Advertisement

‘ಪರಿಷತ್‌ ನಿಧಿಯಿಂದ ಕಬಡ್ಡಿ ಮ್ಯಾಟ್’

06:02 AM Jan 28, 2019 | |

ಬೆಳ್ತಂಗಡಿ: ಪ್ರಸ್ತುತ ದಿನಗಳಲ್ಲಿ ಕಬಡ್ಡಿ ಕ್ರೀಡೆಯು ಬದಲಾವಣೆಯ ದಿಕ್ಕಿನಲ್ಲಿ ಸಾಗುತ್ತಿದ್ದು, ಮ್ಯಾಟ್ ಅನಿವಾರ್ಯ ವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಕ್ರೀಡಾಳುಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ತನ್ನ ವಿಧಾನ ಪರಿಷತ್‌ ನಿಧಿಯಿಂದ ತಾಲೂಕಿಗೆ ಕಬಡ್ಡಿ ಮ್ಯಾಟ್ ಒದಗಿಸುವುದಾಗಿ ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ಕುಮಾರ್‌ ಭರವಸೆ ನೀಡಿದರು.

Advertisement

ಅವರು ರವಿವಾರ ಇಲ್ಲಿನ ತಾ.ಪಂ. ಕ್ರೀಡಾಂಗಣದಲ್ಲಿ ಬೆಳ್ತಂಗಡಿ ತಾಲೂಕು ಅಮೆಚೂರ್‌ ಕಬಡ್ಡಿ ಅಸೋಸಿ ಯೇಶನ್‌ ವತಿಯಿಂದ ತಾಲೂಕು ಮಟ್ಟದ ಪ್ರೊ ಮಾದರಿಯ ಕಬಡ್ಡಿ ದಿ| ಜಗನ್ನಾಥ ಹೇರಾಜೆ ಸ್ಮಾರಕ ಕಪ್‌ ಪಂದ್ಯಾ ಟದ ಉದ್ಘಾಟನ ಸಮಾ ರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದಿ| ಜಗನ್ನಾಥ ಹೇರಾಜೆ ಅವರು ಸಾಮಾ ಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡು ಬೆಳ್ತಂಗಡಿಯಲ್ಲಿ ಜನಾನುರಾಗಿಯಾಗಿದ್ದರು. ಅವರ ನೆನಪಿನಲ್ಲಿ ಕಬಡ್ಡಿ ಪಂದ್ಯಾಟ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

ತಾಲೂಕು ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ರಂಜನ್‌ ಜಿ. ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ. ಸದಸ್ಯರಾದ ವಿಜಯ ಗೌಡ, ಕೇಶವತಿ, ನ.ಪಂ. ಸದಸ್ಯೆ ರಾಜಶ್ರೀ ರಮಣ್‌, ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆ, ತಾಲೂಕು ವಾಲಿಬಾಲ್‌ ಎಸೋಸಿಯೇಶನ್‌ ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿ, ತಾಲೂಕು ಅಸೋಸಿಯೇಶನ್‌ ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ, ಕಬಡ್ಡಿ ತೀರ್ಪುಗಾರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾನಂದ ರಾವ್‌, ತಾಲೂಕು ಅಧ್ಯಕ್ಷ ಜಯರಾಜ್‌ ಜೈನ್‌, ಜಯರಾಮ್‌ ಬಂಗೇರ, ಶೇಖರ ಬಂಗೇರ, ತಾರುಷ್‌, ತಾಮಿಷ್‌ ಉಪಸ್ಥಿತರಿದ್ದರು. ಕಬಡ್ಡಿ ಎಸೋಸಿಯೇಶನ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ ಅವರು ಭೇಟಿ ನೀಡಿ, ಶುಭಹಾರೈಸಿದರು.

ಸಮ್ಮಾನ
ರಾಷ್ಟ್ರೀಯ ಕಬಡ್ಡಿ ಪ್ರತಿಭೆಗಳಾದ ಪವಿತ್ರಾ ಧರ್ಮಸ್ಥಳ ಹಾಗೂ ರಿಳ್ವಾನ್‌ ಮುಂಡಾಜೆ ಅವರನ್ನು ಗೌರವಿಸಲಾಯಿತು. ಜಿಲ್ಲಾ ಅಸೋಸಿಯೇಶನ್‌ ಉಪಾಧ್ಯಕ್ಷ ನಾಮ್‌ದೇವ್‌ ರಾವ್‌ ಪ್ರಸ್ತಾವನೆ ಗೈದರು. ತಾಲೂಕು ಅಸೋಸಿಯೇಶನ್‌ ಕಾರ್ಯಾಧ್ಯಕ್ಷ ಬಿ.ರಾಜಶೇಖರ್‌ ಶೆಟ್ಟಿ ಮಡಂತ್ಯಾರು ಸ್ವಾಗತಿಸಿದರು. ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಫ್ರಾನ್ಸಿಸ್‌ ವಿ.ವಿ. ನಿರ್ವಹಿಸಿದರು.

Advertisement

ಹೊಸ ಹೊಸ ಪ್ರಯತ್ನ 
ಪಂದ್ಯಾಟವನ್ನು ಉದ್ಘಾಟಿಸಿದ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಕ್ರೀಡೆಯನ್ನು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುವ ದೃಷ್ಟಿಯಿಂದ ಹೊಸ ಹೊಸ ಪ್ರಯತ್ನಗಳು ಸಾಗುತ್ತಿದ್ದು, ಕ್ರೀಡಾಪ್ರೇಮಿಗಳೆಲ್ಲರೂ ಅದನ್ನು ಬೆಂಬಲಿಸಬೇಕಿದೆ. ಜತೆಗೆ ಯುವಜನತೆ ಇಂತಹ ಕ್ರೀಡೆಗಳಲ್ಲಿ ಸಕ್ರಿಯವಾಗಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next