Advertisement
ಸುಮಾರು 3.5 ಕಿ.ಮೀ. ಉದ್ದವಿರುವ ಈ ರಸ್ತೆ ಕಾಂಕ್ರಿಟೀಕರಣಕ್ಕೆ ಕೇಂದ್ರ ರಸ್ತೆನಿಧಿ ಯೋಜನೆಯ 4 ಕೋಟಿ ಅನುದಾನ ಒದಗಿಸಲಾಗಿತ್ತು. ಕುಂಟುತ್ತ ಸಾಗಿದ ಕಾಮಗಾರಿ ಈಗ ಸಂಪೂರ್ಣ ಸ್ಥಗಿತವಾಗಿದೆ. ಕಾಮಗಾರಿಗಾಗಿ ಹಿಂದಿದ್ದ ಡಾಮಾರು ರಸ್ತೆ ಅಗೆಯಲಾಗಿದ್ದು, ಈಗ ವಾಹನ ಸಂಚಾರ ದುಸ್ತರವಾಗಿದೆ.
ಪಳ್ಳಿ ಬೈಲೂರು ರಸ್ತೆಗೆ 10 ವರ್ಷಗಳ ಹಿಂದೆ ಸಂಪೂರ್ಣ ಹದಗೆಟ್ಟಿದ್ದಾಗ ಡಾಮರೀರಣಕ್ಕೆ ಅನುದಾನ ಸಿಕ್ಕಿತ್ತು. ಆ ವೇಳೆಯೂ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದರು. ಈಗ ಇದ್ದ ರಸ್ತೆ ತೆಗೆದು ಕಾಮಗಾರಿಯೂ ನಡೆಸದೆ ಸಮಸ್ಯೆ ಉಂಟುಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಗೊಳ್ಳದಿದ್ದರೆ ಗುತ್ತಿಗೆದಾರರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
Related Articles
ಈ ರಸ್ತೆಗೆ ಶಾಸಕರು ಕೇಂದ್ರ ರಸ್ತೆನಿಧಿ ಯೋಜನೆಯಡಿ 4 ಕೋಟಿ ಅನುದಾನ ಒದಗಿಸಿ ಕಾಮಗಾರಿ ಪ್ರಾರಂಭಗೊಂಡಿತ್ತು. ಆದರೆ ಗುತ್ತಿಗೆದಾರರ ತೀವ್ರ ನಿರ್ಲಕ್ಷ್ಯದಿಂದಾಗಿ ರಸ್ತೆ ಕಾಮಗಾರಿ ಅಪೂರ್ಣಗೊಂಡಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಹಲವು ಬಾರಿ ಅಧಿಕಾರಿಗಳ ಗಮನ ಸೆಳೆದಿದ್ದು ಕಾಮಗಾರಿ ಪೂರ್ಣಗೊಳ್ಳದೆ ಯಾವುದೇ ಕಾರಣಕ್ಕೆ ಹಣ ಪಾವತಿಸದಂತೆ ಒತ್ತಾಯಿಸಿದ್ದೇನೆ.
– ಸುಮಿತ್ ಶೆಟ್ಟಿ, ಜಿ.ಪಂ. ಸದಸ್ಯರು
Advertisement
ಅಧಿವೇಶನದಲ್ಲೂ ಪ್ರಸಾವಬೈಲೂರು ಪಳ್ಳಿ ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರೇ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 4 ಕಾಮಗಾರಿಗಳನ್ನು ನಡೆಸುತ್ತಿದ್ದು ಎಲ್ಲವೂ ಅಪೂರ್ಣವಾಗಿದೆ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲೂ ಪ್ರಸಾವ ಮಾಡಿದ್ದು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಮುಂದಿನ ದಿನಗಳಲ್ಲಿ ಕಾರ್ಕಳ ಕ್ಷೇತ್ರದ ಯಾವುದೇ ಕಾಮಗಾರಿ ನೀಡದಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ.
– ಸುನಿಲ್ ಕುಮಾರ್, ಶಾಸಕರು, ಕಾರ್ಕಳ