Advertisement

ಬೆಳ್ತಂಗಡಿ: ಸರಳ ಗೌರಿ ಗಣೇಶ ಹಬ್ಬ ಆಚರಣೆ ಸಂಭ್ರಮ

10:40 PM Aug 21, 2020 | mahesh |

ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಆ. 21ರಂದು ಮಹಿಳೆ ಯರು ಗೌರಿ ದೇವಿಯನ್ನು ಪೂಜಿಸಿ ಸುಖ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಮುತ್ತೈದೆಯರಿಗೆ ಬಾಗಿನ ಅರ್ಪಣೆ ಸಹಿತ ಸಿಹಿತಿಂಡಿ, ಅರಸಿನ- ಕುಂಕುಮ, ಬಳೆ ಕೊಡುವ ಮೂಲಕ ಸಂಪ್ರದಾಯ ಪಾಲಿಸಿದರು. ಹೆಚ್ಚಿನ ಮಂದಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು. ಹೂವಿನ ಮಾರುಕಟ್ಟೆ ಸಹಿತ ಹಣ್ಣು ಹಂಪಲು ಮಾರಾಟಗಾರರು ಬೆಳಗ್ಗೆಯಿಂದಲೇ ಮಾರಾಟದಲ್ಲಿ ನಿರತರಾಗಿದ್ದರು. ಹಾಸನ, ಅರಕಲಗೂಡು ಸಹಿತ ವಿವಿಧೆಡೆಗಳಿಂದ ಕಬ್ಬು, ವಿವಿಧ ಬಗೆಯ ಹೂ ಮಾರಾಟಕ್ಕಾಗಿ ಮಾರಾಟಗಾರರು ತಾಲೂಕಿಗೆ ಆಗಮಿಸಿದ್ದಾರೆ. ಕೊರೊನಾ ಹಿನ್ನೆಲೆ ಸರಳ ಆಚರಣೆಗೆ ಮುಂದಾಗಿದ್ದರಿಂದ ಹೂ ಖರೀದಿ ಹಿಂದಿನಂತಿಲ್ಲ. ಮಳೆಯಿಂದಾಗಿ ಹೂವನ್ನು ಸಂರಕ್ಷಿಸುವುದು ಸವಾಲಾಗಿದೆ ಎಂದು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

Advertisement

ಗೌರಿಹಬ್ಬ ಆಚರಣೆ
ಮುಂಡಾಜೆ: ಬೆಳ್ತಂಗಡಿ ತಾ| ನ ಮುಂಡಾಜೆ ಹಾಗೂ ಆಸುಪಾಸಿನ ಪ್ರದೇಶಗಳ ದೇವಸ್ಥಾನ ಮತ್ತು ಮನೆಗಳಲ್ಲಿ ಶುಕ್ರವಾರ ಗೌರಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಈ ಹಿಂದಿನ ವರ್ಷಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಕುಟುಂಬಿಕರು ಹಾಗೂ ಅಕ್ಕಪಕ್ಕದ ಮನೆಯವರು ಒಂದೆಡೆ ಸೇರಿ ಗೌರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಈ ಬಾರಿ ಕೊರೊನಾ ಮುನ್ನೆಚ್ಚರಿಕೆ ಕಾರಣ ಹೆಚ್ಚಿನವರು ಅವರವರ ಮನೆಗಳಲ್ಲಿ ಹಬ್ಬವನ್ನು ಪೂಜೆಗೆ ಸೀಮಿತಗೊಳಿಸಿ ಆಚರಿಸಿದರು. ಕೆಲವು ಕಡೆ ಗೌರಿಯ ವಿಗ್ರಹವನ್ನಿಟ್ಟು ಹಾಗೂ ಇನ್ನು ಕೆಲವು ಕಡೆ ಕಲಶಗಳನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ನೆರವೇರಿಸಲಾಯಿತು.

ಬೇಡಿಕೆ ಇಲ್ಲ
ಈ ವರ್ಷ ಗೌರಿ ಗಣೇಶ  ಆಚರಣೆಗೆ ಹೂವಿಗೆ ನಿರೀಕ್ಷಿತ  ಬೇಡಿಕೆ ಇಲ್ಲ. 6 ಮಂದಿ ಸೇರಿ 20 ಬುಟ್ಟಿ ಹೂ ತಂದಿದ್ದೇವೆ.
-ಚಂದ್ರೇಗೌಡ ಗೊರೂರು, ಹೂವಿನ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next