Advertisement

Belthangady ಕೋಳಿ ಅಂಕಕ್ಕೆ ದಾಳಿ, 8 ಮಂದಿ ಸಹಿತ ಸೊತ್ತು ವಶ

09:54 PM Sep 17, 2023 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಪಟ್ಟೂರು ವಲಸರಿ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದಾಗ, ಧರ್ಮಸ್ಥಳ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರು ಹಾಗೂ ಸಿಬಂದಿಗಳು ದಾಳಿ ನಡೆಸಿದ್ದಾರೆ.

Advertisement

ಕೋಳಿ ಅಂಕದಲ್ಲಿ ನಿರತರಾಗಿದ್ದ ಸತೀಶ, ಜಿತೇಂದ್ರ, ಶೀನ ಮುಗೇರ, ಅಣ್ಣು, ಶ್ರೀಧರ, ಮನೋಜ ಕುಮಾರ್‌, ಸತೀಶ್‌, ಸುಧಾಕರ ಎಂಬ ಹೆಸರಿನ 8 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ವಶದಿಂದ ಒಟ್ಟು 2,350 ರೂ. ನಗದು, 4 ಕೋಳಿ, 2 ಕೋಳಿ ಬಾಲುಗಳು, ಒಂದು ಓಮಿನಿ ಕಾರು, ಎರಡು ದ್ವಿಚಕ್ರ ವಾಹನಗಳನ್ನು ಸ್ವಾಧೀನ ಪಡೆಸಿಕೊಂಡಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next