Advertisement
ಇತ್ತೀಚೆಗೆ ಉಸ್ತುವಾರಿ ಸಚಿವರು ಒಟಿಪಿ ರಹಿತ ವಾಗಿಯೂ ಪಡಿತರ ವಿತರಣೆ ಮಾಡಬೇಕು ಎಂದರೂ ನೀಡದಿರುವ ಪರಿಣಾಮ ತಾಲೂಕಿನಾದ್ಯಂತ ಜನ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಬಂದೊದಗಿತ್ತು. ಇದನ್ನು ಮನಗಂಡು ಶಾಸಕ ಹರೀಶ್ ಪೂಂಜ ಗುರು ವಾರ ಉಜಿರೆ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರ ಸಮಸ್ಯೆ ಆಲಿಸಿ, ಸರ್ವರ್ ಸಮಸ್ಯೆಯಿಂದ ಒಟಿಪಿ ತಡವಾದರೆ ಗ್ರಾಹಕರ ಸಹಿ ಪಡೆದು ಶೀಘ್ರ ವಿತರಣೆಗೆ ಮುಂದಾಗಬೇಕು ಎಂದು ಸಿಬಂದಿಗೆ ಸೂಚಿಸಿದರು. ಪಿಡಿಒ ಪ್ರಕಾಶ್ ನೊಚ್ಚ ಮತ್ತಿತರರು ಶಾಸಕರ ಭಾಗವಹಿಸಿದ್ದರು.
ತಾಲೂಕಿನಲ್ಲಿ ಈಗಾಗಲೆ 19,000 ಕ್ವಿಂಟಾಲ್ ಕುಚ್ಚಿಲು ಅಕ್ಕಿ ದಾಸ್ತಾನು ಇರಿಸಲಾಗಿದೆ. 66 ಪಡಿತರ ಅಂಗಡಿಗಳಲ್ಲಿ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ಪಡಿತರರಿಗೆ 5 ಕೆಜಿಯಂತೆ ವಿತರಿಸಲಾಗುತ್ತಿದೆ. ಉಳಿದಂತೆ ಈವರೆಗೆ 32,000 ಮಂದಿ ಪಡಿತರರಿಗೆ 13,000 ಕ್ವಿಂಟಾಲ್ ಇತರ ಪಡಿತರ ಅಕ್ಕಿ ವಿತರಣೆ ಮಾಡಲಾಗಿದೆ ಎಂದು ಆಹಾರ ಇಲಾಖೆ ನಿರೀಕ್ಷಕ ವಿಶ್ವ ಕೆ. ತಿಳಿಸಿದ್ದಾರೆ.