Advertisement
ಕಡಿರುದ್ಯಾವರ ಗ್ರಾಮದ ನಿವಾಸಿ ನಳಿನಿ ಅವರು ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಾದ ರಾಧಾಕೃಷ್ಣ, ರಂಜಿತ್, ಆನಂದಗೌಡ, ಸುದರ್ಶನ, ಸುಧಾಕರ ಹಾಗೂ ಇತರರು ಎರಡು ಬೈಕ್ ಹಾಗೂ ಒಂದು ಕಾರಿನಲ್ಲಿ ನಳಿನಿ ಅವರ ಮನೆಗೆ ಬಂದು ಅಕ್ರಮ ಪ್ರವೇಶ ಮಾಡಿ ನೀವು ಮರಳು ತೆಗೆಯುವ ಬಗ್ಗೆ ದೂರು ನೀಡುತ್ತೀರಾ ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ನಳಿನಿ ಹಾಗೂ ಅವರ ಪತಿ ಮಹೇಶ್ ಅವರ ಮೇಲೆ ಹಲ್ಲೆಗೆ ಮುಂದಾಗಿ ಅನುಚಿತವಾಗಿ ವರ್ತಿಸಿದ್ದಾರೆ, ಬೊಬ್ಬೆ ಕೇಳಿ ನೆರೆ ಮಯವರು ಬರುವುದನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ: ಅಕ್ರಮವಾಗಿ ಪ್ರವೇಶಿಸಿ ಅಡಿಕೆ ಸಾಗಾಟ ಮತ್ತು ತಡೆಯಲು ಬಂದದ್ದಕ್ಕೆ ಜೀವ ಬೆದರಿಕೆ ಒಡ್ಡಿದ ಘಟನೆ ಶಿಬಾಜೆ ಗ್ರಾಮದಲ್ಲಿ ನಡೆದಿದೆ. ಶಿಬಾಜೆ ನಿವಾಸಿ ಎಲಿಯಮ್ಮ (67) ಅವರು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಲಿಯಮ್ಮ ಅವರ ಪತಿಯ ಜಮೀನಿಗೆ ಅಳವಡಿಸಿದ ಮರದ ಬೇಲಿಯನ್ನು ಸಿ.ಎಂ.ಉಲಹನನ್ ಮತ್ತು ಸಿ.ಎಂ.ರಾಜು ಅವರುಗಳು ಕಿತ್ತೆಸೆದಿದ್ದು, ಜಾಗ ತಮ್ಮದೆಂದು ಹೇಳಿ ಅದರಲ್ಲಿರುವ ಅಡಿಕೆ ಮರದಿಂದ ಅಡಿಕೆಗಳನ್ನು ತೆಗೆಯುತ್ತಿದ್ದರು. ಎಲಿಯಮ್ಮ ಅವರಿಗೆ ಸೇರಿದ ಜಾಗ ತಮ್ಮದೆಂದು ವಾದಿಸಿ ಅರ್ಧ ಗೋಣಿಯಷ್ಟು ಅಡಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದುದನ್ನು ವಿಚಾರಿಸಿದಾಗ ಆರೋಪಿತರು ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
Related Articles
Advertisement