Advertisement

Tv Show: ಸಿಹಿಕಹಿ ಚಂದ್ರು ʼಬೊಂಬಾಟ್‌ ಭೋಜನʼದಲ್ಲಿ ʼಬೆಳ್ಳುಳ್ಳಿ ಕಬಾಬ್‌ʼ ಖ್ಯಾತಿಯ ಚಂದ್ರು

12:44 PM Feb 07, 2024 | Team Udayavani |

ಬೆಂಗಳೂರು: ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಭಾರೀ ವೈರಲ್‌ ಆಗುತ್ತಿರುವ ʼಬೆಳ್ಳುಳ್ಳಿ ಕಬಾಬ್‌ʼ ಚಂದ್ರು ಸಿಹಿಕಹಿ ಚಂದ್ರು ನಡೆಸಿಕೊಡುವ ಜನಪ್ರಿಯ ಅಡುಗೆ ಕಾರ್ಯಕ್ರಮ ʼಬೊಂಬಾಟ್‌ ಭೋಜನʼ ದಲ್ಲಿ ಭಾಗಿಯಾಗಿದ್ದಾರೆ.

Advertisement

ತನ್ನ ಅಡುಗೆಯ ಕೈ ರುಚಿಯಿಂದಲೇ ಜನಪ್ರಿಯವಾಗಿರುವ ಸಿಹಿಕಹಿ ಚಂದ್ರು ಅವರು ಸ್ಟಾರ್‌ ಸುವರ್ಣದಲ್ಲಿ ʼಬೊಂಬಾಟ್‌ ಭೋಜನʼ ಎನ್ನುವ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಕಿರುತೆರೆ ಹಾಗೂ ಕೆಲ ಸೆಲೆಬ್ರಿಟಿಗಳು ಸಿಹಿಕಹಿ ಚಂದ್ರು ಅವರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಮನೆಯ ಅಡುಗೆಯಂತೆ ಚಂದ್ರು ಅವರ ಅಡುಗೆ ಮನೆಯಲ್ಲಿ ಕೈರುಚಿಯ ಆಹಾರವನ್ನು ತಯಾರಿಸುತ್ತಾರೆ. ಅಡುಗೆಯ ಜೊತೆ ಮಾತುಕತೆಯೂ ಸಾಗುವುದರಿಂದ ಈ ಕಾರ್ಯಕ್ರಮಕ್ಕೆ ಪ್ರತ್ಯೇಕ ವೀಕ್ಷಕರ ಬಳಗವೇ ಇದೆ.

ಸೋಶಿಯಲ್‌ ಮೀಡಿಯಾದಲ್ಲಿ ʼರಾಹುಲಾ ಅಲ್ಲಾಡ್ಸಪ್ಪʼ, ರಾಹುಲಾ ಸ್ವಲ್ಪ ಕುಟ್ಟಿ ಕೊಡಪ್ಪ ರಾಜಾʼ, ʼಒನ್‌ ಮೂರ್‌ ಒನ್‌ ಅಂತಾ ಇರಬೇಕುʼ ಎಂದೇ ಫೇಮಸ್‌ ಆಗಿರುವ ʼಬೆಳ್ಳುಳಿ ಕಬಾಬ್‌ʼ ಖ್ಯಾತಿಯ ಚಂದ್ರು ಅವರು ʼಬೊಂಬಾಟ್ ಭೋಜನ ಸೀಸನ್‌ -4  ನಲ್ಲಿ ಕಾಣಿಸಿಕೊಂಡಿದ್ದಾರೆ.

ಫುಟ್‌ ಪಾತ್‌ ನಿಂದ ವ್ಯಾಪಾರ ಆರಂಭಿಸಿ, ಇಂದು ʼನಿಮ್ಮ ಮನೆ ಚಂದ್ರು ಫ್ಯಾಮಿಲಿ ರೆಸ್ಟೋರೆಂಟ್‌ʼ ಇಟ್ಟುಕೊಂಡಿರುವ ದಿನಗಳ ಸಂಗತಿಯನ್ನು ಕೂಡ ಚಂದ್ರು ʼಬೊಂಬಾಟ್‌ ಭೋಜನʼ ದಲ್ಲಿ ಹಂಚಿಕೊಂಡಿದ್ದಾರೆ.

ಸಿಹಿಕಹಿ ಚಂದ್ರು ಅವರಿಗೆ ಅಡುಗೆಯನ್ನು ಮಾಡಿ, ಚಂದ್ರು ಅವರು ತಮ್ಮ ಕೈರುಚಿಯನ್ನು ಕಾರ್ಯಕ್ರಮದಲ್ಲಿ ತೋರಿಸಿದ್ದಾರೆ.

Advertisement

ಚಂದ್ರು ಅವರು ಅಡುಗೆ ಮಾಡುವುದರ ಜೊತೆ ಅದರ ವಿಡಿಯೋವನ್ನು ಯೂಟ್ಯೂಬ್‌ ನಲ್ಲಿ ಹಂಚಿಕೊಳ್ಳುತ್ತಾರೆ. ಅವರ ಅಡುಗೆಯಂತೆ ಅವರ ಮಾತಿನ ಶೈಲಿಯೂ ಬಹಳ ಫೇಮಸ್ ಆಗಿದೆ. ಇದರೊಂದಿಗೆ ಅವರೊಂದಿಗೆ ಕೆಲಸ ಮಾಡುವ ರಾಹುಲ್‌ ಕೂಡ ʼರಾಹುಲಾ ಅಲ್ಲಾಡ್ಸಪ್ಪʼ ಎಂದು ಹೇಳಿ ಹೇಳಿಯೇ ಫೇಮಸ್‌ ಆಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next