Advertisement
ಅವರು ಬುಧವಾರ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾ| ಘಟಕದ ವತಿಯಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದ ಅರುವ ನಾರಾಯಣ ಶೆಟ್ಟಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ತಾ| 16ನೇ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡಿದರು.
ಚಾರುಮುಡಿ ಸಂಚಿಕೆಯನ್ನು ಬಿಡುಗಡೆಗೊಳಿಸಿದ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ, ಹಿರಿಯ ಸಾಹಿತಿಗಳು ಕನ್ನಡದ ಸಾಹಿತ್ಯವನ್ನು ಮುಂದಿನ ಜನಾಂಗಕ್ಕೆ ತಿಳಿಯಪಡಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.
Related Articles
Advertisement
ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ ಮಿತ್ತಮಾರು ಧ್ವಜಾರೋಹಣ ನೆರವೇರಿಸಿದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಅವರು ಸ್ವಾಗತಿಸಿ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ| ಬಿ. ಯಶೋವರ್ಮ ಪ್ರಸ್ತಾವಿಸಿದರು.
ಡಾ| ಕೃಷ್ಣಾನಂದ ಗರ್ಡಾಡಿ ಅವರು ಅಧ್ಯಕ್ಷರನ್ನು ಪರಿಚಯಿಸಿದರು. ಘಟಕದ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಸ್ವಾಗತ ಸಮಿತಿಯ ಕೋಶಾಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿದರು.
ಮೆರವಣಿಗೆಸಮ್ಮೇಳನದ ಆರಂಭದಲ್ಲಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಿಂದ ಮೆರವಣಿಗೆ ನಡೆಯಿತು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಚಹಾದ ವ್ಯವಸ್ಥೆ ಇತ್ತು. ಮುದ ನೀಡಿದ ಊಟೋಪಚಾರ
ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಭಿಮಾನಿಗಳಿಗೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಆಯೋಜಿಸಿದ್ದ ಊಟೋಪಚಾರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಜತೆಗೆ ಸ್ವಯಂಸೇವಕರು ಆಗಾಗ ಸಭಾಂಗಣದೊಳಗಿನ ಸಭಿಕರಿಗೆ ನೀಡುತ್ತಿದ್ದ ಮಜ್ಜಿಗೆ ಮುದ ನೀಡಿದೆ. ಬೆಳಗ್ಗೆ ಉಪ್ಪಿಟ್ಟು, ಅವಲಕ್ಕಿ, ಶಿರಾ, ಚಾ ಹಾಗೂ ಕಾಫಿ, ಮಧ್ಯಾಹ್ನ ಊಟಕ್ಕೆ ಉಪ್ಪಿನಕಾಯಿ, ಕಡ್ಲೆ-ತೊಂಡೆ ಪಲ್ಯ, ಟೊಮೆಟೋ ಸಾರು, ಬದನೆ ಸಾಂಬಾರು, ಸೌತೆಕಾಯಿ ಹುಳಿ, ಅನ್ನ, ಕಡ್ಲೆಬೇಳೆ-ಸಾಗಕ್ಕಿ ಪಾಯಸ, ಕಡಿ, ಮಜ್ಜಿಗೆ, ಸಂಜೆಯ ವೇಳೆ ಚಟ್ಟಂಬಡೆ, ಚಾ, ಕಾಫಿ ನೀಡಲಾಯಿತು. ಸರಕಾರದಿಂದ ಭಾಷೆ ರಕ್ಷಣೆಯ ನಾಟಕ
ಪ್ರಸ್ತುತ ದಿನಗಳಲ್ಲಿ ಸರಕಾರವೇ ಸಾವಿರಾರು ಆಂಗ್ಲ ಮಾಧ್ಯಮ ಶಾಲೆ ಗಳಿಗೆ ಅನುಮತಿ ಕೊಟ್ಟು ಭಾಷೆಯ ರಕ್ಷಣೆಯ ನಾಟಕವಾಡುತ್ತಿದೆ. ಹೀಗಾಗಿ ರಾಜಕಾರಣಿಗಳಿಂದ ಭಾಷೆಯ ಕುರಿತು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವುದು ಕಷ್ಟ. ಕನ್ನಡವು ಶಾಸ್ತ್ರೀಯ ಭಾಷೆಯಾಗಿದ್ದು, ಆಗ ಇತ್ತೀಚೆಗೆ ಬಂದ ಭಾಷೆಗಳು ಅದಕ್ಕೆ ಸವಾಲಾಗಿ ಪರಿಣಮಿಸಿವೆ.
– ಪ್ರೊ| ತುಕಾರಾಮ ಪೂಜಾರಿ, ಅಧ್ಯಕ್ಷರು
ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಬಂಟ್ವಾಳ