Advertisement
ಎ.13ರಂದು ಬೆಳ್ತಂಗಡಿಯ ಸೋಮ ವಾರ ಸಂತೆಗೆ ಬೆಳ್ಳಂಬೆಳಗ್ಗೆಯೇ ಜಾತ್ರೆ ಯಂತೆ ಜನ ಸೇರಿದ್ದರು. ಕೆಲವು ದಿನಗಳ ಹಿಂದೆ ಪೊಲೀಸ್ ಇಲಾಖೆ ಸಿಕ್ಕಸಿಕ್ಕ ವಾಹನಗಳಿಗೆ ದಂಡ ವಿಧಿಸಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ತರಕಾರಿ, ತಳ್ಳುಗಾಡಿ ಸಹಿತ ಹಣ್ಣು ಹಂಪಲು, ಒಣಮೀನು, ಹಸಿಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರಿಂದ ಜನ ಸಾಲುಗಟ್ಟಿ ಖರೀದಿಸಿದರು. ಜತೆಯಲ್ಲಿ ಪೇಟೆಯಲ್ಲಿ ಸೆಲೂನ್, ಫ್ಯಾನ್ಸಿ ಸಹಿತ ಬಹುತೇಕ ವ್ಯಾಪಾರ ಸಂಸ್ಥೆಗಳು ತೆರೆಯ ಲಾರಂಭಿಸಿವೆೆ. ಹೆಚ್ಚಿನ ವ್ಯಾಪಾರಿಗಳು ಮಾಸ್ಕ್, ಸ್ಯಾನಿಟೈಸರ್ ಬಳಸದೆ ವ್ಯಾಪಾರ ದಲ್ಲಿ ನಿರತರಾಗಿದ್ದಾರೆ.
ವಾರದ ಸಂತೆ ನಡೆಸಲು ಯಾವುದೇ ಕಾರಣಕ್ಕೂ ಅನುಮತಿ ಇಲ್ಲ. ಹಣ್ಣು ಹಂಪಲು, ತರಕಾರಿ ಮಾರಾಟಕ್ಕಷ್ಟೇ ಅವಕಾಶವಿದೆ. ಇತರ ಅಂಗಡಿಗಳನ್ನು ಮುಂದಿನ ದಿನಗಳಲ್ಲಿ ಪೊಲೀಸರ ಸಹಕಾರದಲ್ಲಿ ನಾವೇ ಸೀಲ್‌ಡೌನ್ ಮಾಡುತ್ತೇವೆ. ಗ್ರಾಹಕರು ಅಂತರ ಕಾಯ್ದುಕೊಳ್ಳುವಂತೆ ವ್ಯಾಪಾರಿಗಳೂ ಮುಂಜಾಗ್ರತೆ ವಹಿಸಬೇಕು.
– ಸುಧಾಕರ ಎಂ.ಎಚ್.,
ನ.ಪಂ. ಮುಖ್ಯಾಧಿಕಾರಿ