತಿ ಪಡೆದ ದಂಧೆಕೋರರು ಪರಾರಿಯಾಗಿದ್ದಾರೆ.

Advertisement

ಪಟ್ಟಣದಲ್ಲಿ ಕಳೆದ 2 ದಶಕದಿಂದ ರಾಜರೋಷವಾಗಿ ಅಕ್ರಮ ಗೋಮಾಂಸ ಮಾರಾಟ ನಡೆಯುತ್ತಿದೆ. 15 ದಿನಗಳ ಹಿಂದೆ ಬೇಲೂರು ತಹಶೀಲ್ದಾರ್‌ ಪಟ್ಟಣದ ಪುರಿಭಟ್ಟಿಗೆ ಮತ್ತು ಮುಸ್ತಫಾ ಬೀದಿ ಕಸಾಯಿಕಾನೆಗಳ ಮೇಲೆ ದಾಳಿ ನಡೆಸಿ 500 ಕೆ.ಜಿ. ಗೋಮಾಂಸ ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದರು. ಇದೇ ರೀತಿ ಕೆಲವು ಬಾರಿ ದಾಳಿ ನಡೆಸಿ ಗೋಮಾಂಸ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರೂ ದಂಧೆ ಮಾತ್ರ ನಿರಂತರವಾಗಿದೆ. ಇದಕ್ಕೆ ಕೆಲವು ರಾಜಕಾರಣಿಗಳ ಕೃಪಾ ಕಟಾಕ್ಷವೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ತಹಶೀಲ್ದಾರ್‌ ಅಳಲು!:

ತಹಶೀಲ್ದಾರ್‌ ಮಮತಾ ಮಾತನಾಡಿ, 15 ದಿನದ ಹಿಂದೆ ನಾನೇ ಬೇಲೂರು ಪಟ್ಟಣದ ಪುರಿಬಟ್ಟಿ ಮತ್ತು ಮುಸ್ತಾಫ‌ ಬೀದಿಗಳಲ್ಲಿ ನಡೆಯುತ್ತಿರುವ ಗೋಮಾಂಸ ಮಾರಾಟ ಕಸಾಯಿ ಖಾನೆಗಳ ಮೇಲೆ ದಾಳಿ ನಡೆಸಿ 500 ಕೆ.ಜಿ. ಮಾಂಸ ವಶಪಡಿಸಿಕೊಂಡು ಎಚ್ಚರಿಕೆ ನೀಡಿದರೂ ಮತ್ತೆ ಮಾರಾಟ ನಡೆಯುತ್ತಿರುವುದು ನಿಜಕ್ಕೂ ಶೋಚನೀಯ. ಇಲ್ಲಿನ ಪುರಸಭೆ, ಪೊಲೀಸ್‌ ವ್ಯವಸ್ಥೆ ಏನು ಮಾಡುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ಶಿಸ್ತು ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next