ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಪ್ರಸಾರವಾದ 105ನೇ ಆವೃತ್ತಿಯ “ಮನ್ ಕೀ ಬಾತ್’ನಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಆಯ್ಕೆಯಾದ ಬೇಲೂರು, ಹಳೆಬೀಡಿನ ಹೊಯ್ಸಳ ದೇಗುಲಗಳ ಬಗ್ಗೆ ಪ್ರಸ್ತಾವಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಯ್ಸಳರಿಂದ ನಿರ್ಮಾಣಗೊಂಡಿರುವ ಚನ್ನಕೇಶವ ದೇವಸಾœನ, ಹೊಯ್ಸಳೇಶ್ವರ ದೇಗುಲಗಳು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಜರ್ಮನಿ ಪ್ರಜೆಯ ಕನ್ನಡ ಹಾಡು
ಜರ್ಮನಿಯ ಕ್ಯಾಸಂಡ್ರ ಮೇ ಸ್ಪಿಟ್‌ಮ್ಯಾನ್ ದೇಶದ ಸಂಗೀತ ಪರಂಪರೆಯ ಬಗ್ಗೆ ಹೊಂದಿರುವ ಒಲವನ್ನು ಪ್ರಧಾನಿ ವಿಶೇಷವಾಗಿ ಉಲ್ಲೇಖೀಸಿದ್ದಾರೆ. ದೃಷ್ಟಿಹೀನರಾಗಿರುವ ಅವರು ಕನ್ನಡ ಸಹಿತ ದೇಶದ ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಜಗಜ್ಜಾಲ ಪಾಲಂ…” ಎಂಬ ಅವರು ಹಾಡಿದ ಒಂದು ತುಣುಕನ್ನು ಪ್ರಧಾನಿಯವರು ಕಾರ್ಯಕ್ರಮದ ವೇಳೆ ಪ್ರಸಾರ ಮಾಡಿದ್ದಾರೆ.
ಅವರು ಭಾರತಕ್ಕೆ ಆಗಮಿಸದೆಯೇ ದೇಶದ ಸಂಗೀತ ಪರಂಪರೆಯ ಬಗ್ಗೆ ಅಧ್ಯಯನ ಮಾಡಿ ಹಾಡುಗಳನ್ನು ಕಲಿತಿರುವುದು ಒಂದು ಸಾಧನೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಭಾರತೀಯ ಸಂಗೀತಕ್ಕೆ ಮೆಚ್ಚುಗೆ ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚಿದೆ ಎಂದು ಪ್ರಧಾನಿ ಕೊಂಡಾಡಿದ್ದಾರೆ.