Advertisement

ಒಂದೂವರೆ ಅಡಿ ನೀರು ಬಂದರೆ ಯಗಚಿ ಭರ್ತಿ

06:42 PM Jun 19, 2021 | Team Udayavani |

ಬೇಲೂರು: ಪ್ರಸಕ್ತ ಸಾಲಿನಲ್ಲಿ ಯಗಚಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರುಸಂಗ್ರಹವಾಗುತ್ತಿದ್ದು, ಒಂದೂವರೆ ಅಡಿ ನೀರು ಬಂದರೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.

Advertisement

ರೈತರು, ಕಾಫಿ ಬೆಳೆಗಾರರಲ್ಲಿ ಸಂತಸ: ಜಲಾಶಯದ ಭರ್ತಿಗೆ ಇನ್ನು ಒಂದೂವರೆ ಅಡಿ ನೀರು ಅವಶ್ಯವಿದ್ದು, ಶೀಘ್ರವೇ ಜಲಾಶಯ ಬಹುತೇಕ ಭರ್ತಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜೂನ್‌ ತಿಂಗಳಿಂದ ತಾಲೂಕಿನ ಮಲೆನಾಡು ಪ್ರದೇಶಗಳಾದ ಅರೇಹಳ್ಳಿ, ಬಿಕ್ಕೂಡು, ಗೆಂಡೇಹಳ್ಳಿ, ಬೇಲೂರು ಪಟ್ಟಣ, ಹಳೇಬೀಡು ಮತ್ತುಮಾದಿಹಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮತ್ತು ಕಾಫಿ ಬೆಳೆಗಾರರಲ್ಲಿ ಸಂತಸಮೂಡಿಸಿದೆ.

ನೀರು ಹೊರ ಹರಿಸವ ಸಾಧ್ಯತೆ: ಜೂನ್‌ ತಿಂಗಳಿನಲ್ಲಿ ಬಿದ್ದಿರುವ ಮಳೆಯಿಂದ ಯಗಚಿ ಜಲಾಶಯದ ಒಳಹರಿವು ಹೆಚ್ಚುತ್ತಿದೆ. ಅಲ್ಲದೆ ಯಗ ಚಿಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರುಆಲ್ದೂರು ಭಾಗ ಗ ಳಲ್ಲಿ ಮಳೆ ಬೀಳುತ್ತಿರುವುದರಿಂದಜಲಾ ಶ ಯದಲ್ಲಿನೀರು ಸಂಗ್ರಹವಾಗುತ್ತಿದೆ .964.603 ಮೀ.ಎತ್ತರವಿರುವ ಅಣೆಕಟ್ಟೆಯಲ್ಲಿ 3.603 ಟಿಎಂಸಿನೀರು ಸಂಗ್ರಹದ ಸಾಮರ್ಥ್ಯಹೊಂದಿರುವ ಜಲಾಶಯದಲ್ಲಿ3.240 ಟಿ.ಎಂ.ಸಿ ನೀರು ಸಂಗ್ರಹವಾಗಿದ್ದು,3051 ಕ್ಯೂಸೆಕ್‌ ನೀರು ಒಳ ಹರಿವಾಗಿದ್ದು,ಯಾವುದೇ ಸಮಯದಲ್ಲಾದರೂ ಜಲಾಶಯದಿಂದ ನೀರು ಹೊರ ಹರಿಸವ ಸಾಧ್ಯತೆ ಇದೆ.ತಾಲೂಕಿನಲ್ಲಿ ವರ್ಷದಲ್ಲಿ 1031 ಮಿ.ಮೀ.ವಾಡಿಕೆ ಮಳೆ ಬರಬೇಕಿದ್ದು, ಜನವರಿ 2021ರಿಂದ ಜೂನ್‌ 18ರವರೆಗೆ ಸರಾಸರಿ 2,622ಮಿ.ಮೀ ಮಳೆಯಾಗಿರುವ ವರದಿಯಾ ಗಿದ್ದು,ಕಳೆದ ವರ್ಷ 2020ರಲ್ಲಿ ಜೂನ್‌ ತಿಂಗಳ ವರೆಗೆ 1, 168.0ಮಿ.ಮೀ ಮಳೆಯಾಗಿತ್ತು. ಇದುವರೆಗೂ ಹೋಬಳಿವಾರುಬಿದ್ದಿರುವ ಮಳೆ ವಿವರ ಇಂತಿದೆ.

ಬೇಲೂರು 332.6 ಮಿ.ಮೀ, ಹಳೇಬೀಡು 256.6, ಹಗರೆ 369.0, ಬಿಕ್ಕೂಡು524.0, ಗೆಂಡೆಹಳ್ಳಿ 559.0, ಅರೇಹಳ್ಳಿ 580.8 ಮಿ.ಮೀಮಳೆಯಾಗಿರುವ ವರದಿಯಾಗಿದೆ

ಕೆಆರ್‌ಎಸ್‌ ನದಿ ಪಾತ್ರದಗೇಟ್‌ಗಳಿಗೆ ಗ್ರೀಸ್‌ ಹಚ್ಚುವ ಕಾರ್ಯ

Advertisement

ಶ್ರೀರಂಗಪಟ್ಟಣ: ಪ್ರಸಿದ್ಧಕೆ ಆರ್‌ಎಸ್‌ ಜಲಾಶಯದಿಂದನೀರು ಹೊರ ಹೋಗುವ ಗೇಟ್‌ನ ಯಂತ್ರಗಳಿಗೆ ಗ್ರೀಸ್‌ಹಚ್ಚುವಕಾರ್ಯ ಭರದಿಂದ ಸಾಗಿದೆ. ಮುಂಗಾರು ಮಳೆಆರಂಭವಾಗಿದ್ದು, ಜಲಾಶಯಕ್ಕೆ ನೀರು ಬರುವ ಹಿನ್ನೆಲೆಕೆಆರ್‌ಎಸ್‌ನಕಾರ್ಯಪಾಲಕ ಎಂಜಿನಿಯರ್‌ಎಂ.ಬಿ.ರಾಜು ನೇತೃತ್ವದಲ್ಲಿ ಗ್ರೀಸ್‌ ಹಚ್ಚುವಕಾರ್ಯಕ್ಕೆಚಾಲನೆ ದೊರೆಯಿತು.ಜಲಾಶಯದಿಂದಕಾವೇರಿ ನದಿಗೆಹಾಗೂ ನಾಲೆಗಳಿಗೆ ನೀರು ಬಿಡುವಗೇಟ್‌ಗಳು ತುಕ್ಕುಹಿಡಿಯದಂತೆ ಸರಾಗವಾಗಿಚಲನೆ ಮಾಡಲು ಈಗ್ರೀಸ್‌ ಹಚ್ಚಿ ಸ್ವತ್ಛತೆ ಕೈಗೊಳ್ಳಲಾಗಿತ್ತು. ಪ್ರತಿವರ್ಷದಂತೆ ಈ ವರ್ಷಮುಂಗಾರು ಹಂಗಾಮು ಆರಂಭದಲ್ಲಿ ಜಲಾಶಯದಸ್ವತ್ಛತೆ, ಗೇಟ್‌ಗಳ ದುರಸ್ತಿ ಇತರ ಸಣ್ಣಕಾರ್ಯಗಳನ್ನುಮುಂಜಾಗ್ರತೆಯಿಂದ ಮಾಡಿಕೊಳ್ಳಲಾಗುತ್ತದೆ.ಕೆಆರ್‌ಎಸ್‌ನ ಎಇಇ ಫಾರೂಕ್‌ ಅಬ್ದುಲ್‌, ಎಂಜಿನಿಯರ್‌ಕಿಶೋರ್‌ ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು.

ಡಿ.ಬಿ.ಮೋಹನ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next