ಹೊಸದಿಲ್ಲಿ: ಕರ್ನಾಟಕದ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದಲ್ಲಿರುವ ಹೊಯ್ಸಳರಿಂದ ನಿರ್ಮಿತವಾದ ದೇಗುಲಗಳನ್ನು 2022-23ನೇ ವರ್ಷದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಯಲ್ಲಿ ಸೇರಿಸುವಂತೆ ಕೇಂದ್ರ ಸರಕಾರ ಯುನೆಸ್ಕೋಗೆ ನಾಮ ನಿರ್ದೇಶನ ಮಾಡಿದೆ.
2020ರಲ್ಲಿ ಕರ್ನಾಟಕ ಸರ ಕಾರ, ಹೊಯ್ಸಳರ ಕಾಲದಲ್ಲಿ ಬೇಲೂರು, ಹಳೇಬೀಡು, ಸೋಮನಾಥಪುರ ಸೇರಿದಂತೆ ಆ ಪ್ರಾಂತ್ಯದಲ್ಲಿ ನಿರ್ಮಿಸಲಾಗಿರುವ, ಪರಸ್ಪರ ಹೋಲಿಕೆಯುಳ್ಳ ವಾಸ್ತುಶಿಲ್ಪ ಹೊಂದಿರುವ 14 ದೇಗುಲಗಳನ್ನು ಪಟ್ಟಿ ಮಾಡಿ, ಅವುಗಳನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿತ್ತು.
ಇದನ್ನೂ ಓದಿ:ಬಡವರಿಗೆ ಮನೆ, ನಿವೇಶನ ಹಂಚಿಕೆಗೆ ಕಾನೂನು ಸರಳೀಕರಣ : ಸಿಎಂ ಬಸವರಾಜ ಬೊಮ್ಮಾಯಿ
ಈಗಾಗಲೇ ಹಂಪಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳ ಸಾಲಿನ ತಲಕಾವೇರಿ ಸಬ್ ಕ್ಲಸ್ಟರ್, ಕುದುರೆಮುಖದ ಸಬ್ ಕ್ಲಸ್ಟರ್ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈಗ ಕೇಂದ್ರದ ಶಿಫಾರಸು ಅಂಗೀಕಾರಗೊಂಡರೆ ರಾಜ್ಯಕ್ಕೆ ಮತ್ತೊಂದು ಹೆಗ್ಗಳಿಕೆ ಲಭಿಸಿದಂತಾಗುತ್ತದೆ.